More

    ಕಡೂರಿನ ರಸ್ತೆಗಳಿಗೆ ಜಕಣಾಚಾರಿ ಹೆಸರು

    ಕಡೂರು: ವಿಶ್ವಕರ್ಮ ಸಮುದಾಯದ ಬೇಡಿಕೆಯಂತೆ ಕಡೂರಿನ ವಾರ್ಡ್​ನ ರಸ್ತೆಗೆ ಅಮರಶಿಲ್ಪಿ ಜಕಣಾಚಾರಿ ಹೆಸರಿಡಲು ಶಾಸಕರು ಹಾಗೂ ಪುರಸಭೆ ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಜಿಪಂ ಸದಸ್ಯ ಕೆ.ಆರ್.ಮಹೇಶ್ ಒಡೆಯರ್ ತಿಳಿಸಿದರು.

    ತಾಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ ಅಮರಶಿಲ್ಪಿ ಜಕಣಾಚಾರಿ ಜಯಂತಿ ಕಾರ್ಯಕ್ರಮದಲ್ಲಿ ಜಕಣಾಚಾರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

    ವಿಶ್ವಕರ್ಮ ಸಮಾಜಕ್ಕೆ ನ್ಯಾಯ ದೊರಕಿಸುವ ಉದ್ದೇಶದಿಂದ ಬೀರೂರು ಪುರಸಭೆಗೆ ಸುದರ್ಶನ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಸಾಮಾಜಿಕ ನ್ಯಾಯದ ಪರಿಕಲ್ಪನೆಯಡಿ ಕ್ಷೇತ್ರದ ಶಾಸಕರು ವಿಶ್ವಕರ್ಮ ಸಮಾಜಕ್ಕೆ ವಿಶೇಷ ಆದ್ಯತೆ ನೀಡಿದ್ದಾರೆ ಎಂದರು.

    ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜಕಣಾಚಾರಿ ಅವರ ಸಂಸ್ಕರಣಾ ದಿನವನ್ನು ಸರ್ಕಾರದಿಂದ ಆಚರಿಸಲು ನಿರ್ಧರಿಸುವುದು ಹೆಮ್ಮೆಯ ಸಂಗತಿ. ಸಣ್ಣ, ಸಣ್ಣ ಸಮಾಜದವರು ಮುಖ್ಯವಾಹಿನಿ ಬರುವ ಉದ್ದೇಶದಿಂದ ಸಮಾಜದ ಮಹಾ ಪುರುಷರ ಜಯಂತಿ ಆಚರಣೆ ಜಾರಿಗೆ ತರುವ ಮೂಲಕ ಆ ಸಮಾಜಗಳು ಸಂಘಟನೆಗೊಂಡು ಸರ್ಕಾರದ ಸವಲತ್ತುಗಳನ್ನು ಪಡೆಯಲು ಅನುಕೂಲಕರವಾಗಲಿದೆ ಎಂದರು.

    ಬಿಜೆಪಿ ಮುಖಂಡ ಟಿ.ಆರ್.ಲಕ್ಕಪ್ಪ ಮಾತನಾಡಿ, ಜಕಣಾಚಾರಿ ಅವರ ಹುಟ್ಟೂರು ಕೈದಾಳದಲ್ಲಿ ಅವರೇ ಕೆತ್ತಿದ ಚೆನ್ನಕೇಶವ ವಿಗ್ರಹವನ್ನು ದುಷ್ಕರ್ವಿುಗಳು ಒಡೆದು ಹಾಕಿದಾಗ ಅದನ್ನು ಮತ್ತೆ ಮೂಲರೂಪಕ್ಕೆ ತಂದ ಶಿಲ್ಪಿ ಕಡೂರಿನ ಹುಲ್ಲೆಹಳ್ಳಿ ಗ್ರಾಮದ ಜಯಣ್ಣಾಚಾರ್. ಇಂದಿಗೂ ಜಕಣಾಚಾರಿ ಪರಂಪರೆ ಮುಂದುವರಿದಿದೆ ಎಂಬುವುದಕ್ಕೆ ಸಾಕ್ಷಿಯಾಗಿದೆ. ತಾಲೂಕಿನಲ್ಲಿ ಬಹಳಷ್ಟು ಶಿಲ್ಪಿಗಳು ಎಲೆ ಮರೆಕಾಯಿಯಂತೆ ಕಾಯಕದಲ್ಲಿ ತೊಡಗಿದ್ದಾರೆ. ಇವರನ್ನು ಗುರುತಿಸುವ ಕಾರ್ಯ ಆಗಬೇಕಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts