More

    ಪ್ಲೀಸ್​ ವಿಡಿಯೋ ಡಿಲೀಟ್​ ಮಾಡು…ಯುವತಿ ಬೇಡಿಕೊಂಡರು ಕ್ಯಾರೆ ಎನ್ನದ ಯುವಕನಿಗೆ ಕಾದಿತ್ತು ಶಾಕ್!

    ಮುಂಬೈ: ಯುವತಿಯೊಬ್ಬಳ ಡಾನ್ಸ್​ ವಿಡಿಯೋವನ್ನು ತನ್ನ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿ, ವೇಶ್ಯೆಯರ ಡಾನ್ಸ್​ಗೆ ಹೋಲಿಕೆ ಅಪಹಾಸ್ಯ ಮಾಡಿದ್ದಲ್ಲದೆ, ಪೋಸ್ಟ್ ತೆಗೆದುಹಾಕುವಂತೆ ಪರಿಪರಿಯಾಗಿ ಬೇಡಿಕೊಂಡರು ಕ್ಯಾರೆ ಎನ್ನದೆ ಉದ್ಧಟತನ ಪ್ರದರ್ಶಿಸಿದ ಯುವಕನಿಗೆ ಪೊಲೀಸರು ಸರಿಯಾದ ಪಾಠ ಕಲಿಸಿದ್ದಾರೆ.

    ಪ್ರತೀಕ್​​​ ಆರ್ಯನ್​ ಎಂಬಾತ ತನ್ನ ಎಕ್ಸ್​ ಖಾತೆಯಲ್ಲಿ ಶ್ರುತಿ ಪಾರಿಜಾ ಎಂಬಾಕೆಯ ಡಾನ್ಸ್​ ವಿಡಿಯೋ ಪೋಸ್ಟ್​ ಮಾಡಿ, ‘ಕೊತಾ’ ಪರ್ಫಾರ್ಮೆನ್ಸ್​ ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದ. ಇದರರ್ಥ ವೇಶ್ಯೆಯರ ನೃತ್ಯ. ಈ ವಿಡಿಯೋ ಪಾರಿಜಾ ಗಮನಕ್ಕೆ ಬಂದ ಬಳಿಕ ಪೋಸ್ಟ್​ ಡಿಲೀಟ್​ ಮಾಡುವಂತೆ ಆಕೆ ಸಾಕಷ್ಟು ಮನವಿ ಮಾಡಿಕೊಂಡಿದ್ದಳು. ಆದರೆ ಆರ್ಯನ್​ ಮಾತ್ರ ಆಕೆಯ ಮನವಿಯನ್ನು ತಿರಸ್ಕರಿಸುತ್ತಾ ಬಂದನು.

    ಕಾಲೇಜ್​ ಈವೆಂಟ್​ ಒಂದರಲ್ಲಿ ಪಾರಿಜಾ ಡಾನ್ಸ್​ ಮಾಡಿದ್ದ ವಿಡಿಯೋ ತುಣುಕನ್ನು ಆರ್ಯನ್​ ತನ್ನ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿದ ಬಳಿಕ ಈ ವಿವಾದ ಹುಟ್ಟಿಕೊಂಡಿತು. ಭಾರತದ ಶಾಲೆ ಮತ್ತು ಕಾಲೇಜುಗಳಲ್ಲಿನ ಸಾಂಸ್ಕೃತಿಕ ಮಾನದಂಡಗಳ ಬಗ್ಗೆ ಮಾತನಾಡಿ, ವಿಡಿಯೋವನ್ನು ಆರ್ಯನ್​ ಟೀಕಿಸಿದ್ದ.

    ಈ ವಿಚಾರ ಪಾರಿಜಾ ಗಮನಕ್ಕೆ ಬಂದಾಗ ಆಕೆ ಸ್ಪಷ್ಟನೆ ಸಹ ನೀಡಿದಳು. ಪಾರಿಜಾ, ವೃತ್ತಿಯಲ್ಲಿ ನೃತ್ಯ ಸಂಯೋಜಕಿಯಾಗಿದ್ದು, ಡಾನ್ಸ್​ ಶೋ ಜಡ್ಜ್​ ಮಾಡಲು ಕಾಲೇಜು ಉತ್ಸವಕ್ಕೆ ಆಹ್ವಾನ ನೀಡಲಾಗಿತ್ತು. ಇದೇ ವೇಳೆ ಪಾರಿಜಾ ಅವರು ತಮ್ಮ ಡಾನ್ಸ್​ ಪ್ರತಿಭೆಯನ್ನು ಪ್ರದರ್ಶನ ಮಾಡಿದ್ದರು. ಈ ವೇಳೆ ಸೆರೆಹಿಡಿದ ವಿಡಿಯೋವನ್ನು ಆರ್ಯನ್​ ಪೋಸ್ಟ್​ ಮಾಡಿದ್ದಾರೆ ಎಂದು ಪಾರಿಜಾ ಹೇಳಿಕೊಂಡಿದ್ದಾರೆ. ಅಲ್ಲದೆ, ನನ್ನ ಒಪ್ಪಿಗೆ ಇಲ್ಲದೆ ವಿಡಿಯೋ ಪೋಸ್ಟ್​ ಮಾಡಲಾಗಿದ್ದು, ಗೌರವಕ್ಕೆ ಧಕ್ಕೆ ತರಲಾಗಿದೆ. ಸಾಕಷ್ಟು ಬೇಡಿಕೊಂಡರು ಪೋಸ್ಟ್​ ತೆಗೆಯುತ್ತಿಲ್ಲ ಎಂದು ಆರ್ಯನ್​ ಆರೋಪಿಸಿದರು. ಇದಕ್ಕೆ ಉತ್ತರ ನೀಡಿದ ಆರ್ಯನ್​, ನನ್ನ ಅಭಿಪ್ರಾಯವು ಭಾರತೀಯ ಶಿಕ್ಷಣ ಸಂಸ್ಥೆಗಳನ್ನು ಗುರಿಯಾಗಿಸಿದೆ ಹೊರತು ವೈಯಕ್ತಿಕವಾಗಿ ಪಾರಿಜಾ ಅವರನ್ನಲ್ಲ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡರು ಮತ್ತು ಪೋಸ್ಟ್​ ಡಿಲೀಟ್​ ಮಾಡಲು ನಿರಾಕರಿಸಿದರು. ಇಷ್ಟೇ ಅಲ್ಲದೆ, ನನಗೆ ಪಾರಿಜಾ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪ ಮಾಡಿದರು.

    ಇದಾದ ಬಳಿಕ ಪಾರಿಜಾ, ಮುಂಬೈ ಪೊಲೀಸರ ಎಕ್ಸ್​ ಖಾತೆಗೆ ಟ್ಯಾಗ್​ ಮಾಡಿ, ವಿಡಿಯೋ ಡಿಲೀಟ್​ ಮಾಡಲು ಸಾಕಷ್ಟು ಮನವಿ ಮಾಡಿದರೂ ಆರ್ಯನ್​ ಮಾತ್ರ ಸಾರಾಸಗಟಾಗಿ ಮನವಿಯನ್ನು ತಿರಸ್ಕರಿಸುತ್ತಿದ್ದಾರೆ. ವಿಡಿಯೋದಿಂದ ನನ್ನ ಗೌರವಕ್ಕೆ ಧಕ್ಕೆ ಬಂದಿದೆ. ವಿಡಿಯೋ ಡಿಲೀಟ್​ ಮಾಡದೇ ನನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಬಳಿಕ ಪೊಲೀಸರು ಆಕೆಯ ಪೋಸ್ಟ್​ಗೆ ಪ್ರತಿಕ್ರಿಯೆ ನೀಡಿ, ಫೋನ್​ ನಂಬರ್​ ಪಡೆದುಕೊಂಡು, ಆಕೆಯೊಂದಿಗೆ ಮಾತನಾಡಿ, ಮಾಹಿತಿ ಪಡೆದುಕೊಂಡಿದ್ದರು.

    ಸಮಸ್ಯೆ ಪರಿಹಾರ ಆದ್ರೆ ವಿಡಿಯೋ ಇನ್ನೂ ಲಭ್ಯ
    ಕಾಪಿರೈಟ್​ ಹಕ್ಕು ಕಾರಣದಿಂದ ಆರ್ಯನ್​ ಪೋಸ್ಟ್​ ಕೊನೆಗೂ ಲಭ್ಯವಾಗುತ್ತಿಲ್ಲ. ಪೊಲೀಸರು ಮಧ್ಯಸ್ಥಿಕೆ ವಹಿಸಿ ಯುವಕನಿಗೆ ಖಡಕ್​ ವಾರ್ನಿಂಗ್​ ನೀಡಿದ್ದಾರೆಂದು ತಿಳಿದುಬಂದಿದೆ. ಆದರೆ, ವಿಡಿಯೋ ಇನ್ನೂ ಲಭ್ಯವಿರುವ ಬಗ್ಗೆ ಪಾರಿಜಾ ಅನುಮಾನ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

    ಹೆದ್ದಾರಿಯಲ್ಲಿ ನಿಂತು ಹಣ ವಸೂಲಿ: 40 ಸಂಚಾರಿ ಪೊಲೀಸರು ಒಟ್ಟಿಗೆ ಎತ್ತಂಗಡಿ, ಇದು ವೈರಲ್​ ವಿಡಿಯೋ ಎಫೆಕ್ಟ್

    ಗಂಡ ಏಕೆ ಬೇಕು ಅದೇ ಸಾಕು! ಜಾಲತಾಣದಲ್ಲಿ ಸಂಚಲನ ಮೂಡಿಸಿತ್ತು ಕಿರಾತಕ ಬೆಡಗಿಯ ಈ ಮಾತು…​

    ಅನುಪಮಾ ನಿಮ್ಮಿಂದ ನಿರೀಕ್ಷೆ ಮಾಡಿರಲಿಲ್ಲ! ಬ್ರೇಕಪ್​ಗಿಂತಲೂ ಹೆಚ್ಚು ನೋವುಂಟು ಮಾಡುತ್ತಿದೆ ಎಂದ ಫ್ಯಾನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts