More

    ಮುಂಬೈನಿಂದ ಮಂಡ್ಯಕ್ಕೆ ತಂದು ಶವ ಸಂಸ್ಕಾರ: ಮೇಲುಕೋಟೆ ಸುತ್ತಮುತ್ತ ಹೆಚ್ಚಿದ ಆತಂಕ

    ಮಂಡ್ಯ: ಪಾಂಡವಪುರ ತಾಲೂಕಿನ ಬಿ.ಕೊಡಗಳ್ಳಿ ಗ್ರಾಮಕ್ಕೆ ಮಹಾರಾಷ್ಟ್ರ ಆ್ಯಂಬುಲೆನ್ಸ್‌ನಲ್ಲಿ ಶವ ತಂದು ಅಂತ್ಯ ಸಂಸ್ಕಾರ ಮಾಡಿದ್ದು, ಅವರ ಸಂಬಂಧಿಕರಿಗೆ ಸೋಂಕು ತಗುಲಿದೆ. ಗ್ರಾಮದ 4ರಿಂದ 8 ಜನರಿಗೆ ಸೋಂಕು ದೃಢವಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಏಪ್ರಿಲ್ ಕೊನೆ ವಾರದಲ್ಲಿ ಮೃತ ದೇಹವನ್ನು ಮಹಾರಾಷ್ಟ್ರದ ಆ್ಯಂಬುಲೆನ್ಸ್‌ನಲ್ಲಿ ಹಳ್ಳಿಗೆ ತಂದು ಅಂತ್ಯಕ್ರಿಯೆ ಮಾಡಲಾಗಿದೆ. ಇದಕ್ಕೆ ತಾಲೂಕಿನ ಅಧಿಕಾರಿಗಳು ಸಾಕ್ಷಿಯಾಗಿದ್ದಾರೆ. ಈಗ ಮೃತ ವ್ಯಕ್ತಿಯ ಸಂಬಂಧಿಕರಿಗೆ ಸೋಂಕು ತಗುಲಿದೆ. ಮಾತ್ರವಲ್ಲ ಅವರು ಮೇಲುಕೋಟೆ ಹಾಗೂ ಅಕ್ಕಪಕ್ಕದ ಹಳ್ಳಿಗಳಲ್ಲಿ ತಿರುಗಾಡಿದ್ದಾರೆ.

    ಇದನ್ನೂ ಓದಿ: ಸುಳ್ಳು ಹೇಳಿ ಬಾಯ್​ಫ್ರೆಂಡ್​ ನೋಡಲು ಹೋದ ಕೇರಳ ಬ್ಯೂಟಿಷಿಯನ್ ದುರಂತ ಅಂತ್ಯವಾಗಿದ್ದು ಹೇಗೆ?​

    ಅಂತ್ಯಕ್ರಿಯೆ ನೆರವೇರಿಸಿದ ಪೌರಕಾರ್ಮಿಕ ಮೇಲುಕೋಟೆಯಲ್ಲಿ ಸ್ವಚ್ಛತಾ ಕಾರ್ಯ ಮಾಡಿದ್ದಾರೆ. ಹಾಗಾಗಿ ಸಾಕಷ್ಟು ಜನರಿಗೆ ಸೋಂಕು ತಗುಲಿರಬಹುದು ಎಂಬ ಆತಂಕ ವ್ಯಕ್ತವಾಗುತ್ತಿದೆ. ಅಧಿಕಾರಿಗಳ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರ ನಡೆದಿದ್ದರೂ ಆ ಕುಟುಂಬ ಸದಸ್ಯರ ಬಗ್ಗೆ ಏಕೆ ನಿಗಾ ವಹಿಸಲಿಲ್ಲ. ಮೃತ ವ್ಯಕ್ತಿಗೂ ಸೋಂಕು ತಗುಲಿತ್ತೆ ಎಂಬ ಅನುಮಾನಗಳು ವ್ಯಾಪಕವಾಗಿವೆ.

    ವಿಶ್ವದೆಲ್ಲೆಡೆ ಕರೊನಾ ಚಿಂತೆ ಕಾಡುತ್ತಿದ್ದರೆ ಪಾಂಡವಪುರ ತಾಲೂಕಿನಲ್ಲಿ ಕಲ್ಲಿನ ಚಿಂತೆ ಮಾಡುತ್ತಿದ್ದರು. ಅಕ್ರಮವಾಗಿ ಕಲ್ಲು ತುಂಬಿಕೊಂಡು ಹೋಗುತ್ತಿದ್ದ ಲಾರಿ ತಡೆದ ಪೊಲೀಸರಿಗೆ ಬೆದರಿಕೆ ಹಾಕಿ ಅವರನ್ನು ಅಮಾನತು ಮಾಡುವಂತೆ ಪಟ್ಟು ಹಿಡಿದವರು ಈ ಬಗ್ಗೆ ಕ್ಯಾರೆ ಅನ್ನಲಿಲ್ಲ. ಪರಿಣಾಮ ತಾಲೂಕಿಗೆ ಕರೊನಾ ಬಂದಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಇದನ್ನೂ ಓದಿ: ಅಣ್ಣನನ್ನು ಬಾವಿಗೆ ಎಸೆದು ತಂಗಿಯನ್ನು ಹೊತ್ತೊಯ್ದ ಕಾಮುಕರು: ಮೂವರು ಅಪ್ರಾಪ್ತರು ಸೇರಿ 7 ಮಂದಿಯಿಂದ ದುಷ್ಕೃತ್ಯ

    VIDEO| ದೋಸೆ, ಇಡ್ಲಿ ಮಾಡ್ಕಂಡು ಉಣ್ಣದು ಕಲಿತುಕೊಳ್ಳಿ: ಹಳ್ಳಿ ಸೊಗಡಿನಲ್ಲಿ ಕರೊನಾ ಎಚ್ಚರಿಕೆ ನೀಡಿದ ಶಾಸಕ ಶಿವಲಿಂಗೇಗೌಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts