More

    ಮಾಸ್ಕ್ ಹಾಕಿಲ್ಲ ಎಂದು ದಂಡ ಕೇಳಿದ ಮಾರ್ಷಲ್​ಗೆ, ಹಿಗ್ಗಾ ಮುಗ್ಗಾ ಹೊಡೆದ ಮಹಿಳೆ

    ಮುಂಬೈ : ಮಹಾರಾಷ್ಟ್ರದಲ್ಲಿ ಏರುತ್ತಿರುವ ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಮುಂಬೈ ಸೇರಿದಂತೆ ಎಲ್ಲಾ ನಗರಗಳಲ್ಲೂ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಬಗ್ಗೆ ಸರ್ಕಾರ ಕ್ರಮಕೈಗೊಳ್ಳುತ್ತಿದೆ. ಅದರ ಭಾಗವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ತೊಡದೆ ಓಡಾಡುವವರಿಗೆ ದಂಡ ವಿಧಿಸಲು ಮಾರ್ಷಲ್​ಗಳನ್ನು ನೇಮಿಸಲಾಗಿದೆ.

    ದಂಡ ಎಂದಾಕ್ಷಣ ನಾಗರೀಕರು ಕಸಿವಿಸಿ ಮಾಡಿಕೊಳ್ಳುವುದು ಸಾಮಾನ್ಯ ವಿಷಯ. ಆದರೆ ಇಲ್ಲೊಬ್ಬಳು, ಮಾಸ್ಕ್ ಹಾಕಿಲ್ಲದ್ದಕ್ಕೆ ದಂಡ ವಿಧಿಸಲು ಹೋದ ಮಾರ್ಷಲ್​ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾಳೆ. ಮುಂಬೈನ ಕಾಂದಿವಿಲಿಯ ಮಹಾವೀರ್​ನಗರದಲ್ಲಿ ನಡೆದಿರುವ ಈ ಘಟನೆಯ ವಿಡಿಯೋ ವರದಿಗಳು ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಇದನ್ನೂ ಓದಿ: ಬಿಡುಗಡೆಯ ಬೆನ್ನಲ್ಲೇ ನೆಟ್ಟಿಗರ ಹುಬ್ಬೇರಿಸಿದ “ಮುಂಬೈ ಸಗಾ”

    ಮಾಸ್ಕ್ ತೊಟ್ಟಿಲ್ಲದ ಮಹಿಳೆಯು ಆಟೋ ಹತ್ತಲು ಹೊರಟಾಗ ದಂಡ ಕಟ್ಟಿ ಎಂದು ಹೇಳುತ್ತಾ ಮಹಿಳಾ ಮಾರ್ಷಲ್ ತಡೆಯಲು ಯತ್ನಿಸಿದ್ದಾರೆ. ಮಾತು ಕೇಳದ ಮಹಿಳೆ ಆಟೋದೊಳಗೆ ಕೂತಾಗ ಮತ್ತೆ ದಂಡ ಕಟ್ಟಲೇಬೇಕು ಎಂದು ಆಕೆಯ ಕೈಹಿಡಿಯಲು ಹೋಗಿದ್ದಾರೆ. ಇದಕ್ಕೆ ಮಾರ್ಷಲ್​ನ​ ಕೈಝಾಡಿಸುವ ಮಹಿಳೆ, ಕಾಲೆತ್ತಿ ಎರಡು ಮೂರು ಬಾರಿ ಒದ್ದಿದ್ದಾಳೆ. ಮಾರ್ಷಲ್ ಕೈಗೆ ಮಹಿಳೆಯ ದುಪಟ್ಟಾ ಬಂದಾಗ ಆಟೋದಿಂದ ಇಳಿದು ನಾಲ್ಕೈದು ಬಾರಿ ಕಪಾಳಕ್ಕೆ ಬಾರಿಸುತ್ತಾ ಆಕೆಯ ಬಟ್ಟೆ-ಕೂದಲು ಹಿಡಿದು ಜಗ್ಗಾಡಿದ್ದಾಳೆ. ಪ್ರತಿಯಾಗಿ ಮಾರ್ಷಲ್ ಮಹಿಳೆಯ ಬಟ್ಟೆ ಹಿಡಿದುಕೊಂಡಾಗ ‘ನನ್ನ ಬಟ್ಟೆಗೆ ಕೈಹಾಕುತ್ತಿದ್ದಾಳೆ’ ಎಂದು ಅಬ್ಬರ ಮಾಡಿದ್ದಾಳೆ. ನಂತರ ಮಾರ್ಷಲ್ ತನ್ನ ‘ಕೂದಲು ಬಿಟ್ಟರೇ ಬಟ್ಟೆ ಬಿಡುವುದು’ ಎಂದಾಗ ಕೊನೆಗೂ ಆ ಮಹಿಳೆ ಮಾರ್ಷಲ್​ನ ಮೇಲಿನ ಹಿಡಿತ ಸಡಿಲಿಸಿದ್ದಾಳೆ.

    ಈ ಬಗ್ಗೆ ಕಾಂದಿವಿಲಿಯ ಚಾಕೋರ್ಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಹಲ್ಲೆಕೋರ ಮಹಿಳೆಯನ್ನು ಪತ್ತೆ ಹಚ್ಚಿ ಆಕೆಯ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬೃಹನ್​ಮುಂಬೈ ಮಹಾನಗರಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ. (ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಸಂಸದರ ಮನೆಯ ಮುಂದೆಯೇ ಆತ್ಮಹತ್ಯೆಗೆ ಪ್ರಯತ್ನಿಸಿದ ಸೊಸೆ… ಪ್ರೇಮಕಥೆಗೆ ಸ್ಫೋಟಕ ತಿರುವು !

    “ಎ ಬಿಗ್​ ಬಿಗ್ ಬಿಗ್ ಥ್ಯಾಂಕ್ಯೂ” : ಮೋದಿಗೆ ಕ್ರಿಕೆಟಿಗ ರಸೆಲ್ ಸಂದೇಶ

     

    ಜಾತಕ ದೋಷ ನಿವಾರಿಸಲು 13 ವರ್ಷದ ವಿದ್ಯಾರ್ಥಿಯನ್ನು ‘ಮದುವೆ’ಯಾದ ಶಿಕ್ಷಕಿ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts