More

    ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಪೈಪೋಟಿ: ಹೈವೋಲ್ಟೇಜ್ ಕಣದಲ್ಲಿ ಸಲ್ಲಿಕೆಯಾದ ನಾಮಪತ್ರ ಎಷ್ಟು ಗೊತ್ತಾ?

    ಮಂಡ್ಯ: ರಾಜ್ಯದಲ್ಲಿ ಹೈವೋಲ್ಟೇಜ್ ಕ್ಷೇತ್ರ ಎನ್ನಿಸಿಕೊಂಡಿರುವ ಮಂಡ್ಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಬರೋಬರಿ 27 ಅಭ್ಯರ್ಥಿಗಳು 37 ನಾಮಪತ್ರ ಸಲ್ಲಿಸಿದ್ದಾರೆ.
    ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ನಾಲ್ಕು, ಜೆಡಿಎಸ್ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಮತ್ತು
    ಬಿಎಸ್ಪಿ ಅಭ್ಯರ್ಥಿ ಎಸ್.ಶಿವಶಂಕರ್ ತಲಾ ಮೂರು ನಾಮಪತ್ರ ಸಲ್ಲಿಸಿದ್ದಾರೆ. ಕೆಆರ್‌ಎಸ್ ಪಾರ್ಟಿಯಿಂದ ಕೆ.ಆರ್.ಚಂದ್ರಶೇಖರ್, ಪಕ್ಷೇತರ ಅಭ್ಯರ್ಥಿಗಳಾದ ಶಿವನಂಜಪ್ಪ ಮತ್ತು ಎಲ್.ಡಿ.ನಂದೀಶ್ ತಲಾ ಎರಡು ಉಮೇದುವಾರಿಕೆ ಸಲ್ಲಿಕೆ ಮಾಡಿದ್ದಾರೆ.
    ಕರುನಾಡ ಪಾರ್ಟಿಯಿಂದ ಬೂದಯ್ಯ, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಎಸ್.ಲೋಕೇಶ್, ಲೋಕಶಕ್ತಿಯಿಂದ ಬಸವರಾಜು, ಪೂರ್ವಾಂಚಲ್ ಮಹಾ ಪಂಚಾಯತ್ ಪಾರ್ಟಿಯಿಂದ ಎಚ್.ಡಿ.ರೇವಣ್ಣ, ಅಖಿಲ ಭಾರತ್ ಹಿಂದು ಮಹಾಸಭಾದಿಂದ ಎನ್.ರಂಜಿತಾ, ಪಕ್ಷೇತರ ಅಭ್ಯರ್ಥಿಗಳಾಗಿ ಯೋಗೇಶ್, ಸಿ.ಟಿ.ಬೀರೇಶ್, ಎಚ್.ನಾರಾಯಣ, ಚನ್ನಮಾಯೀಗೌಡ, ಚಿಕ್ಕನಂಜಾಚಾರಿ, ಶಂಭುಲಿಂಗೇಗೌಡ, ಸತೀಶ್ ಕುಮಾರ್, ಕೃಷ್ಣ, ಅರುಣ್‌ಕುಮಾರ್, ಲೋಲ, ಡಿ.ರಾಮಯ್ಯ, ಕೆ.ಶಿವಾನಂದ, ಕೆ.ಚಂದನ್‌ಗೌಡ, ಚಿಕ್ಕಯ್ಯ, ಅರವಿಂದ್, ಎಂ.ಇಂದುಕುಮಾರ್ ಉಮೇದುವಾರಿಕೆ ಸಲ್ಲಿಕೆ ಮಾಡಿದ್ದಾರೆ.
    ಇದರೊಂದಿಗೆ ನಾಮಪತ್ರ ಸಲ್ಲಿಸುವ ಅವಧಿ ಮುಗಿದಿದೆ. ಏ.5ರಂದು ಪರಿಶೀಲನೆ ನಡೆಯಲಿದೆ. ಏ.8ರೊಳಗೆ ನಾಮಪತ್ರ ಹಿಂಪಡೆಯಲು ಅವಕಾಶ ನೀಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts