More

    ಇಂದಿನಿಂದ ದೇಶೀಯ ಟಿ20 ಕ್ರಿಕೆಟ್ ಧಮಾಕಾ, ಕರ್ನಾಟಕಕ್ಕೆ ಮುಂಬೈ ಮೊದಲ ಎದುರಾಳಿ

    ನವದೆಹಲಿ: ಅರಬ್ ನಾಡಿನಲ್ಲಿ ಟಿ20 ವಿಶ್ವಕಪ್ ಸಮರ ಸಾಗಿರುವ ನಡುವೆ ಇತ್ತ ಭಾರತದಲ್ಲಿ ದೇಶೀಯ ಕ್ರಿಕೆಟ್ ಋತುವಿಗೆ ಚುಟುಕು ಕ್ರಿಕೆಟ್ ಮಾದರಿಯ ಟೂರ್ನಿಯೊಂದಿಗೆ ಚಾಲನೆ ಸಿಗಲಿದೆ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿ ಗುರುವಾರ ಆರಂಭಗೊಳ್ಳಲಿದ್ದು, ಮುಂದಿನ ವರ್ಷದ ಟಿ20 ವಿಶ್ವಕಪ್‌ಗೆ ಬಲಿಷ್ಠ ಭಾರತ ತಂಡ ಕಟ್ಟಲಿರುವ ಆಯ್ಕೆಗಾರರ ಗಮನಸೆಳೆಯಲು ಉತ್ತಮ ವೇದಿಕೆಯಾಗಿದೆ. ಜತೆಗೆ ಮುಂದಿನ ವರ್ಷದ ಐಪಿಎಲ್‌ಗೆ ಮುನ್ನ ನಡೆಯಲಿರುವ ಆಟಗಾರರ ಮೆಗಾ ಹರಾಜಿನ ವೇಳೆ ಫ್ರಾಂಚೈಸಿಗಳ ಗಮನಸೆಳೆಯಲು ಯುವ ಆಟಗಾರರಿಗೆ ಇದು ಉತ್ತಮ ಅವಕಾಶವಾಗಿದೆ. ವಿಜಯ್ ಶಂಕರ್ ಸಾರಥ್ಯದ ತಮಿಳುನಾಡು ತಂಡ ಹಾಲಿ ಚಾಂಪಿಯನ್ ತಂಡವಾಗಿ ಕಣಕ್ಕಿಳಿಯಲಿದೆ. ಕರೊನಾ ಭೀತಿಯ ನಡುವೆ ಸತತ 2ನೇ ವರ್ಷವೂ ಟೂರ್ನಿ ಬಯೋ-ಬಬಲ್ ವಾತಾವರಣದಲ್ಲಿ ನಡೆಯಲಿದೆ.

    ವೇಗದ ಬೌಲಿಂಗ್ ಆಲ್ರೌಂಡರ್ ಶೋಧ
    ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಸಮಸ್ಯೆ ಮತ್ತು ಾರ್ಮ್ ಕೊರತೆಯಿಂದಾಗಿ ಹಾಲಿ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಭಾರಿ ಹಿನ್ನಡೆ ಎದುರಿಸಿದೆ. ಹೀಗಾಗಿ ಮುಂದಿನ ವರ್ಷದ ಟಿ20 ವಿಶ್ವಕಪ್‌ನಲ್ಲಿ ತಂಡದ ಉತ್ತಮ ಸಮತೋಲನಕ್ಕಾಗಿ ಸಮರ್ಥ ವೇಗದ ಬೌಲಿಂಗ್ ಆಲ್ರೌಂಡರ್‌ಗೆ ಶೋಧ ನಡೆಯಲಿದೆ. ತಮಿಳುನಾಡಿನ ವಿಜಯ್ ಶಂಕರ್ ಮತ್ತು ಮುಂಬೈನ ಶಿವಂ ದುಬೆ ಮತ್ತೊಮ್ಮೆ ಆಯ್ಕೆಗಾರರ ಗಮನ ಸೆಳಯುವ ಹಂಬಲದಲ್ಲಿದ್ದರೆ, ವೆಂಕಟೇಶ್ ಅಯ್ಯರ್ ಐಪಿಎಲ್‌ನಲ್ಲಿ ಕೆಕೆಆರ್ ಪರ ತೋರಿದ ನಿರ್ವಹಣೆಯನ್ನು ಮಧ್ಯಪ್ರದೇಶ ಪರವೂ ಪುನರಾವರ್ತಿಸುವರೇ ಎಂಬ ಕುತೂಹಲವಿದೆ. ಸೌರಾಷ್ಟ್ರದ 31 ವರ್ಷದ ಚಿರಾಗ್ ಜಾನಿ ಮೇಲೆ ಕೂಡ ಆಯ್ಕೆಗಾರರು ಕಣ್ಣಿಡಲಿದ್ದಾರೆ. ಇನ್ನು ಹಾಲಿ ಟೀಮ್ ಇಂಡಿಯಾದ ಬ್ಯಾಟ್ಸ್‌ಮನ್‌ಗಳು ಅರೆಕಾಲಿಕ ಬೌಲಿಂಗ್ ಕೂಡ ಮಾಡದಿರುವುದು ಹಿನ್ನಡೆ ತಂದಿರುವುದರಿಂದ, ಸ್ಪಿನ್ ಬೌಲಿಂಗ್ ಆಲ್ರೌಂಡರ್‌ಗಳ ಮೇಲೂ ಆಯ್ಕೆಗಾರರು ಗಮನಹರಿಸಲಿದ್ದಾರೆ. ಇದರಿಂದಾಗಿ ಪೃಥ್ವಿ ಷಾ ಅವರಂಥ ಕೆಲ ಬ್ಯಾಟ್ಸ್‌ಮನ್‌ಗಳು ಅರೆಕಾಲಿಕ ಬೌಲಿಂಗ್‌ನತ್ತ ಆಸಕ್ತಿ ತೋರಿದರೂ ಅಚ್ಚರಿ ಇಲ್ಲವೆನಿಸಿದೆ.

    ಗುಂಪುಗಳು:
    ಎ: ಪಂಜಾಬ್, ತಮಿಳುನಾಡು, ಒಡಿಶಾ, ಮಹಾರಾಷ್ಟ್ರ, ಗೋವಾ, ಪುದುಚೇರಿ (ಸ್ಥಳ: ಲಖನೌ).
    ಬಿ: ಬಂಗಾಳ, ಛತ್ತೀಸ್‌ಗಢ, ಕರ್ನಾಟಕ, ಮುಂಬೈ, ಬರೋಡ, ಸರ್ವೀಸಸ್ (ಸ್ಥಳ: ಗುವಾಹಟಿ).
    ಸಿ: ಜಮ್ಮು-ಕಾಶ್ಮೀರ, ಜಾರ್ಖಂಡ್, ಹಿಮಾಚಲ ಪ್ರದೇಶ, ರಾಜಸ್ಥಾನ, ಹರಿಯಾಣ, ಆಂಧ್ರ (ಸ್ಥಳ: ಬರೋಡ).
    ಡಿ: ರೈಲ್ವೇಸ್, ಅಸ್ಸಾಂ, ಗುಜರಾತ್, ಮಧ್ಯಪ್ರದೇಶ, ಕೇರಳ, ಬಿಹಾರ (ಸ್ಥಳ: ದೆಹಲಿ).
    ಇ: ಉತ್ತರ ಪ್ರದೇಶ, ಹೈದರಾಬಾದ್, ಉತ್ತರಾಖಂಡ, ಸೌರಾಷ್ಟ್ರ, ದೆಹಲಿ, ಚಂಡೀಗಢ (ಸ್ಥಳ: ಹರಿಯಾಣ).
    ಪ್ಲೇಟ್: ತ್ರಿಪುರ, ವಿದರ್ಭ, ನಾಗಾಲ್ಯಾಂಡ್, ಮೇಘಾಲಯ, ಮಣಿಪುರ, ಸಿಕ್ಕಿಂ, ಅರುಣಾಚಲ ಪ್ರದೇಶ, ಮಿಜೋರಾಂ (ಸ್ಥಳ: ವಿಜಯವಾಡ).

    ಟೂರ್ನಿ ಸ್ವರೂಪ
    ಟೂರ್ನಿಯಲ್ಲಿ ಭಾಗವಹಿಸುವ 38 ತಂಡಗಳನ್ನು 6 ಗುಂಪುಗಳಲ್ಲಿ ವಿಭಾಗಿಸಲಾಗಿದೆ. ಎಲೈಟ್ ಎ, ಬಿ, ಸಿ, ಡಿ, ಇ ಗುಂಪುಗಳಲ್ಲಿ ತಲಾ 6 ತಂಡಗಳಿದ್ದರೆ, ಪ್ಲೇಟ್ ಗುಂಪಿನಲ್ಲಿ 8 ತಂಡಗಳಿವೆ. ಪ್ರತಿ ಗುಂಪಿನ ಪಂದ್ಯಗಳು ಪ್ರತ್ಯೇಕ ನಗರಗಳಲ್ಲಿ ನಡೆಯಲಿವೆ. 5 ಎಲೈಟ್ ಗುಂಪಿನ ಅಗ್ರಸ್ಥಾನಿ ತಂಡಗಳು ನೇರವಾಗಿ ಕ್ವಾರ್ಟರ್‌ೈನಲ್‌ಗೇರಲಿದ್ದರೆ, 2ನೇ ಸ್ಥಾನಿ ತಂಡಗಳು ಮತ್ತು ಪ್ಲೇಟ್ ಗುಂಪಿನ ಅಗ್ರಸ್ಥಾನಿ ತಂಡ ಪ್ರಿ ಕ್ವಾರ್ಟರ್‌ೈನಲ್‌ನಲ್ಲಿ ಆಡಲಿವೆ. ನಾಕೌಟ್ ಪಂದ್ಯಗಳು ನವೆಂಬರ್ 16ರಿಂದ ದೆಹಲಿಯಲ್ಲಿ ನಡೆಯಲಿವೆ. ನವೆಂಬರ್ 22ರಂದು ೈನಲ್ ಪಂದ್ಯ ನಡೆಯಲಿದೆ. ಗುಂಪಿನ ಪಂದ್ಯಗಳು ಬೆಳಗ್ಗೆ 8ರಿಂದ ಮಧ್ಯಾಹ್ನ 1.30ರವರೆಗೆ ವಿವಿಧ ಸಮಯದಲ್ಲಿ ಆರಂಭಗೊಳ್ಳಲಿವೆ ಮತ್ತು ಹೊನಲು ಬೆಳಕಿನ ಪಂದ್ಯಗಳು ಇರುವುದಿಲ್ಲ.

    ಕರ್ನಾಟಕಕ್ಕೆ ಮುಂಬೈ ಮೊದಲ ಸವಾಲು
    ಮನೀಷ್ ಪಾಂಡೆ ಸಾರಥ್ಯದ ಕರ್ನಾಟಕ ತಂಡ ಅಜಿಂಕ್ಯ ರಹಾನೆ ಸಾರಥ್ಯದ ಮುಂಬೈ ತಂಡದ ವಿರುದ್ಧ ಗುರುವಾರ ಅಭಿಯಾನ ಆರಂಭಿಸಲಿದೆ. ದೇಶೀಯ ಟಿ20 ಕ್ರಿಕೆಟ್‌ನ ಬಲಿಷ್ಠ ತಂಡವಾಗಿರುವ ಬರೋಡ ಮತ್ತು ಬಂಗಾಳವನ್ನೂ ಒಳಗೊಂಡ ಬಿ ಗುಂಪಿನಲ್ಲಿರುವ ಕರ್ನಾಟಕ ತಂಡಕ್ಕೆ ಲೀಗ್ ಹಂತದಲ್ಲೇ ಕಠಿಣ ಸವಾಲು ಎದುರಾಗಲಿದೆ. ಮಯಾಂಕ್ ಅಗರ್ವಾಲ್, ದೇವದತ್ ಪಡಿಕಲ್, ಪ್ರಸಿದ್ಧಕೃಷ್ಣ, ಕೆ. ಗೌತಮ್, ಶ್ರೇಯಸ್ ಗೋಪಾಲ್, ಕರುಣ್ ನಾಯರ್, ಕೆಸಿ ಕಾರ್ಯಪ್ಪ ಮತ್ತು ಜೆ. ಸುಚಿತ್ ಅವರಂಥ ಐಪಿಎಲ್ ತಾರೆಯರನ್ನು ಹೊಂದಿರುವ ರಾಜ್ಯ ತಂಡ ಮೂರನೇ ಬಾರಿ ಪ್ರಶಸ್ತಿ ಜಯಿಸುವ ಹಂಬಲದಲ್ಲಿದೆ. ಮುಂದಿನ ವರ್ಷದ ಟಿ20 ವಿಶ್ವಕಪ್‌ಗೆ ಮುನ್ನ ಆಯ್ಕೆಗಾರರ ಗಮನ ಸೆಳೆಯಲು ದೇವದತ್ ಪಡಿಕಲ್, ಮಯಾಂಕ್ ಅಗರ್ವಾಲ್, ಪ್ರಸಿದ್ಧಕೃಷ್ಣಗೆ ಇದು ಉತ್ತಮ ಅವಕಾಶವಾಗಿದೆ. ಅತ್ತ ಮುಂಬೈ ತಂಡವೂ ರಹಾನೆ ಜತೆಗೆ ಪೃಥ್ವಿ ಷಾ, ಯಶಸ್ವಿ ಜೈಸ್ವಾಲ್, ಶಿವಂ ದುಬೆ, ರ್ಸ್ರಾಜ್ ಖಾನ್, ಸಿದ್ಧೇಶ್ ಲಾಡ್, ಶಮ್ಸ್ ಮುಲಾನಿ, ಆದಿತ್ಯ ತಾರೆ ಅವರಂಥ ಪ್ರಮುಖ ಆಟಗಾರರನ್ನು ಒಳಗೊಂಡಿದೆ.

    ದೇಶ ಮತ್ತು ಐಪಿಎಲ್ ತಂಡಗಳ ಪರ ಆಡಿದ ಅನುಭವಿಗಳಿರುವ ಪ್ರತಿಭಾನ್ವಿತ ತಂಡ ನಮ್ಮದು. ಎಲ್ಲರೂ ಉತ್ತಮ ನಿರ್ವಹಣೆ ತೋರುವ ಮೂಲಕ ರಾಜ್ಯಕ್ಕೆ ಪ್ರಶಸ್ತಿ ಗೆದ್ದುಕೊಡುವ ಹಸಿವಿನಲ್ಲಿದ್ದಾರೆ. ಟೂರ್ನಿಗೆ ಮುನ್ನ ಬೆಂಗಳೂರಿನಲ್ಲಿ ಉತ್ತಮ ಸಿದ್ಧತೆ ನಡೆಸಿದ್ದು, ಕೆಲ ಅಭ್ಯಾಸ ಪಂದ್ಯಗಳನ್ನೂ ಆಡಿದ್ದೇವೆ.
    | ಮಯಾಂಕ್ ಅಗರ್ವಾಲ್

    ಕರ್ನಾಟಕದ ಪಂದ್ಯಗಳು
    ದಿನಾಂಕ: ಎದುರಾಳಿ (ಆರಂಭ)
    ನ. 4: ಮುಂಬೈ (ಮ. 12.30)
    ನ. 5: ಛತ್ತೀಸ್‌ಗಢ (ಬೆಳಗ್ಗೆ 8)
    ನ. 6: ಸರ್ವೀಸಸ್ (ಬೆಳಗ್ಗೆ 8)
    ನ. 8: ಬರೋಡ (ಮ. 12.30)
    ನ. 9: ಬಂಗಾಳ (ಮ. 12.00)

    2: ಹಿಂದಿನ 13 ದೇಶೀಯ ಟಿ20 ಕ್ರಿಕೆಟ್ ಆವೃತ್ತಿಗಳಲ್ಲಿ ಕರ್ನಾಟಕ ತಂಡ 2 ಬಾರಿ (2018-19, 2019-20) ಚಾಂಪಿಯನ್ ಪಟ್ಟವೇರಿತ್ತು.

    ಶುಭ್​ಮನ್​ ಗಿಲ್​ಗೆ ಕೈ ಕೊಟ್ರಾ ಸಚಿನ್​ ಪುತ್ರಿ ಸಾರಾ ತೆಂಡೂಲ್ಕರ್​? ಬ್ರೇಕಪ್​ ಸುಳಿವು ಕೊಟ್ಟ ಟೀ ಶರ್ಟ್ ಮೇಲಿನ​ ಬರಹ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts