More

    ಮದ್ಯಪ್ರಿಯರಿಗೊಂದು ಖುಷಿಯ ಸುದ್ದಿ- ನೈರೋಬಿಯ ಗವರ್ನರ್​ ಮೈಕ್ ಸೊನ್ಕೋ ಅಂಥವರು ಯಾರಾದರೂ ಭಾರತದಲ್ಲಿ ಇರಬಾರದಿತ್ತಾ? ಅಂತ ಬೇಡಿಕೊಳ್ಳಬೇಡಿ…

    ನೈರೋಬಿ: ಕೀನ್ಯಾದ ರಾಜಧಾನಿಯಾಗಿರುವ ನೈರೋಬಿಯಲ್ಲಿ ಮದ್ಯಪ್ರಿಯರಿಗೆ ಭಾರಿ ಖುಷಿಯನ್ನೇ ಕೊಟ್ಟುಬಿಡ್ತು ಅಲ್ಲಿನ ಗವರ್ನರ್ ಮೈಕ್ ಸೊನ್ಕೋ ಅವರ ಗಿಫ್ಟ್​! ಕರೊನಾ ವೈರಸ್ ಕೇರ್ ಪ್ಯಾಕೇಜ್​ ರೆಡಿ ಮಾಡೋದಕ್ಕೆ ಅವರಿಗೆ ಪ್ರೇರಣೆಯಾಗಿದ್ದು ಒಂದು ಫೇಕ್​ ಗೈಡ್​ಲೈನ್ಸ್​!

    ವಿಶ್ವ ಆರೋಗ್ಯ ಸಂಸ್ಥೆಯ ಹೆಸರಿನಲ್ಲಿ ಯಾರೋ ಕಿಡಿಗೇಡಿಗಳು ಪ್ರಕಟಿಸಿದ ನಕಲಿ ಮಾರ್ಗಸೂಚಿಯನ್ನೇ ಸತ್ಯವೆಂದು ನಂಬಿಬಿಟ್ಟಿದ್ದ ಮೈಕ್ ಸೊನ್ಕೊ ವಾಸ್ತವದಲ್ಲಿ ಒಬ್ಬ ಶೋಕಿಲಾಲನೂ ಹೌದು. ಮಂಗಳವಾರ ವಿಚಿತ್ರ ವೇಷ ಭೂಷಣದೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ ಆತ, ನಾವು ನಮ್ಮ ಬಡಜನರಿಗೆ ಫುಡ್​ ಪ್ಯಾಕೇಜ್​ ಜತೆಗೆ ಸಣ್ಣ ಸಣ್ಣ ಬಾಟಲಿಗಳಲ್ಲಿ ಹೆನ್ನೆಸ್ಸೆ ಕೊಗ್ನಾಕ್​ ಮದ್ಯದ ಬಾಟಲಿಗಳನ್ನೂ ನೀಡುತ್ತಿದ್ದೇವೆ ಎಂದು ಘೋಷಿಸಿದ.

    ಕೂಡಲೇ ಪತ್ರಕರ್ತರಿಂದ ಒಂದಷ್ಟು ಪ್ರಶ್ನೆಗಳು ಎದುರಾದವು. ಅದಕ್ಕೆ ಆತ ಹೇಳಿದ್ದಿಷ್ಟು- ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅನೇಕ ಆರೋಗ್ಯ ಸಂಸ್ಥೆಗಳು ನಡೆಸಿರುವ ಒಂದು ಸಂಶೋಧನೆ ಪ್ರಕಾರ ಕರೊನಾ ವೈರಸ್ ಅಥವಾ ಯಾವುದೇ ರೀತಿಯ ವೈರಸ್​ಗಳನ್ನು ಹೊಡೆದೋಡಿಸುವಲ್ಲಿ ಆಲ್ಕೋಹಾಲ್ ಪ್ರಮುಖ ಪಾತ್ರವಹಿಸುತ್ತದೆ ಎಂದು ನಾನು ಕೇಳಲ್ಪಟ್ಟಿದ್ದೇನೆ. ಹಾಗಾಗಿ ಈ ಬಾಟಲಿಗಳನ್ನು ಕೊಡ್ತಾ ಇದ್ದೇನೆ.

    ಪ್ಯಾಕೇಜ್​ನಲ್ಲಿ ಏನೇನಿದೆ ಅಂದರೆ, 4 ಪೌಂಡ್ ಸ್ಟೆರ್ಲಿಂಗ್(ಅಂದಾಜು 400 ರೂಪಾಯಿ) ಮೌಲ್ಯದ ಎರಡು ಔನ್ಸ್​ ಕೊಗ್ನಾಕ್​ ಮಿನಿಯೇಚರ್ ನ 5 ​ ಬಾಟಲಿ, ಪ್ರಮಾಣೀಕೃತ ಹ್ಯಾಂಡ್​ ಸ್ಯಾನಿಟೈಸರ್​, ಜೋಳ, ನ್ಯಾಪ್ಪೀಸ್, ಕ್ಲೀನಿಂಗ್ ಮತ್ತು ಮನೆ ಅಗತ್ಯದ ಇತರೆ ವಸ್ತುಗಳಿವೆ.

    ವಿಶ್ವ ಆರೋಗ್ಯ ಸಂಸ್ಥೆ ಆಲ್ಕೋಹಾಲ್ ಇರುವ ಹ್ಯಾಂಡ್​ ಸ್ಯಾನಿಟೈಸರ್ ಬಳಸಲು ಸೂಚಿಸಿದೆಯಾದರೂ, ಹೆನ್ನೆಸ್ಸೆ 80 ಪ್ರೂಫ್​ ಸ್ಪಿರಿಟ್ ಆಗಿರುವ ಕಾರಣ ಈ ಕೆಲಸಕ್ಕೆ ಯೋಗ್ಯವಲ್ಲ ಎಂದು ಆಫ್ರಿಕನ್​ ಮೆಡಿಕಲ್​ ಆ್ಯಂಡ್ ರಿಸರ್ಚ್​ ಫೌಂಡೇಷನ್​ ಸಿಇಒ ಗಿತಿಂಜಿ ಗಿತಾಹಿ ಹೇಳಿದ್ದಾರೆ. ಅಲ್ಲದೆ, ಸೊನ್ಕೋ ಹೇಳಿಕೆ ಮತ್ತು ನಡೆಯನ್ನು ಖಂಡಿಸಿದ್ದಾರೆ.

    ಕೀನ್ಯಾ ಸರ್ಕಾರ ಕಾಲ್ತುಳಿತ ತಪ್ಪಿಸುವ ಸಲುವಾಗಿ ಉಚಿತ ಆಹಾರ ವಿತರಣೆ ಮತ್ತು ನೇರವಾಗಿ ಜನರಿಗೆ ಧನ ಸಹಾಯ ಮಾಡುವುದನ್ನು ನಿಷೇಧಿಸಿದೆ. ಆದಾಗ್ಯೂ, ಸೊನ್ಕೊ ಪ್ರಚಾರಕ್ಕಾಗಿ ಈ ಕೆಲಸವನ್ನು ಮುಂದುವರಿಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸೊನ್ಕೊ ವಿರುದ್ಧ ಬಹು ಕೋಟಿ ಮೌಲ್ಯದ ಭ್ರಷ್ಟಾಚಾರದ ಪ್ರಕರಣವೂ ಇದ್ದು ವಿಚಾರಣೆಯ ಹಂತದಲ್ಲಿದೆ. (ಏಜೆನ್ಸೀಸ್)

    ಬೆಂಗಳೂರಿನಲ್ಲಿ ಡನ್ಜೋ ಸಂಸ್ಥೆ ಕಳೆದ ತಿಂಗಳು ಮನೆಮನೆಗೆ ತಲುಪಿಸಿದ ವಸ್ತುಗಳ ಪೈಕಿ ನಂ.1 ಯಾವುದು? ಕಾಂಡೋಮ್​ ಅಂತ ಅಂದ್ಕೊಂಡಿದ್ದೀರಾ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts