VIDEO: ಲಾಕ್​ಡೌನ್ ಪಾಲನೆಗೆ ಈ ರೀತಿ ಲಾಠಿ ಬೀಸುವ ಅಧಿಕಾರ ಆರೋಗ್ಯ ಇಲಾಖೆ ಅಧಿಕಾರಿಗೂ ಇದೆಯಾ?

ಬೆಂಗಳೂರು: ಅನಗತ್ಯವಾಗಿ ರಸ್ತೆಯಲ್ಲಿ ತಿರುಗುತ್ತಿದ್ದ ಸಾರ್ವಜನಿಕರ ಮೇಲೆ ಹೊಸಕೋಟೆ ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ಬೆತ್ತದ ರುಚಿ ತೋರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೊಸಕೋಟೆಯ ಬೈಲನರಸಾಪುರ ಕೆಂಪುವಲಯವಾಗಿ ಗುರುತಿಸಿಕೊಂಡಿರುವುದರಿಂದ ಜಿಲ್ಲಾಡಳಿತ ಈ ಭಾಗದಲ್ಲಿ ಹೆಚ್ಚಿನ ನಿಗಾ ವಹಿಸಿದೆ. ಇಡೀ ಗ್ರಾಮ ಸೇರಿ ಸುತ್ತಮುತ್ತಲ ಪ್ರದೇಶಗಳಲ್ಲಿ ಲಾಕ್‌ಡೌನ್ ಬಿಗಿಗೊಳಿಸಲಾಗಿದೆ. ಹಗಲಿರುಳು ಪೊಲೀಸ್ ಸಿಬ್ಬಂದಿ ಪಹರೆ ತಿರುಗುತ್ತಿದ್ದರೂ ಕೆಲವರು ಅನವಶ್ಯಕವಾಗಿ ವಾಹನಗಳಲ್ಲಿ ತಿರುಗುತ್ತಿರುವುದನ್ನು ನೋಡಿದ ಆರೋಗ್ಯಾಧಿಕಾರಿ ಬೆತ್ತದ ರುಚಿ ತೋರಿಸಿದ್ದಾರೆ. ಪಾಸ್ ಇಲ್ಲದೆ, ಸಕಾರಣವೂ ಇಲ್ಲದೆ ಸಂಚರಿಸುತ್ತಿದ್ದ … Continue reading VIDEO: ಲಾಕ್​ಡೌನ್ ಪಾಲನೆಗೆ ಈ ರೀತಿ ಲಾಠಿ ಬೀಸುವ ಅಧಿಕಾರ ಆರೋಗ್ಯ ಇಲಾಖೆ ಅಧಿಕಾರಿಗೂ ಇದೆಯಾ?