More

    ಪಂಜಾಬ್ ಕಿಂಗ್ಸ್ ಎದುರು ಗೆದ್ದ ಮುಂಬೈ ಇಂಡಿಯನ್ಸ್, ಪ್ಲೇಆಫ್ ಆಸೆ ಜೀವಂತ

    ಅಬುಧಾಬಿ: ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟು ಲೀಗ್ ಹಂತದಲ್ಲೇ ಹೊರಬೀಳುವ ಆತಂಕದಲ್ಲಿದ್ದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಕಡೆಗೂ ಗೆಲುವಿನ ಹಳಿಗೇರಲು ಯಶಸ್ವಿಯಾಯಿತು. ಜಯೇದ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಐಪಿಎಲ್-14ರ ಎರಡನೇ ಭಾಗದ ಪಂದ್ಯದಲ್ಲಿ ರೋಹಿತ್ ಶರ್ಮ ಬಳಗ ಪಂಜಾಬ್ ಕಿಂಗ್ಸ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಅರಬ್ ನಾಡಿನ ಚರಣದಲ್ಲಿ ಮೊದಲ ಗೆಲುವಿನ ನಗೆ ಬೀರಿದ ಮುಂಬೈ, ಒಟ್ಟಾರೆ 5ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರುವ ಮೂಲಕ ಪ್ಲೇಆಫ್ ರೇಸ್‌ನಲ್ಲಿ ಉಳಿಯಿತು. ಮತ್ತೊಂದೆಡೆ, ಲೀಗ್‌ನಲ್ಲಿ 7ನೇ ಸೋಲು ಕಂಡ ಕನ್ನಡಿಗ ಕೆಎಲ್ ರಾಹುಲ್ ಪಡೆಯ ಪ್ಲೇಆಫ್ ಮಾರ್ಗ ಬಹುತೇಕ ಬಂದ್ ಆಯಿತು.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ, ಸ್ಟಾರ್ ಬ್ಯಾಟರ್‌ಗಳ ವೈಫಲ್ಯದ ನಡುವೆಯೂ ಏಡನ್ ಮಾರ್ಕ್ರಮ್ (42ರನ್, 29 ಎಸೆತ, 6 ಬೌಂಡರಿ) ಜವಾಬ್ದಾರಿಯುತ ಬ್ಯಾಟಿಂಗ್ ಫಲವಾಗಿ 6 ವಿಕೆಟ್‌ಗೆ 135 ರನ್ ಪೇರಿಸಿತು. ಸ್ಪಿನ್ನರ್ ರವಿ ಬಿಷ್ಣೋಯಿ (25ಕ್ಕೆ 2) ನೀಡಿದ ಆರಂಭಿಕ ಆಘಾತದ ನಡುವೆಯೂ ಮುಂಬೈ ಇಂಡಿಯನ್ಸ್ ತಂಡ ಸೌರಭ್ ತಿವಾರಿ (45ರನ್, 37 ಎಸೆತ, 3 ಬೌಂಡರಿ, 2 ಸಿಕ್ಸರ್) ಬಿರುಸಿನ ಬ್ಯಾಟಿಂಗ್, ಹಾರ್ದಿಕ್ ಪಾಂಡ್ಯ (40*ರನ್, 30 ಎಸೆತ, 4 ಬೌಂಡರಿ, 2 ಸಿಕ್ಸರ್) ಹಾಗೂ ಕೈರಾನ್ ಪೊಲ್ಲಾರ್ಡ್ (15*ರನ್, 7 ಬೌಂಡರಿ, 1 ಸಿಕ್ಸರ್, 1 ಸಿಕ್ಸರ್) ಜೋಡಿಯ ಅಬ್ಬರದ ಬ್ಯಾಟಿಂಗ್ ನೆರವಿನಿಂದ 19 ಓವರ್‌ಗಳಲ್ಲಿ 4 ವಿಕೆಟ್‌ಗೆ 137 ರನ್‌ಗಳಿಸಿ ಜಯದ ನಗೆ ಬೀರಿತು.

    ಪಂಜಾಬ್ ಕಿಂಗ್ಸ್: 6 ವಿಕೆಟ್‌ಗೆ 135 (ಕೆಎಲ್ ರಾಹುಲ್ 21, ಏಡಿನ್ ಮಾರ್ಕ್ರಮ್ 42, ದೀಪಕ್ ಹೂಡಾ 28, ಜಸ್‌ಪ್ರೀತ್ ಬುಮ್ರಾ 24ಕ್ಕೆ 2, ಕೈರಾನ್ ಪೊಲ್ಲಾರ್ಡ್ 8ಕ್ಕೆ 2, ಕೃನಾಲ್ ಪಾಂಡ್ಯ 24ಕ್ಕೆ 1), ಮುಂಬೈ ಇಂಡಿಯನ್ಸ್: 19 ಓವರ್‌ಗಳಲ್ಲಿ 4 ವಿಕೆಟ್‌ಗೆ 137 (ಸೌರಭ್ ತಿವಾರಿ 45, ಹಾರ್ದಿಕ್ ಪಾಂಡ್ಯ 40*, ಕೈರಾನ್ ಪೊಲ್ಲಾರ್ಡ್ 15*, ರವಿ ಬಿಷ್ಣೋಯಿ 25ಕ್ಕೆ 2)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts