More

    ಹೆದ್ದಾರಿಯಲ್ಲಿ ನಿಂತು ಹಣ ವಸೂಲಿ: 40 ಸಂಚಾರಿ ಪೊಲೀಸರು ಒಟ್ಟಿಗೆ ಎತ್ತಂಗಡಿ, ಇದು ವೈರಲ್​ ವಿಡಿಯೋ ಎಫೆಕ್ಟ್

    ಥಾಣೆ: ಸಾಮಾಜಿಕ ಜಾಲತಾಣ ಹೆಚ್ಚು ಬಳಕೆಗೆ ಬಂದಾಗಿನಿಂದ ಸರ್ಕಾರಿ ಅಧಿಕಾರಿಗಳ ಮುಖವಾಡ ವಿಡಿಯೋಗಳಲ್ಲಿ ಕಳಚಿ ಬೀಳುತ್ತಿದೆ. ಅದರಲ್ಲೂ ಕೆಲ ಸಂಚಾರಿ ಪೊಲೀಸರ ಲಂಚಾವತಾರ ಬಟಾಬಯಲಾಗುತ್ತಿದೆ. ತಾಜಾ ಘಟನೆಯೊಂದರಲ್ಲಿ ಲಂಚ ಪಡೆದ ಆರೋಪದ ಮೇಲೆ 40 ಸಂಚಾರಿ ಪೊಲೀಸರನ್ನು ಒಟ್ಟಿಗೆ ವರ್ಗಾವಣೆ ಮಾಡಲಾಗಿದೆ. ಈ ಘಟನೆ ಮುಂಬೈನಲ್ಲಿ ಭಾನುವಾರ ನಡೆದಿದೆ.

    ಉನ್ನತ ಅಧಿಕಾರಿಗಳು ಸೇರಿದಂತೆ ಒಟ್ಟಿಗೆ 40 ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ. ವರ್ಗಾವಣೆಯಾದ ಎಲ್ಲ ಸಿಬ್ಬಂದಿಯೂ ಥಾಣೆಯ ಮುಂಬ್ರಾ ವಿಭಾಗದ ಸಂಚಾರಿ ಪೊಲೀಸರೆಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾನ್ಸ್​ಟೇಬಲ್ಸ್​ ಹೊರತುಪಡಿಸಿ, ಹಿರಿಯ ಅಧಿಕಾರಿ ಸುರೇಶ್​ ಖೆಡೆಕರ್​ ಹಾಗೂ ಇಬ್ಬರು ಸಹಾಯಕ ಸಬ್​ ಇನ್ಸ್​ಪೆಕ್ಟರ್ ಕೂಡ ಪಟ್ಟಿಯಲ್ಲಿ ಸೇರಿದ್ದಾರೆ.​

    ಥಾಣೆಯ ಡೆಪ್ಯುಟಿ ಕಮಿಷನರ್​ ಆಫ್​ ಪೊಲೀಸ್​ (ಸಂಚಾರಿ) ವಿಜಯ್​ಕುಮಾರ್​ ರಾಥೋಡ್​ ಶನಿವಾರ ವರ್ಗಾವಣೆ ಆದೇಶಗಳನ್ನು ಹೊರಡಿಸಿದ್ದು, ಎಲ್ಲ 40 ಸಿಬ್ಬಂದಿಯನ್ನು ಕಂಟ್ರೋಲ್​ ರೂಮ್​ಗೆ ಸ್ಥಳಾಂತರ ಮಾಡಲಾಗಿದೆ.

    ವಿಡಿಯೋದಲ್ಲಿ ಏನಿದೆ?
    ಮುಂಬೈನ ಬಹು ಮುಖ್ಯ ಮಾರ್ಗವಾಗಿರುವ ಮುಂಬ್ರಾ ಹೆದ್ದಾರಿಯಲ್ಲಿ ಭಾರಿ ಗಾತ್ರದ ವಾಹನಗಳ ಚಾಲಕರಿಂದ ಹಣ ವಸೂಲಿ ಮಾಡುತ್ತಿರುವ ದೃಶ್ಯ ವೈರಲ್​ ಆಗಿರುವ ವಿಡಿಯೋದಲ್ಲಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ನೆಟ್ಟಿಗರು ಭ್ರಷ್ಟ ಪೊಲೀಸರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲ 40 ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. (ಏಜೆನ್ಸೀಸ್​)

    ಗಂಡ ಏಕೆ ಬೇಕು ಅದೇ ಸಾಕು! ಜಾಲತಾಣದಲ್ಲಿ ಸಂಚಲನ ಮೂಡಿಸಿತ್ತು ಕಿರಾತಕ ಬೆಡಗಿಯ ಈ ಮಾತು…​

    ಅನುಪಮಾ ನಿಮ್ಮಿಂದ ನಿರೀಕ್ಷೆ ಮಾಡಿರಲಿಲ್ಲ! ಬ್ರೇಕಪ್​ಗಿಂತಲೂ ಹೆಚ್ಚು ನೋವುಂಟು ಮಾಡುತ್ತಿದೆ ಎಂದ ಫ್ಯಾನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts