More

    ಈ ದೇವಸ್ಥಾನಕ್ಕೆ ವಿಗ್ರಹ ನೀಡಿದ್ದು ಅಸ್ಲಾಂ ಕುಟುಂಬ! ಹಿಂದು-ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾದ ಆನೇಕಲ್

    ಆನೇಕಲ್: ಆಗಾಗ ಕೋಮಿನ ಹೆಸರಲ್ಲಿ ನಡೆಯುವ ಸಂಘರ್ಷಗಳ ನಡುವೆಯೂ ಇಲ್ಲೊಂದು ಸೌಹಾರ್ದತೆ ಮೆರೆವ ಕಥೆ ಪತ್ತೆಯಾಗಿದೆ. ಈ ಕುಟುಂಬದವರು ದೇವಸ್ಥಾನಕ್ಕೆ ವಿಗ್ರಹಗಳನ್ನು ನೀಡಿದ್ಧು ಹಿಂದೂಗಳ ಮೆಚ್ಚುಗೆಗೆ ಪಾತ್ರವಾಗಿದ್ಧಾರೆ.ಈ ಮೂಲಕ ಸೌಹರ್ದಯುತ ಬಾಂಧವ್ಯಕ್ಕೆ ಸಾಕ್ಷಿಯಾಗಿದ್ಧಾರೆ.

    ಈ ಘಟನೆ ನಡೆದಿರುವುದು ಬೆಂಗಳೂರಿನ ಹೊರವಲಯದಲ್ಲಿರುವ ಆನೇಕಲ್​ನಲ್ಲಿ. ಆನೇಕಲ್ ಪಟ್ಟಣದ ಜಗದ್ಗುರು ಶ್ರೀ ಭಗವದ್ರಾಮಾನುಜಾರ್ಚಾಯರ ಸನ್ನಿಧಿಯಲ್ಲಿ ಅರ್ಚಕರಾದ ಯತಿರಾಜ್ ಅವರಿಗೆ ಮುಸ್ಲಿಂ ಕುಟುಂಬ ವಿಗ್ರಹ ಹಸ್ತಾಂತರ ಮಾಡಿದೆ.

    ಇದನ್ನೂ ಓದಿ: ಹಿಂದು ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ಯುವಕ! ಕಾರಣ ಹೀಗಿದೆ….

    ಪಟ್ಟಣದ ಜಗದ್ಗುರು ಶ್ರೀ ಭಗವದ್ರಾಮಾನುಜಾರ್ಚಾಯರ ಸನ್ನಿಧಿಯ ಅರ್ಚಕರಾದ ಯತಿರಾಜ್ ಅವರಿಗೆ ಮುಸ್ಲಿಂ ಭಾಂದವರಾದ ಅಸ್ಲಾಂ ಕುಟುಂಬ ಶ್ರೀದೇವಿ, ಭೂದೇವಿ ಸಮೇತವಾಗಿ ಶ್ರೀನಿವಾಸ ಸ್ವಾಮಿಯ ವಿಗ್ರಹವನ್ನ ಕಾಣಿಕೆಯಾಗಿ ನೀಡಿದ್ದಾರೆ.

    ಈ ದೇವಸ್ಥಾನಕ್ಕೆ ವಿಗ್ರಹ ನೀಡಿದ್ದು ಅಸ್ಲಾಂ ಕುಟುಂಬ! ಹಿಂದು-ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾದ ಆನೇಕಲ್

    ಇದನ್ನೂ ಓದಿ: ಹಿಂದು ಯುವಕರಿಂದ ಇಫ್ತಿಯಾರ್ ಆಯೋಜನೆ

    ಹಲವು ವರ್ಷಗಳಿಂದ ಭಕ್ತರ ಕೋರಿಕೆ ಮೇರೆಗೆ ಜನರು ಇಚ್ಛೆ ಪಟ್ಟ ಸ್ಥಳದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವವನ್ನ ಜರುಗಿಸಿ ಕೊಡಲು ಅರ್ಚಕರಾದ ಯತಿರಾಜ್ ಅವರು ಕನಕಪುರ ತಾಲೂಕಿನ ಕಲ್ಲಹಳ್ಳಿಯಲ್ಲಿನ ಶ್ರೀನಿವಾಸ ಸ್ವಾಮಿ ದೇವಸ್ಥಾನದಿಂದ ಉತ್ಸವ ಮೂರ್ತಿ‌ ಸ್ವಾಮಿಯ ವಿಗ್ರಹವನ್ನ ತೆಗೆದುಕೊಂಡು ಬರಲು ಅಸ್ಲಾಂ ಅವರ ಕಾರಿನಲ್ಲಿಯೇ ತೆರಳುತ್ತಿದ್ದರು. ಪುರೋಹಿತರಾದ ಯತಿರಾಜ್ ಅವರು ಶ್ರೀನಿವಾಸ ಕಲ್ಯಾಣೋತ್ಸವ ಜರುಗಿಸಲು ಸ್ವಾಮಿಯ ವಿಗ್ರಹಕ್ಕೆ ನೂರಾರು ಕಿಲೋಮೀಟರ್ ಹೋಗುತ್ತಿದ್ದನ್ನ ಕಂಡು ಅಸ್ಲಾಂ ಮತ್ತವರ ಕುಟುಂಬ ಶ್ರೀನಿವಾಸ ಸ್ವಾಮಿಯ ವಿಗ್ರಹವನ್ನ ಉಡುಗೊರೆಯಾಗಿ ನೀಡಿದ್ದಾರೆ.

    ಇದನ್ನೂ ಓದಿ: ಬ್ರಿಟಿಷ್​ ಶಾಲೆಗಳಲ್ಲಿ ಹಿಂದುಗಳ ವಿರುದ್ಧ ದ್ವೇಷ

    ಅದೇ ವಿಗ್ರಹಳಿಂದ ಶ್ರೀಚನ್ನಕೇಶವ ಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವವನ್ನ ಜರುಗಿಸಿದ್ದು, ಭಕ್ತ ಸಾಗರವೇ ದೇವಾಲಯಕ್ಕೆ ಆಗಮಿಸಿ ಶ್ರೀನಿವಾಸ ಕಲ್ಯಾಣೋತ್ವವನ್ನ ಕಂಡು ಕಣ್ತುಂಬಿಕೊಂಡರು.

    ಸಾಕಷ್ಟು ವರ್ಷಗಳಿಂದ ಶ್ರೀನಿವಾಸ ಕಲ್ಯಾಣೋತ್ಸವ ಆಚರಣೆ ಮಾಡುತ್ತಿದ್ಧ ಅಸ್ಲಾಂ ಕುಟುಂಬದ ಕಾರ್ಯಕ್ಕೆ ಪುರೋಹಿತರಾದ ಯತಿರಾಜ್ ಹರ್ಷ ವ್ಯಕ್ತಪಡಿಸಿದ್ಧಾರೆ. ಈ ಅಸ್ಲಾಂ ಕುಟುಂಬದವರು ಮುಸ್ಲಿಂ ಧರ್ಮದವರಾದರೂ ಹಿಂದೂ ಧರ್ಮದ ಬಗ್ಗೆ ಅಪಾರವಾದ ಭಕ್ತಿ ಶ್ರದ್ಧೆಯನ್ನು ಹೊಂದಿದ್ಧಾರೆ. ಇವರು ಪುರೋಹಿತ ಯತಿರಾಜ್ ಅವರನ್ನು ಗುರುಗಳ ರೀತಿ ಕಾಣುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts