More

    VIDEO| ನಾವೇನು ಪಾಕಿಸ್ತಾನದವ್ರ?: ಸರ್ಕಾರ, ಊರಿನವರ ವಿರುದ್ಧ ಮುಂಬೈ ಕನ್ನಡತಿ ಅಸಮಾಧಾನ

    ಮಂಡ್ಯ: ದೇಶದಲ್ಲೇ ಅತಿ ಹೆಚ್ಚು ಕರೊನಾ ವೈರಸ್​ ಪ್ರಕರಣಗಳು ಮುಂಬೈನಲ್ಲಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ವಾಣಿಜ್ಯ ನಗರಿಯಲ್ಲಿ ಸಿಲುಕಿರುವ ಕನ್ನಡಿಗರು ತವರಿಗೆ ಮರಳಲು ಪರದಾಡುತ್ತಿದ್ದು, ರಾಜ್ಯ ಸರ್ಕಾರ ಹಾಗೂ ಊರಿನ ಜನರ ಬಗ್ಗೆ ಮಂಡ್ಯ ಮೂಲದ ಯುವತಿಯೊಬ್ಬಳು ಅಸಮಾಧಾನ ಹೊರಹಾಕಿದ್ದಾರೆ.

    ನಮ್ಮನ್ನು ಬರಬೇಡಿ ಅಂದ್ರೆ ಹೇಗೆ? ನಿಮ್ಮ ಕುಟುಂಬದವರಿಗೂ ಹೀಗೆ ಹೇಳ್ತಿದ್ರಾ? ನಾವು ಟೆಸ್ಟ್ ಮಾಡಿಸಿಕೊಂಡೆ‌‌ ನಮ್ಮೂರಿಗೆ ಬರ್ತೀವಿ, ದಯವಿಟ್ಟು ನಮ್ಮ ಪರವಾಗಿರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ: VIDEO| ಹೆದ್ದಾರಿಯಲ್ಲಿ ಕಾರು ಚಲಾಯಿಸುವಾಗ ಸಿಕ್ಕಿಬಿದ್ದ 5 ವರ್ಷದ ಬಾಲಕನ ಹೇಳಿಕೆ ಕೇಳಿ ದಂಗಾದ ಪೊಲೀಸರು!

    ನಾವೇನು ಪಾಕಿಸ್ತಾನದವರ, ನಾವು ಎಲ್ಲೇ ಹೋದರು ನಾವು ಕನ್ನಡಿಗರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಆದರೆ, ಮುಂಬೈ ಕನ್ನಡಿಗರನ್ನು ಕರ್ನಾಟಕ ಸರ್ಕಾರ ಮರೆತಿದೆ. ಚುನಾವಣೆ ಟೈಮಲ್ಲಿ ಬಸ್ ವ್ಯವಸ್ಥೆ ಮಾಡುವ ಜ‌ನನಾಯಕರು ಸಂದಿಗ್ಧ ಸಮಯದಲ್ಲಿ ನಮ್ಮನ್ನು ಮರೆತಿದ್ದಾರೆ. ಇನ್ನೂ ನಮ್ಮ ಊರಿನವರೆ ನಮ್ಮನ್ನು ಬರಬೇಡಿ ಎನ್ನುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಯಾರೋ ಮೂವರಿಗೆ ಸೋಂಕು ಬಂದ ತಕ್ಷಣ ನಮಗೆಲ್ಲರಿಗೂ ಬಂದಿದೆ ಅಂತಲ್ಲ. ನಾವು ಕೊರೊನಾ ಬಂದು ಸಾಯೋದಕ್ಕಿಂತ ಹಸಿವಿನಿಂದಲೇ ಸಾಯುತ್ತೇವೆ. ದಯವಿಟ್ಟು ನಮ್ಮ ಸಹಾಯಕಕ್ಕೆ ಸರ್ಕಾರ ಬರಬೇಕು. ಸರ್ಕಾರ ಬಸ್ ವ್ಯವಸ್ಥೆ ಮಾಡದಿದ್ರು ಪರವಾಗಿಲ್ಲ, ನಮ್ಮ ಸ್ವಂತ ವಾಹನಗಳಲ್ಲಿ‌ ನಮ್ಮ ಊರು ಸೇರಲು ಅವಕಾಶ ಕೊಡಬೇಕು ಎಂದು ಮುಂಬೈ ಕನ್ನಡತಿ ಮನವಿ ಮಾಡಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ಇದನ್ನೂ ಓದಿ: ಉಗ್ರರೊಂದಿಗಿನ ಕಾದಾಟದಲ್ಲಿ ಹುತಾತ್ಮರಾದ ಪತಿ ಮೃತದೇಹದ ಮುಂದೆ ಪತ್ನಿಯ ಶೋಕ: ಭಾವುಕರಾದ ನೆಟ್ಟಿಗರು

    ನಾವೇನು ಪಾಕಿಸ್ತಾನದವ್ರ?: ಸರ್ಕಾರ, ಊರಿನವರ ವಿರುದ್ಧ ಮುಂಬೈ ಕನ್ನಡತಿ ಅಸಮಾಧಾನ

    ಮಂಡ್ಯ: ದೇಶದಲ್ಲೇ ಅತಿ ಹೆಚ್ಚು ಕರೊನಾ ವೈರಸ್​ ಪ್ರಕರಣಗಳು ಮುಂಬೈನಲ್ಲಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ವಾಣಿಜ್ಯ ನಗರಿಯಲ್ಲಿ ಸಿಲುಕಿರುವ ಕನ್ನಡಿಗರು ತವರಿಗೆ ಮರಳಲು ಪರದಾಡುತ್ತಿದ್ದು, ರಾಜ್ಯ ಸರ್ಕಾರ ಹಾಗೂ ಊರಿನ ಜನರ ಬಗ್ಗೆ ಮಂಡ್ಯ ಮೂಲದ ಯುವತಿಯೊಬ್ಬಳು ಅಸಮಾಧಾನ ಹೊರಹಾಕಿದ್ದಾರೆ.#Mumbai #Coronavirus #Lockdown #KannadaGirl #MumbaiKannada #SocialMedia

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಮೇ 5, 2020

    ಮಂಡ್ಯವನ್ನು ಬಿಡದ ಕರೊನಾ ಗುಮ್ಮ: ಸಕ್ಕರೆ ನಾಡಿನಲ್ಲಿ ಮನೆಮಾಡಿದ ಮತ್ತೊಂದು ಆತಂಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts