More

    ಕೇರಳ ಸಿಎಂ ಮಗಳ ಮದುವೆಗೆ ಹಾಜರಾದ ಕೊಲೆ ಅಪರಾಧಿ; ಗೃಹ ಇಲಾಖೆ ವೈಫಲ್ಯದಿಂದ ಮುಜುಗರ

    ತಿರುವನಂತಪುರಂ: ಅಂತರ ಧರ್ಮೀಯ ಮದುವೆಯಾದ ಕೇರಳ ಸಿಎಂ ಪಿನರಾಯಿ ವಿಜಯನ್​ ಪುತ್ರಿಯ ವಿವಾಹ ಕಾರ್ಯಕ್ರಮ ಇದೀಗ ಮತ್ತೊಂದು ವಿವಾದಕ್ಕೆ ಸಿಲುಕಿದೆ.

    ಸಿಎಂ ಅಧಿಕೃತ ನಿವಾಸದಲ್ಲಿ ಸರಳವಾಗಿ ನಡೆದ ಮದುವೆಯಲ್ಲಿ ಕೊಲೆ ಅಪರಾಧಿಯೊಬ್ಬ ಪಾಲ್ಗೊಂಡಿದ್ದದ್ದು ಹಲವರ ಅಚ್ಚರಿಗೆ ಕಾರಣವಾಗಿದೆ. ಜತೆಗೆ, ರಾಜ್ಯ ಗೃಹ ಇಲಾಖೆಯೆ ವೈಫಲ್ಯಕ್ಕೂ ಸಾಕ್ಷಿ ಎಂದೇ ಹೇಳಲಾಗುತ್ತಿದೆ.

    ಇದನ್ನೂ ಓದಿ; ಬದುಕು ಕ್ಷಣಿಕ ಎಂದಿದ್ದೇಕೆ ಸುಶಾಂತ್​ ಸಿಂಗ್​; ಅಮ್ಮನ ನೆನೆದು ಬಾರದ ಲೋಕಕ್ಕೆ ಪಯಣ

    ಪಿನರಾಯಿ ವಿಜಯನ್​ ಪುತ್ರಿ ವೀಣಾ ವಿವಾಹ ಸಿಪಿಐಎಂ ಯುವ ಘಟಕ ಅಧ್ಯಕ್ಷ ಪಿ.ಎ. ಮೊಹಮ್ಮದ್​ ಜತೆಗೆ 30 ಜನರ ಸಮ್ಮುಖದಲ್ಲಿ ಸೋಮವಾರ ನೇರವೇರಿತು. ಇದರಲ್ಲಿ ಮಹಮ್ಮದ್​ ಹಾಶೀಮ್​ ಕೂಡ ಒಬ್ಬ. ಈತ ಕೊಲೆ ಪ್ರಕರಣವೊಂದರಲ್ಲಿ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿದ್ದ. ಕೋವಿಡ್​ ಕಾರಣದಿಂದಾಗಿ ಪರೋಲ್​ ಮೇಲೆ ಬಿಡುಗಡೆಗೊಂಡಿದ್ದಾನೆ.

    ರಿಯಾಸ್​ಗೆ ಹಾಶೀಮ್​ ಆಪ್ತನಾಗಿದ್ದು, ಮದುವೆಯಲ್ಲಿ ಪಾಲ್ಗೊಂಡಿದ್ದ. ಆದರೆ ಕೊಲೆ ಅಪರಾಧಿಯೊಬ್ಬ ಸಿಎಂ ನಿವಾಸಕ್ಕೆ ತೆರಳಿದ್ದು, ಗೃಹ ಇಲಾಖೆಯ ದೊಡ್ಡ ವೈಫಲ್ಯ ಎಂದೇ ಹೇಳಲಾಗುತ್ತಿದೆ. ಇದಲ್ಲದೇ, ಗೃಹ ಖಾತೆಯನ್ನು ಸ್ವತಃ ಸಿಎಂ ಪಿನರಾಯಿ ವಿಜಯನ್​ ನಿರ್ವಹಿಸುತ್ತಿದ್ದು, ಘಟನೆ ಇರಿಸುಮುರಿಸು ಉಂಟುಮಾಡಿದೆ. ಹೀಗಾಗಿ ಇದು ರಾಜಕೀಯ ಮೇಲಾಟಕ್ಕೂ ಕಾರಣವಾಗಿದೆ. ಜತೆಗೆ ಪಕ್ಷದವರಿಗೂ ಮುಜುಗರ ಉಂಟು ಮಾಡಿದೆ.

    ಇದನ್ನೂ ಓದಿ; ನಟ ಸುಶಾಂತ್​ ಸಿಂಗ್​ನ ವೈದ್ಯರನ್ನು ಹುಡುಕುತ್ತಿದ್ದಾರೆ ಪೊಲೀಸರು; ಕೊನೆಯ ಕರೆ ಮಾಡಿದ್ಯಾರಿಗೆ?

    ಏಳು ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದ ಹೈಕೋರ್ಟ್​ ಹಾಶೀಮ್​ನನ್ನು ಪ್ರಕರಣದಿಂದ ಮುಕ್ತಗೊಳಿಸಿತ್ತು. ಆದರೆ, ಸುಪ್ರೀಂ ಮತ್ತೆ ಶಿಕ್ಷೆ ವಿಧಿಸಿತ್ತು. ಅಂಥ ವ್ಯಕ್ತಿಯೊಬ್ಬ ಸಿಎಂ ನಿವಾಸದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೇಗೆ ಸಾಧ್ಯ ಎಂದು ಬಿಜೆಪಿ ಪ್ರಶ್ನಿಸಿದೆ. ಆತನ ಪರೋಲ್​ ರದ್ದುಗೊಳಿಸಲು ಸುಪ್ರೀಂ ಕೋರ್ಟ್​ ಮೊರೆ ಹೋಗುವುದಾಗಿ ತಿಳಿಸಿದೆ.

    ಸರ್ಕಾರಿ ಜಾಹೀರಾತಿನಲ್ಲಿ ನೀಲಿಚಿತ್ರ ತಾರೆ; ನೆಟ್ಟಿಗರಿಂದಲೂ ಮೆಚ್ಚುಗೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts