More

    ಒತ್ತಡ ರಹಿತ ಹೂಡಿಕೆಗಾಗಿ ಮಲ್ಟಿ ಅಸೆಟ್​ ಮ್ಯೂಚುವಲ್​ ಫಂಡ್​ ನಿಮ್ಮ ಆಯ್ಕೆಯಾಗಿರಲಿ​

    | ಶ್ರೀಕಾಂತ್​ ಮಾತೃಬಾಯಿ, ಸಿಇಒ, ಶ್ರೀಕವಿ ಮನಿ

    ಪ್ರಸ್ತುತ ಜಾಗತಿಕವಾಗಿ ಹೆಚ್ಚಾಗುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಘ್ನತೆ ನಡುವೆ ಜಾಗತಿಕ ಷೇರು ಮಾರುಕಟ್ಟೆಗಳು ಸಾಕಷ್ಟು ಏರಿಳಿತಕ್ಕೆ ಸಾಕ್ಷಿಯಾಗುತ್ತಿದ್ದು, ಇದೇ ಪರಿಸ್ಥಿತಿ ಕೆಲಕಾಲ ಹೀಗೆ ಉಳಿಯಲಿದೆ. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ಯಾವ ರೀತಿ ಹೂಡಿಕೆ ಮಾಡಬೇಕು ಎಂಬ ಗೊಂದಲ ನಿಮ್ಮಲ್ಲಿದ್ದರೆ, ಹೂಡಿಕೆಯ ಮೂಲಗಳಿಗೆ ಅಂಟಿಕೊಳ್ಳುವ ಮೂಲಕ ನಿಮ್ಮ ಎಲ್ಲ ಒತ್ತಡವನ್ನು ಬದಿಗಿಡುವ ಸಮಯ ಇದಾಗಿದೆ.

    ಹೂಡಿಕೆಯ ಮೂಲ ಅಂತಾ ಬಂದಾಗ ಎರಡು ಪ್ರಮುಖ ಅಂಶಗಳು ಮಹತ್ವದ ಪಾತ್ರ ವಹಿಸುತ್ತವೆ. ಅವುಗಳೆಂದರೆ, ಅಸೆಟ್​ ಅಲೋಕೇಶನ್​ (ಆಸ್ತಿ ಹಂಚಿಕೆ) ಮತ್ತು ಡೈವರ್ಸಿಫಿಕೇಶನ್​ ( ವೈವಿಧ್ಯೀಕರಣ ಅಂದರೆ ಬೇರೆ ಬೇರೆ ಉದ್ಯಮಗಳಲ್ಲಿ ಬಂಡವಾಳ ಹೂಡುವುದು). ಈ ಎರಡು ಅಂಶಗಳು ಬರೀ ಮುಖ್ಯವಲ್ಲ, ಒತ್ತಡ ಮುಕ್ತ ರೀತಿಯಲ್ಲಿ ಯಶಸ್ವಿ ಸಂಪತ್ತು ಸೃಷ್ಟಿಗಾಗಿ ಪ್ರಮುಖ ಹೂಡಿಕೆಯ ತಂತ್ರಗಳಾಗಿವೆ. ಬಹು ಆಸ್ತಿ ಹೂಡಿಕೆ (ಮಲ್ಟಿ ಅಸೆಟ್​ ಇನ್ವೆಸ್ಟ್​ಮೆಂಟ್​) ವಿಧಾನವು, ಡೈನಾಮಿಕ್ ಅಸೆಟ್​ ಅಲೋಕೇಶನ್​ ಮತ್ತು ಡೈವರ್ಸಿಫಿಕೇಶನ್​ ಅಂಶಗಳ ಪರಿಪೂರ್ಣ ಸಂಯೋಜನೆಯಾಗಿದ್ದು, ಮಾರುಕಟ್ಟೆಯ ಚಂಚಲತೆ ಸಂದರ್ಭಗಳಲ್ಲಿ ಪರಿಹಾರ ಆಧಾರಿತ ಹೂಡಿಕೆಯ ಒಂದು ಉತ್ತಮ ತಂತ್ರವಾಗಿದೆ.

    ಹೆಸರೇ ಸೂಚಿಸುವಂತೆ ಬಹು ಆಸ್ತಿ ಹೂಡಿಕೆ ವಿಧಾನವು, ಮೂರು ಅಥವಾ ಅದಕ್ಕಿಂತ ಹೆಚ್ಚಿನ ಆಸ್ತಿ ವರ್ಗಗಳಲ್ಲಿ ಸೂಕ್ತವಾದ ಅನುಪಾತದಲ್ಲಿ ನಿಮ್ಮ ಬಂಡವಾಳವನ್ನು ನಿಯೋಜಿಸುವುದನ್ನು ಒಳಗೊಂಡಿರುತ್ತದೆ. ವಿಶಿಷ್ಟವಾಗಿ, ಇಕ್ವಿಟಿ, ಸಾಲ, ಚಿನ್ನ ಮತ್ತು ರಿಯಲ್ ಎಸ್ಟೇಟ್‌ನಂತಹ ಸ್ವತ್ತುಗಳು, ಬಹು ಆಸ್ತಿ ಹೂಡಿಕೆಯ ಪ್ರಮುಖ ಅಂಶಗಳಾಗಿವೆ. ಇದರೊಂದಿಗೆ ಆಸ್ತಿ ಹಂಚಿಕೆ, ಅಪಾಯ ತಗ್ಗಿಸುವಿಕೆ ಮತ್ತು ದೀರ್ಘಾವಧಿಯಲ್ಲಿ ಗರಿಷ್ಠ ಆದಾಯ ಎಂಬ ಮೂರು ಉದ್ದೇಶಗಳನ್ನು ಪೂರೈಸಲಾಗುತ್ತದೆ.

    ವಿಭಿನ್ನ ಆಸ್ತಿ ವರ್ಗಗಳು, ವಿವಿಧ ಷೇರು ಮಾರುಕಟ್ಟೆಗಳಿಗೆ ಸಂಬಂಧಿಸಿದ ಸನ್ನಿವೇಶಗಳಿಗೆ ವಿಭಿನ್ನವಾಗಿ ವರ್ತಿಸುತ್ತವೆ ಮತ್ತು ಪ್ರತಿಕ್ರಿಯಿಸುತ್ತವೆ. ಹೀಗಾಗಿ ಅವು ತನ್ನದೇ ಆದ ವಿಭಿನ್ನ ಆವೃತ್ತಿ ಮತ್ತು ಮೌಲ್ಯದ ಡೈನಾಮಿಕ್ಸ್ ಅನ್ನು ಹೊಂದಿವೆ. ಹೀಗಾಗಿ ಬಹು ಆಸ್ತಿ ಹೂಡಿಕೆಯು, ಹೂಡಿಕೆದಾರರಿಗೆ ಎಲ್ಲ ಆಸ್ತಿ ವರ್ಗಗಳಲ್ಲಿ ಅತ್ಯುತ್ತಮ ಲಾಭಗಳನ್ನು ಪಡೆಯುವುದನ್ನು ಖಚಿತಪಡಿಸುತ್ತದೆ ಮತ್ತು ಸಮತೋಲಿತ ವಿಧಾನದೊಂದಿಗೆ ತುಲನಾತ್ಮಕವಾಗಿ ಹೆಚ್ಚು ಸ್ಥಿರ ಮತ್ತು ಅಪಾಯ-ಹೊಂದಾಣಿಕೆಯ ಆದಾಯವನ್ನು ಪಡೆಯಲು ಸಹಕಾರಿಯಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಇಕ್ವಿಟಿಯ ಹೆಚ್ಚಿನ ಬೆಳವಣಿಗೆಯ ನಿರೀಕ್ಷೆಗಳು, ಸಾಲದ ಸ್ಥಿರತೆ, ಚಿನ್ನಕ್ಕೆ ಒಡ್ಡಿಕೊಳ್ಳುವುದರ ಮೂಲಕ ಹಣದುಬ್ಬರದ ವಿರುದ್ಧ ರಕ್ಷಣೆ ಮತ್ತು REIT ಗಳು ಮತ್ತು ಇನ್ವಿಟ್‌ಗಳಂತಹ ರಿಯಲ್ ಎಸ್ಟೇಟ್ ಸಂಬಂಧಿತ ಸಾಧನಗಳ ಪ್ರತಿಫಲವನ್ನು ಒಂದೇ ನಿಧಿಯೊಳಗೆ ಹೆಚ್ಚಿಸುತ್ತದೆ.

    ಬಹು ಆಸ್ತಿ ಹೂಡಿಕೆಯ ಪ್ರಯೋಜನಗಳನ್ನು ಪಡೆದುಕೊಳ್ಳಲು ಇರುವ ಒಂದೇ ಒಂದು ಪರಿಣಾಮಕಾರಿ ಮಾರ್ಗವೆಂದರೆ ಅದು ಮಲ್ಟಿ ಅಸೆಟ್​ ಮ್ಯೂಚುವಲ್​ ಫಂಡ್​. ಫಂಡ್ ಮ್ಯಾನೇಜ್‌ಮೆಂಟ್ ತಂಡದ ಪರಿಣತಿಯನ್ನು ಗಮನಿಸಿದರೆ, ಇಂತಹ ಯೋಜನೆಗಳು ಬದಲಾಗುತ್ತಿರುವ ಮಾರುಕಟ್ಟೆ ಪರಿಸ್ಥಿತಿಗೆ ಅನುಗುಣವಾಗಿ ವಿವಿಧ ಆಸ್ತಿ ವರ್ಗಗಳಿಗೆ ನಿಯೋಜಿಸಲು ಯಶಸ್ವಿ ರೀತಿಯಲ್ಲಿ ಸಜ್ಜುಗೊಂಡಿವೆ. ಈ ಮಲ್ಟಿ ಅಸೆಟ್​ ಫಂಡ್​ ಒಬ್ಬರ ಪೋರ್ಟ್‌ಫೋಲಿಯೊದ ಪ್ರಮುಖ ಭಾಗವೆಂದು ಕ್ಷಣ ಮಾತ್ರವೂ ಯೋಚಿಸದೇ ಪರಿಗಣನೆಗೆ ತೆಗೆದುಕೊಳ್ಳಬಹುದೆಂದು ಹೇಳುವ ಅವಶ್ಯಕತೆಯೇ ಇಲ್ಲ.

    ಈ ಬಹು ಆಸ್ತಿ ಹೂಡಿಕೆ ವರ್ಗದಲ್ಲಿ ಅತ್ಯಂತ ಹಳೆಯ ಕೊಡುಗೆಯೆಂದರೆ ICICI ಪ್ರುಡೆನ್ಶಿಯಲ್ ಮಲ್ಟಿ-ಅಸೆಟ್​ ಫಂಡ್. ಈ ಫಂಡ್​ಗೆ 21 ವರ್ಷಗಳ ಟ್ರ್ಯಾಕ್​ ರೆಕಾರ್ಡ್​ ಇದೆ ಮತ್ತು ತನ್ನ ಹೂಡಿಕೆದಾರರಿಗೆ ಆರೋಗ್ಯಕರ ಲಾಭವನ್ನು ಇದು ನೀಡುತ್ತಾ ಬಂದಿದೆ. ಇಂದಿನ ಆರಂಭದ ಸಮಯದಲ್ಲಿ 10 ಲಕ್ಷ ರೂ. ಹೂಡಿಕೆಯೂ 5.5 ಕೋಟಿ ರೂ. ಆಗಿರುತ್ತದೆ. ನಿಫ್ಟಿ 50 TRI ನಲ್ಲಿ ಇದೇ ರೀತಿಯ ಹೂಡಿಕೆಯು ಇಂದು 2.7 ಕೋಟಿ ರೂ. ಆಗಿರುತ್ತದೆ.

    ಮಲ್ಟಿ ಅಸೆಟ್​ ಫಂಡ್​ನೊಂದಿಗೆ ಈ ವರ್ಷವನ್ನು ಅತ್ಯುತ್ತಮವಾಗಿಸಿಕೊಳ್ಳಿ

    ರಶ್ಮಿಕಾ ಫೇಕ್​​​ ವಿಡಿಯೋ: ಡೀಪ್ ಫೇಕ್​​​ ಬಗ್ಗೆ ನೀವು ತಿಳಿದಿರಲೇಬೇಕಾದ ವಿಷಯಗಳಿವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts