VIDEO: ಲಾಕ್​ಡೌನ್ ಪಾಲನೆಗೆ ಈ ರೀತಿ ಲಾಠಿ ಬೀಸುವ ಅಧಿಕಾರ ಆರೋಗ್ಯ ಇಲಾಖೆ ಅಧಿಕಾರಿಗೂ ಇದೆಯಾ?

Health Official lathi 16 APR 20
Published on

ಬೆಂಗಳೂರು: ಅನಗತ್ಯವಾಗಿ ರಸ್ತೆಯಲ್ಲಿ ತಿರುಗುತ್ತಿದ್ದ ಸಾರ್ವಜನಿಕರ ಮೇಲೆ ಹೊಸಕೋಟೆ ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ಬೆತ್ತದ ರುಚಿ ತೋರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹೊಸಕೋಟೆಯ ಬೈಲನರಸಾಪುರ ಕೆಂಪುವಲಯವಾಗಿ ಗುರುತಿಸಿಕೊಂಡಿರುವುದರಿಂದ ಜಿಲ್ಲಾಡಳಿತ ಈ ಭಾಗದಲ್ಲಿ ಹೆಚ್ಚಿನ ನಿಗಾ ವಹಿಸಿದೆ. ಇಡೀ ಗ್ರಾಮ ಸೇರಿ ಸುತ್ತಮುತ್ತಲ ಪ್ರದೇಶಗಳಲ್ಲಿ ಲಾಕ್‌ಡೌನ್ ಬಿಗಿಗೊಳಿಸಲಾಗಿದೆ.

ಹಗಲಿರುಳು ಪೊಲೀಸ್ ಸಿಬ್ಬಂದಿ ಪಹರೆ ತಿರುಗುತ್ತಿದ್ದರೂ ಕೆಲವರು ಅನವಶ್ಯಕವಾಗಿ ವಾಹನಗಳಲ್ಲಿ ತಿರುಗುತ್ತಿರುವುದನ್ನು ನೋಡಿದ ಆರೋಗ್ಯಾಧಿಕಾರಿ ಬೆತ್ತದ ರುಚಿ ತೋರಿಸಿದ್ದಾರೆ. ಪಾಸ್ ಇಲ್ಲದೆ, ಸಕಾರಣವೂ ಇಲ್ಲದೆ ಸಂಚರಿಸುತ್ತಿದ್ದ ಕೆಲವು ಸಾರ್ವಜನಿಕರ ವಾಹನಗಳನ್ನು ಪಂಕ್ಚರ್ ಮಾಡಿದ್ದಾರೆ. ಅಧಿಕಾರಿಯ ಕ್ರಮಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಮತ್ತೆ ಅನೇಕರು ಅಧಿಕಾರಿ ಲಾಠಿ ಹಿಡಿದ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net