More

    ಮುತ್ತಪ್ಪ ರೈ ಅವರನ್ನು ಎರಡು ತಾಸು ವಿಚಾರಣೆಗೆ ಒಳಪಡಿಸಿದ ಸಿಸಿಬಿ ಪೊಲೀಸರು: ಯಾಕೆ ರೈ ಏನು ಮಾಡಿದ್ರು?

    ಬೆಂಗಳೂರು: ದಕ್ಷಿಣ ಆಫ್ರಿಕಾದಲ್ಲಿ ಬಂಧಿತ ಭೂಗತ ಪಾತಕಿ ರವಿ ಪೂಜಾರಿ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಮಾಜಿ ಭೂಗತ ಪಾತಕಿ ಮುತ್ತಪ್ಪ ರೈನನ್ನು ವಿಚಾರಣೆ ನಡೆಸಿದ್ದಾರೆ.

    ರವಿ‌ ಪೂಜಾರಿಯನ್ನು ಬೆಂಗಳೂರಿಗೆ ಕರೆತಂದ ಪೊಲೀಸರು, ಆರಂಭದಲ್ಲಿಯೇ ಮುತ್ತಪ್ಪ ರೈಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಆದರೆ, ಮುತಪ್ಪ ರೈ ಅನಾರೋಗ್ಯ ಕಾರಣ ವೇಳೆ ತನ್ನ ವಕೀಲರ ಮೂಲಕ ಸಮಯ ತೆಗೆದುಕೊಂಡಿದ್ದರು. ಇದೀಗ ಸಿಸಿಬಿಯ ಎಸಿಪಿ ವೇಣುಗೋಪಾಲ್ ಮತ್ತು ಇನ್ಸ್‌ಪೆಕ್ಟರ್ ಬೋಲೆತೀನ್ ನೇತೃತ್ವದ ತಂಡ ಬಿಡದಿಯ ಮನೆಗೆ ಹೋಗಿ ಮುತ್ತಪ್ಪ ರೈ ಅವರನ್ನು ಎರಡು ತಾಸು ವಿಚಾರಣೆ ನಡೆಸಿದ್ದಾರೆ.

    ಸೆನೆಗಲ್ ದೇಶದಲ್ಲಿ ಅಡಗಿಗೊಂಡು ರವಿ ಪೂಜಾರಿ ಕರ್ನಾಟಕ ಸೇರಿ ದೇಶದ ಗಣ್ಯರಿಗೆ, ಉದ್ಯಮಿಗಳಿಗೆ ಬೆದರಿಕೆ ಒಡ್ಡಿ ಹಫ್ತಾ ವಸೂಲಿ ಮಾಡುತ್ತಿದ್ದ. ಹಣ ಕೊಡದೆ ಹೋದರೆ ಕೊಲೆ, ಕೊಲೆ‌ಯತ್ನ ಮಾಡಿಸುತ್ತಿದ್ದ. ರಾಜ್ಯದಲ್ಲಿಯೇ 94 ಪ್ರಕರಣಗಳು ದಾಖಲಾಗಿವೆ. ಈ ಎಲ್ಲ ಪ್ರಕರಣಗಳ ವಿಚಾರಣೆಯನ್ನು ಸಿಸಿಬಿ ಪೊಲೀಸರಿಗೆ ವಹಿಸಲಾಗಿತ್ತು. ಸಿಸಿಬಿಯ ಎಸಿಪಿ ವೇಣುಗೋಪಾಲ್ ತನಿಖೆ‌ ಮುಂದುವರೆಸಿದ್ದಾರೆ.

    VIDEO: ಲಾಕ್​ಡೌನ್ ಪಾಲನೆಗೆ ಈ ರೀತಿ ಲಾಠಿ ಬೀಸುವ ಅಧಿಕಾರ ಆರೋಗ್ಯ ಇಲಾಖೆ ಅಧಿಕಾರಿಗೂ ಇದೆಯಾ?

    ಮದ್ಯಪ್ರಿಯರಿಗೊಂದು ಖುಷಿಯ ಸುದ್ದಿ- ನೈರೋಬಿಯ ಗವರ್ನರ್​ ಮೈಕ್ ಸೊನ್ಕೋ ಅಂಥವರು ಯಾರಾದರೂ ಭಾರತದಲ್ಲಿ ಇರಬಾರದಿತ್ತಾ? ಅಂತ ಬೇಡಿಕೊಳ್ಳಬೇಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts