More

    ಲಾಕ್​ಡೌನ್​ ನಿಯಮ ಪಾಲಿಸದವರನ್ನು ಸಿನಿಮಾ ಶೈಲಿಯಲ್ಲಿ ಚೇಸ್​ ಮಾಡಿ ಹಿಡಿದ ನಗರಸಭೆ ಕಮಿಷನರ್!

    ಯಾದಗಿರಿ: ಕರೊನಾ ಸೋಂಕಿನ ನಿಯಂತ್ರಣಕ್ಕೆಂದು ಲಾಕ್​ಡೌನ್​ ಜಾರಿಗೊಳಿಸಲಾಗಿದೆ. ಅಗತ್ಯ ಸಾಮಾಗ್ರಿ ವಸ್ತುಗಳಿಗೆ ಬೆಳಗ್ಗೆ ನಾಲ್ಕು ತಾಸು ಬಾಗಿಲು ತೆಗೆಯಲು ಅವಕಾಶವಿದ್ದರೆ, ಅದನ್ನು ಬಿಟ್ಟು ಬೇರಾವ ಅಂಗಡಿಯನ್ನೂ ತೆರೆಯದಿರುವಂತೆ ನಿಯಮ ಹೇರಲಾಗಿದೆ. ಆದರೂ ಕದ್ದು ಮುಚ್ಚಿ ಬಟ್ಟೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದವರನ್ನು ನಗರಸಭೆ ಕಮಿಷನರ್​ ಸಿನಿಮಾ ಶೈಲಿಯಲ್ಲಿ ಹಿಡಿದಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.

    ಯಾದಗಿರಿಯಲ್ಲಿ ಸಂಪೂರ್ಣ ಲಾಕ್​ಡೌನ್ ಜಾರಿಯಲ್ಲಿದೆ. ನಿಷೇಧವಿದ್ದರೂ ಕಾನೂನು ಬಾಹಿರವಾಗಿ ಬಟ್ಟೆ ಅಂಗಡಿ ತೆರೆದು ಬಟ್ಟೆ ಮಾರಾಟ ಮಾಡುತ್ತಿರುವುದು ಯಾದಗಿರಿ ನಗರಸಭೆ ಕಮಿಷನರ್ ಬಿ.ಟಿ ನಾಯಕ್ ಕಣ್ಣಿಗೆ ಬಿದ್ದಿದೆ. ವ್ಯಾಪಾರಸ್ಥರ ಚಲನವಲನಗಳನ್ನು ಕಾದು ಗಮನಿಸಿದ ಕಮಿಷನರ್ ಬಟ್ಟೆ ಖರೀದಿಸಿದವರ ಮೇಲೆ ಸಿನಿಮಾ ಶೈಲಿಯಲ್ಲಿ ಅಟ್ಯಾಕ್​ ಮಾಡಿದ್ದಾರೆ.

    ಸುಮಾರು ದೂರದಿಂದಲೇ ಓಡಿ ಹೋಗಿ ಬಟ್ಟೆ ಖರೀದಿಸಿದವರನ್ನು ವಶಕ್ಕೆ ಪಡೆದೆದಿದ್ದಾರೆ. ಅವರೊಂದಿಗೆ ತಹಶಿಲ್ದಾರರ ಚನ್ನಮಲ್ಲಪ್ಪ ಕೂಡ ಸಾಥ್​ ನೀಡಿದ್ದು, ಬಟ್ಟೆ ಅಂಗಡಿ ಮಾಲೀಕನನ್ನು ಹಿಡಿಯಲಾಗಿದೆ. ಸದ್ಯ ಬಟ್ಟೆ ಅಂಗಡಿ ಸೀಚ್ ಮಾಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    ಕರೊನಾ ಕಡಿಮೆ ಮಾಡಿಸೆಂದು ದೇವರಿಗೆ ಬಿಟ್ಟಿದ್ದ ಕುದುರೆಯೇ ಸಾವು! ಅಂತ್ಯಸಂಸ್ಕಾರ ಮಾಡಿದ 15 ಮಂದಿ ವಿರುದ್ಧ ಎಫ್​ಐಆರ್​

    ಕಾರು ಮಾರೋಕೆ ಫೋಟೋ ಹಾಕುವಾಗ ಗುಪ್ತಾಂಗದ್ದೂ ಫೋಟೋ ಹಾಕಿಬಿಟ್ಟ! ಮಾರಾಟ ಆಗಿದ್ದೇನು?

    ನಿಂತಿದ್ದ ಆ್ಯಂಬುಲೆನ್ಸ್​ ಅಲ್ಲಾಡುತ್ತಿತ್ತು; ಹತ್ತಿರ ಹೋಗಿ ನೋಡಿದ ಪೊಲೀಸರಿಗೆ ಕಂಡಿದ್ದು ಬೇರೆಯದ್ದೇ ದೃಶ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts