ಗಾಳಿಪಟ ಹಿಡಿಯಲು ಹೋದ ಬಾಲಕನನ್ನು ಹಿಂಬಾಲಿಸಿದ ಜವರಾಯ: ಸಂಕ್ರಾಂತಿಯಂದೇ ದುರಂತ ಸಾವು!

blank

ಮುಂಬೈ: ಗಾಳಿಪಟ ಹಿಡಿಯಲು ಓಡಿ ಹೋಗುತ್ತಿದ್ದ 10 ವರ್ಷದ ಬಾಲಕನೊಬ್ಬ ಆಕಸ್ಮಿಕವಾಗಿ ಹಸುವಿನ ದೊಡ್ಡ ಸಗಣಿ ಗುಂಡಿಯಲ್ಲಿ ಸಿಲುಕಿ ದುರಂತ ಸಾವಿಗೀಡಾಗಿರುವ ಘಟನೆ ಮುಂಬೈನ ಕಂಡಿವಲಿ ಏರಿಯಾದಲ್ಲಿ ಗುರುವಾರ ನಡೆದಿದೆ.

ಮಕರ ಸಂಕ್ರಾಂತಿ ಹಬ್ಬದ ದಿನವಾದ ಗುರುವಾರ ಮಧ್ಯಾಹ್ನದ ವೇಳೆ ಕಂಡಿವಲಿಯ ಲಾಲ್ಜಿ ಪಡ ಬಳಿಯಿರುವ ಎಸ್​ಆರ್​ಎ ಕಾಲನಿಯಲ್ಲಿ ನಡೆದಿದೆ. ಪೊಲೀಸ್​ ಮೂಲಗಳ ಪ್ರಕಾರ ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ಬಾಲಕ ಇಡೀ ದಿನ ಗಾಳಿಪಟ ಜತೆ ಆಟವಾಡುತ್ತಿದ್ದ ಎಂದು ತಿಳಿಸಿದ್ದಾರೆ.

ಇದನ್ನೂ ಓದಿರಿ: ಮಗ ಸತ್ತ ವರ್ಷದ ನಂತರ ಸಿಕ್ತು ಡೆತ್‌ನೋಟ್‌! ಅದರಲ್ಲಿತ್ತು ಪತ್ನಿಯ ಕಾಮಪುರಾಣ

ತುಂಡಾದ ದಾರದಿಂದ ಬೇರ್ಪಟ್ಟ ಗಾಳಿಪಟ ಬಾಲಕ ವಾಸವಿದ್ದ ಕಾಲನಿಯ ದನದ ಕೊಟ್ಟಿಗೆಯತ್ತ ಹಾರಿ ಹೋಗಿದೆ. ಗಾಳಿಪಟ ಹೋಗುತ್ತಿರುವ ಜಾಗದಲ್ಲಿ ಭಾರಿ ಪ್ರಮಾಣದ ಸಗಣಿಯ ರಾಶಿಯಿದೆ ಎಂಬುದನ್ನು ಅರಿಯದ ಬಾಲಕ ಅದನ್ನೇ ಹಿಂಬಾಲಿಸಿದ್ದಾನೆ. ಗಾಳಿಪಟ ಹಿಡಿಯಲು ಮೇಲಕ್ಕೆ ಜಿಗಿದವನು ಸಗಣಿಯ ರಾಶಿಯ ಒಳಗೆ ಬಿದ್ದಿದ್ದಾನೆ.

ತಕ್ಷಣ ಬಾಲಕ ಕಿರುಚುವುದನ್ನು ಕೇಳಿದ ದನದ ಕೊಟ್ಟಿಗೆಯ ಪಕ್ಕದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಕೊಂಡಿದ್ದ ಕೆಲಸಗಾರರು ಇತರರಿಗೆ ಮಾಹಿತಿ ನೀಡಿದ್ದಾರೆ. ಗುಂಡಿ ತುಂಬಾ ಆಳವಾಗಿದ್ದರಿಂದ ಅದರೊಳಗೆ ಇಳಿಯಲು ಸ್ಥಳೀಯರಿಗೆ ಸಾಧ್ಯವಾಗಲಿಲ್ಲ. ಪೊಲೀಸ್​ ಅಧಿಕಾರಿಗಳು ಮತ್ತು ಅಗ್ನಿಶಾಮಕ ಸಿಬ್ಬಂದಿ ಬಂದರೂ ಸಹ ಒಳಗೆ ಹೋಗಲು ಆಗಲಿಲ್ಲ.

ಇದನ್ನೂ ಓದಿರಿ: 5 ತಿಂಗಳ ಮಗು ಎತ್ಕೊಂಡು ಬೆತ್ತಲೆಯಾಗಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ: ಶ್ರೀಮಂತೆಯ ದುರಂತ ಕತೆಯಿದು!

ಬಾಲಕ ಗುಂಡಿಯೊಳಗೆ ಸಂಪೂರ್ಣವಾಗಿ ಮುಳುಗಿದ್ದ. ಕಟ್ಟಡ ನಿರ್ಮಾಣ ಕೆಲಸಗಾರರು ಮತ್ತು ಕ್ರೇನ್​ ಸಹಾಯದಿಂದ ಕೊನೆಗೂ ಬಾಲಕನನ್ನು ಹೊರಗೆ ತೆಗೆಯಲಾಯಿತು. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಅಷ್ಟರಲ್ಲಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಕಂಡಿವಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ಯುವತಿಗೆ ಮನಸೋತು ಸಲಿಂಗಕಾಮ ತೊರೆದವನ ರುಂಡ-ದೇಹ ಇಬ್ಭಾಗ! ಬೆಚ್ಚಿಬೀಳಿಸುತ್ತೆ ಈ ಘಟನೆ

ತಾಯಿ ಇಲ್ಲದ ಮಗಳ ಸಾವಿನ ಹಿಂದೆ ತಂದೆ ಕೈವಾಡ? ಪೊಲೀಸ್​ ಠಾಣೆ ಮೆಟ್ಟಿಲೇರಿದ ಅಜ್ಜ

ಫ್ರೀ ಇನ್ನರ್​ವೇರ್​ ಆಫರ್​ಗೆ ಮರುಳಾದ ಯುವತಿ! ಮುಂದೇನಾಯ್ತು ಕೇಳಿದರೆ ಶಾಕ್​ ಆಗೋದು ಗ್ಯಾರಂಟಿ

Share This Article

ಬೆಳಗ್ಗೆ ಹೊತ್ತು ವಾಲ್​ನಟ್ಸ್​​ ಸೇವನೆ ಎಷ್ಟು ಉತ್ತಮ? ಇಲ್ಲಿದೆ ಉಪಯುಕ್ತ ಮಾಹಿತಿ | Walnuts

ಬೆಂಗಳೂರು: ಉತ್ತಮ ಆರೋಗ್ಯಕ್ಕಾಗಿ ಇಂದು ಅನೇಕರು ಹೊಸ ಹೊಸ ರೀತಿಯ ಕಸರತ್ತನ್ನು ಮಾಡುವಲ್ಲಿ ಮುಂಚೂಣಿಯಲ್ಲಿದ್ದಾರೆ. ಕೆಲವರು…

ಆಯುಷ್ಯ ಇರುವಾಗ ಸಾಯುವವರೆಗೆ ಬದುಕಲೇಬೇಕಲ್ಲ!

| ಡಾ.ಕೆ.ಪಿ. ಪುತ್ತೂರಾಯ ಇದು ಸಹಿಸಿಕೊಳ್ಳಲಾಗದ ವೃದ್ಯಾಪಕ್ಕೆ ಒಳಗಾಗಿ ಸಾಯಲಾಗದೆ ಸಾವಿನ ಕ್ಷಣವನ್ನೇ ಎದುರು ನೋಡುತ್ತಿರುವ…

ಋತುಸ್ರಾವದ ಸಮಯದಲ್ಲಿ ಮೊಸರು ಸೇವಸಬಹುದೇ.. ಬೇಡವೇ; ಗೊಂದಲಕ್ಕೆ ಇಲ್ಲಿದೆ ಪರಿಹಾರ | Health Tips

ಮೊಸರು ಅಥವಾ ಉಪ್ಪಿನಕಾಯಿ ತಿನ್ನುವುದರಿಂದ ಋತುಸ್ರಾವದ ಸಮಯದಲ್ಲಿ ಸಮಸ್ಯೆಯಾಗುತ್ತದೆ ಎಂಬ ನಂಬಿಕೆಯಿದೆ. ಆದರೆ ಯಾವುದೇ ಆಹಾರವು…