More

    ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಮುಂಬೈ ಡಾನ್​ ಕರೀಮ್​ ಲಾಲ್​ರನ್ನು ಭೇಟಿಯಾಗಿದ್ದರು: ಸಂಜಯ್​ ರಾವತ್​

    ಮುಂಬೈ: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಮುಂಬೈ ಡಾನ್​ ಕರೀಮ್​ ಲಾಲ್​ರನ್ನು ಭೇಟಿ ಮಾಡಿದ್ದರು ಎಂದು ಸ್ಥಳೀಯ ಮರಾಠಿ ಮಾಧ್ಯಮ ಸಂದರ್ಶನದಲ್ಲಿ ಶಿವಸೇನಾ ಸಂಸದ ಸಂಜಯ್​ ರಾವತ್​ ನೀಡಿರುವ ಹೇಳಿಕೆ ಇದೀಗ ಭಾರಿ ವಿವಾದ ಸೃಷ್ಟಿಸಿದೆ.

    ಶಿವಸೇನಾ ನೇತೃತ್ವದ ಮಹಾ ವಿಕಾಸ್​ ಅಘಾಡಿಯ ಮೈತ್ರಿ ಪಕ್ಷವಾಗಿರುವ ಕಾಂಗ್ರೆಸ್​ ವಿರುದ್ಧವೇ ಈ ರೀತಿಯ ಹೇಳಿಕೆ ನೀಡಿರುವುದು ಮುಂದೆ ಇದು ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬ ಕುತೂಹಲ ಮನೆ ಮಾಡಿದೆ.

    ಈ ಹಿಂದೆ ಮುಂಬೈ ಮೇಲಿದ್ದ ಅಂಡರ್​ವರ್ಲ್ಡ್ ಪ್ರಭಾವ ಕುರಿತು ಮಾತನಾಡುವಾಗ ಸಂಜಯ್​ ಈ ಹೇಳಿಕೆ ನೀಡಿದ್ದಾರೆ. ಮುಂಬೈ ನಗರ ಆಯುಕ್ತ ಯಾರಾಗಬೇಕು? ಮತ್ತು ರಾಜ್ಯ ಸಚಿವಾಲಯ ಯಾರಾಗಬೇಕೆಂದು ಅಂಡರ್​ವರ್ಲ್ಡ್​ ನಿರ್ಧಾರ ಮಾಡುತ್ತಿತ್ತು. ಇಡೀ ಸಚಿವಾಲಯವೇ ಡಾನ್​ ಹಾಜಿ ಮಸ್ತಾನ್​ ನಗರದಲ್ಲಿದ್ದಾಗ ಭೇಟಿಯಾಗುತ್ತಿತ್ತು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ದಕ್ಷಿಣ ಮುಂಬೈನಲ್ಲಿ ಡಾನ್​ ಕರೀಮ್​ ಲಾಲ್​ರನ್ನು ಭೇಟಿಯಾಗಿದ್ದರು ಎಂಬ ಆತಂಕಕಾರಿ ಮಾಹಿತಿಗಳನ್ನು ಸಂಜಯ್​ ರಾವತ್​ ಬಿಚ್ಚಿಟ್ಟಿದ್ದಾರೆ. ಆದರೆ, ಈವರೆಗೂ ಕಾಂಗ್ರೆಸ್​ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಮುಂಬೈ ಅಂಡರ್​ವರ್ಲ್ಡ್​ನ ಪ್ರಮುಖ ಮೂರು ಡಾನ್​ಗಳಲ್ಲಿ ಒಬ್ಬನಾಗಿದ್ದ ಕರೀಮ್​ ಲಾಲ್​, ಎರಡು ದಶಕಗಳವರೆಗೆ ತನ್ನ ಭೂಗತ ಚಟುವಟಿಕೆಗಳನ್ನು ನಡೆಸಿದ್ದ. 1960 ಮತ್ತು 80 ಸಮಯದಲ್ಲಿ ಇನ್ನಿಬ್ಬರು ಡಾನ್​ಗಳಾದ ಮಸ್ತಾನ್​ ಮಿಜ್ರಾ ಅಲಿಯಾಸ್​ ಹಾಜಿ ಮಸ್ತಾನ್​ ಮತ್ತು ವರದರಾಜನ್​ ಮೂದಲಿಯಾರ್​ ಡಾನ್​ಗಳಾಗಿದ್ದರು. ಭೂಗತ ದೊರೆ ದಾವೂದ್​ ಇಬ್ರಾಹಿಂ ಸೇರಿದಂತೆ ಅನೇಕ ಗ್ಯಾಂಗ್​ಸ್ಟರ್​ ಫೋಟೋಗಳನ್ನು ತೆಗೆದಿರುವುದಾಗಿ ಸಂಜಯ್​ ರಾವತ್​ ತಿಳಿಸಿದ್ದಾರೆ. ಆಕಸ್ಮಿಕವೆಂಬಂತೆ 1960ರಲ್ಲಿ ಸ್ಥಾಪನೆಯಾದ ಶಿವಸೇನಾ 1985ರಿಂದ ಅಧಿಕಾರವನ್ನು ಅನುಭವಿಸುತ್ತಾ ಬಂದಿದೆ.

    ಸಂಪುಟ ವಿಸ್ತರಣೆ ಬೆನ್ನಲ್ಲೇ ಹೇಳಿಕೆ
    ಶಿವಸೇನಾ-ಎನ್​ಸಿಪಿ-ಕಾಂಗ್ರೆಸ್​ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಂಜಯ್​ ರಾವತ್​ ಈ ಹೇಳಿಕೆ ನೀಡಿದ್ದಾರೆ. ಅಂದಹಾಗೆ ಸಂಜಯ್​ಗೆ ಸಂಪುಟ ವಿಸ್ತರಣೆ ಬಗ್ಗೆ ಅಸಮಧಾನವಿದೆಯಂತೆ. ಸಂಪುಟದಲ್ಲಿ ಸಂಜಯ್​ ಸಹೋದರ ಸನಿಲ್​ ರಾವತ್​ಗೆ ಸ್ಥಾನ ಸಿಗದಿದ್ದರಿಂದ ಅಸಮಾಧಾನಗೊಂಡಿದ್ದಾರೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts