More

    ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ವಿಧಿವಶ

    ರಾಮನಗರ: ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ, ಮಾಜಿ ಭೂಗತ ದೊರೆ ಮುತ್ತಪ್ಪ ರೈ ಗುರುವಾರ ತಡರಾತ್ರಿ ನಿಧನರಾಗಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮುತ್ತಪ್ಪ ರೈ ಅವರನ್ನು ತೀವ್ರ ಅನಾರೋಗ್ಯದ ಕಾರಣ ಬೆಂಗಳೂರಿನ ಆಸ್ಪತ್ರೆಗೆ ಎರಡು ದಿನಗಳ‌ ಹಿಂದೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಶುಕ್ರವಾರ ನಸುಕಿನ ೨ ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ.

    ಇದನ್ನೂ ಓದಿ: ನನಗೆ ಕ್ಯಾನ್ಸರ್ ಇದೆ.. ಸಾವಿನ ಹತ್ತಿರದಲ್ಲೇ ಇದ್ದೇನೆ…

    ಅವರಿಗೆ ಇಬ್ಬರು ಪುತ್ರರು(ರಾಖಿ ಮತ್ತು ರಿಕ್ಕಿ), ಮೂವರು ಸಹೋದರರು ಮತ್ತು ಒಬ್ಬ ಸಹೋದರಿ ಇದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಮೂಲದವರಾದ ಅವರು ತುಳು ಭಾಷಿಕ ಬಂಟ ಸಮುದಾಯದವರು. ನೆಟ್ಟಲ ನಾರಾಯಣ ರೈ ಮತ್ತು ಸುಶೀಲಾ ರೈ ದಂಪತಿಯ ಪುತ್ರ. ಪುತ್ತೂರಿನಲ್ಲಿ ಪದವಿ ಶಿಕ್ಷಣ ಪಡೆದ ಅವರು ಬಳಿಕ ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿದ್ದರು. ನಂತರ ಭೂಗತ ಲೋಕದ ಸಂಪರ್ಕಕ್ಕೆ ಬಂದು ಭೂಗತ ಲೋಕದಲ್ಲಿ ಮೆರೆದರು.  ಪತ್ನಿ ರೇಖಾ ಸಿಂಗಾಪುರದಲ್ಲಿ 2013ರಲ್ಲಿ ನಿಧನರಾಗಿದ್ದರು.  ಒಂದು ಕಾಲದಲ್ಲಿ ಭೂಗತ ದೊರೆಯಾಗಿ ಮೆರೆದಿದ್ದ ರೈ ಬಳಿಕ ಸಮಾಜ ಸೇವಕನಾಗಿ ಸಮುದಾಯದ ನಡುವೆ ಕಾಣಿಸಿಕೊಂಡು ಜಯ ಕರ್ನಾಟಕ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದವರು. ಅವರ ವಿರುದ್ಧ ಸಾಕಷ್ಟು ಕೇಸುಗಳಿದ್ದರೂ, ಪುರಾವೆಗಳು ಇಲ್ಲದ ಕಾರಣ ಭದ್ರತಾ ಸಂಸ್ಥೆಗಳಿಗೆ ಏನೂ ಮಾಡಲಾಗಲಿಲ್ಲ.

    ಇದನ್ನೂ ಓದಿ: ಉದ್ಯಮಿಯ ಹತ್ಯೆಗೆ ಸ್ಕೆಚ್ ಹಾಕಿದ್ರಾ ‘ಸಮಾಜ ಸೇವಕ’ ಮುತ್ತಪ್ಪ ರೈ?

    ರಾಮನಗರ ತಾಲೂಕು ಬಿಡದಿಯಲ್ಲಿರುವ ಸ್ವ ಗೃಹದಲ್ಲಿ ಶುಕ್ರವಾರ ಮಧ್ಯಾಹ್ನ ಎರಡು ಗಂಟೆಗೆ ಅಂತ್ಯ ಕ್ರಿಯೆ ನಡೆಯಲಿದ್ದು, ಕೇವಲ ಕುಟಂಬ ಸದಸ್ಯರು ಮಾತ್ರ ಪಾಲ್ಗೊಳ್ಳಲಿದ್ದಾರೆ. ಅವರ ಅಭಿಮಾನಿಗಳು ಸಹಕರಿಸಬೇಕು ಎಂದು ಅವರ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.

    ಮುತ್ತಪ್ಪ ರೈ ಅವರನ್ನು ಎರಡು ತಾಸು ವಿಚಾರಣೆಗೆ ಒಳಪಡಿಸಿದ ಸಿಸಿಬಿ ಪೊಲೀಸರು: ಯಾಕೆ ರೈ ಏನು ಮಾಡಿದ್ರು?

    ಬಿಡದಿ ಮನೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮುತ್ತಪ್ಪ ರೈ ಕ್ರಿಕೆಟಿಗ ಯುವರಾಜ್ ಸಿಂಗ್ ಅವರನ್ನೂ ನೆನಪಿಸಿಕೊಂಡು ಹೇಳಿದ್ದೇನು?!

    ಮುತ್ತಪ್ಪ ರೈ ಗನ್​ವ್ಯಾನ್​ಗಳ ವಿರುದ್ಧ ಕೇಸ್

    ಸಿಸಿಬಿ ವಿಚಾರಣೆಗೆ ಮುತ್ತಪ್ಪ ರೈ ಹಾಜರು

    ಮುತ್ತಪ್ಪ ರೈಗೆ ಸಿಸಿಬಿ ನೋಟಿಸ್

    ಕೆಎಎ ನೂತನ ಅಧ್ಯಕ್ಷ ಮುತ್ತಪ್ಪ ರೈ ಪದಗ್ರಹಣ

    ತೇಜೋವಧೆ ಮಾಡಿದವರ ವಿರುದ್ಧ ಮೊಕದ್ದಮೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts