More

    ರಶ್ಮಿಕಾ ಫೇಕ್​​​ ವಿಡಿಯೋ: ಡೀಪ್ ಫೇಕ್​​​ ಬಗ್ಗೆ ನೀವು ತಿಳಿದಿರಲೇಬೇಕಾದ ವಿಷಯಗಳಿವು!

    ಬೆಂಗಳೂರು: ಡೀಪ್ ಫೇಕ್ ತಂತ್ರಜ್ಞಾನ ಅಥವಾ ಟೆಕ್ನಾಲಜಿ ಹೊಸದೇನಲ್ಲ. ಆದರೆ ಈ ತಂತ್ರಜ್ಞಾನದಲ್ಲಿ ಕೆಲವು ಹೊಸ ಹೊಸ ಅಂಶಗಳನ್ನು ಬಳಕೆ ಮಾಡಿಕೊಳ್ಳುತ್ತಿರುವುದರಿಂದ, ಅಪ್​​​ಡೇಟ್​​​ ಆಗುತ್ತಿರುವುದರಿಂದ ಇದೊಂದು ಅತ್ಯಾಧುನಿಕ ತಂತ್ರಜ್ಞಾನವೆನಿಸಿಕೊಂಡಿದೆ. ಅಂದಹಾಗೆ ನಿನ್ನೆಯಷ್ಟೇ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಎಲ್ಲೆಲ್ಲೂ ಸದ್ದು ಮಾಡಿತ್ತು. ಕೊನೆಗೆ ಈ ಕುರಿತು ರಶ್ಮಿಕಾ ಸ್ಪಷ್ಟನೆ ನೀಡಿದ್ದಲ್ಲದೆ, ಅಮಿತಾಬ್​​​​ ಸೇರಿದಂತೆ ಹೆಸರಾಂತ ಸೆಲೆಬ್ರಿಟಿಗಳು, ರಾಜಕಾರಣಿಗಳು ಡೀಪ್ ಫೇಕ್ ವಿಡಿಯೋ ಕುರಿತು ಕಿಡಿಕಾರಿದ್ದರು. ಹಾಗಾದರೆ ಈ ಡೀಪ್ ಫೇಕ್ ತಂತ್ರಜ್ಞಾನ ಎಂದರೇನು?, ಈ ವಿಡಿಯೋಗಳನ್ನು ತಯಾರಿಸುವುದು ಹೇಗೆ? ಅವುಗಳನ್ನು ಪತ್ತೆ ಹಚ್ಚುವುದು ಹೇಗೆ ಎಂಬುದರ ಕುರಿತು 10 ಮುಖ್ಯ ಅಂಶಗಳು ಇಲ್ಲಿದೆ. 

    ಏನಿದು ಡೀಪ್ ಫೇಕ್ ತಂತ್ರಜ್ಞಾನ?
    ಒಂದು ರೀತಿಯಲ್ಲಿ ಡೀಪ್ ಫೇಕ್ ತಂತ್ರಜ್ಞಾನವು ಕುಶಲತೆಯಿಂದ ಕೂಡಿದ ಮಾದ್ಯಮವಾಗಿದೆ. ಡೀಪ್ ಫೇಕ್ ವಿಡಿಯೋಗಳನ್ನು ಕೃತಕ ಬುದ್ಧಿಮತ್ತೆ (Artificial Intelligence) ಬಳಸಿಕೊಂಡು ತಯಾರಿಸುತ್ತಾರೆ. ವ್ಯಕ್ತಿಯ ಹೋಲಿಕೆ ಅಥವಾ ಧ್ವನಿ ಬೇರೆಯವರೊಂದಿಗೆ ಹೊಂದುವಂತೆ ಕೃತಕವಾಗಿ ರಚಿಸುತ್ತಾರೆ. ಈ ಮೂಲಕ ಆ ವ್ಯಕ್ತಿ ಎಂದಿಗೂ ಹೇಳದ ಮಾತನ್ನು ಹೇಳಿದಂತೆ ಅಥವಾ ಮಾಡದ ಕೆಲಸವನ್ನು ಮಾಡಿದಂತೆ ಕೃತಕವಾಗಿ ಬಿಂಬಿಸಲಾಗುತ್ತದೆ.

    ವಿಡಿಯೋಗಳನ್ನು ಹೇಗೆ ತಯಾರಿಸಲಾಗುತ್ತದೆ? 
    ಮುಖ್ಯವಾಗಿ ಡೀಪ್ ಫೇಕ್ ತಂತ್ರಜ್ಞಾನವು ಕೃತಕ ಬುದ್ಧಿಮತ್ತೆ (Artificial Intelligence) ಮೇಲೆ ಆಧಾರಿತವಾಗಿರುತ್ತದೆ. ಇನ್ನು ಡೀಪ್ ಫೇಕ್ ವಿಡಿಯೋಗಳನ್ನು ಎನ್ಕೋಡರ್ ಮತ್ತು ಡೀಕೋಡರ್ ನೆಟ್ ವರ್ಕ್​ ಗಳ ಸಂಯೋಜನೆಯಿಂದ ತಯಾರಿಸಲಾಗುತ್ತದೆ. ಸಾಮಾನ್ಯವಾಗಿ ಇದನ್ನು ಜನೆರೇಟಿವ್ ಅಡ್ವರ್ಸೇರಿಯಲ್ ನೆಟ್ ವರ್ಕ್​ (Generative Adversarial Network, GAN) ಸಂದರ್ಭದಲ್ಲಿ ರಚಿಸಲಾಗುತ್ತದೆ. ಎನ್ಕೋಡರ್ ನೆಟ್ ವರ್ಕ್​ ಮೂಲ ವಿಷಯವನ್ನು (ಎಂದರೆ, ಮೂಲ ಮುಖ ಅಥವಾ ಧ್ವನಿ) ವಿಶ್ಲೇಷಿಸಿ, ಅಗತ್ಯ ಫೀಚರ್ಸ್ (ವೈಶಿಷ್ಟ್ಯಗಳು) ಮತ್ತು ಪ್ರಾತಿನಿಧ್ಯವನ್ನು ಹೊರತೆಗೆಯುತ್ತದೆ. ಈ ಫೀಚರ್ಸ್ ಗಳನ್ನು ಡೀಕೋಡರ್ ನೆಟ್ ವರ್ಕ್​ ಗೆ ರವಾನಿಸಲಾಗುತ್ತದೆ. ಇದು ಹೊಸ ವಿಷಯವನ್ನು (ಎಂದರೆ ಹೊಸ ಮುಖ ಅಥವಾ ಧ್ವನಿ) ಸೃಷ್ಟಿಸುತ್ತದೆ.

    ಈ ಪ್ರಕ್ರಿಯೆ ಪುನರಾವರ್ತನೆ
    ಡೀಪ್ ಫೇಕ್ ವಿಡಿಯೋಗಳ ಸಂದರ್ಭದಲ್ಲಿ ನಿರಂತರತೆಯನ್ನು ಖಾತ್ರಿಗೊಳಿಸಲು, ವಿಡಿಯೋದ ಪ್ರತಿ ಫ್ರೇಮ್ ಗೆ ಈ ಮೇಲ್ಕಂಡ ಪ್ರಕ್ರಿಯೆಯನ್ನು ಪುನರಾವರ್ತಿಸಲಾಗುತ್ತದೆ. GANಗಳು ನಕಲಿ ವಿಷಯವನ್ನು (ಮುಖ ಅಥವಾ ಧ್ವನಿ) ರಚಿಸುವ ಜನೆರೇಟರ್ ನೆಟ್ ವರ್ಕ್​ ಮತ್ತು ನೈಜ ವಿಷಯದಿಂದ (ನೈಜ ಮುಖ ಅಥವಾ ಧ್ವನಿ) ನಕಲಿ ವಿಷಯವನ್ನು ಪ್ರತ್ಯೇಕಿಸುವ ನೆಟ್ ವರ್ಕ್​ ಮೂಲಕ ಕಾರ್ಯನಿರ್ವಹಿಸುತ್ತವೆ.

    ಪತ್ತೆ ಹಚ್ಚುವುದು ಹೇಗೆ?
    ಡೀಪ್ ಫೇಕ್ ವಿಡಿಯೋಗಳನ್ನು ಗುರುತಿಸಲು, ದೃಶ್ಯ (ವಿಡಿಯೋ)ಅಥವಾ ಧ್ವನಿಯಲ್ಲಿ (ಆಡಿಯೋ) ಕಂಡುಬರುವ ಅಸಾಮಾನ್ಯ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಅಸಹಜ ಮುಖದ ಭಾವ ಅಥವಾ ಹೊಂದಿಕೆಯಾಗದ “ಲಿಪ್-ಸಿಂಕ್” ಗಳನ್ನು ಗಮನಿಸಿದಾಗ ಡೀಪ್ ಫೇಕ್ ಗಳ ಬಣ್ಣ ಬಯಲಾಗುತ್ತದೆ. ಅಸಹಜ ಭಾಷಣದ ಮಾದರಿ, ಸ್ವರ ಅಥವಾ ಧ್ಚನಿಯನ್ನು ಆಲಿಸಿದಾಗ, ವ್ಯತ್ಯಾಸಗಳನ್ನು ಸುಲಭವಾಗಿ ಗುರುತಿಸಬಹುದು.

    ಸುತ್ತಮುತ್ತಲಿನ ಪ್ರದೇಶ ಗಮನಿಸಿ
    ವಿಡಿಯೋದಲ್ಲಿನ ಅಸ್ಪಷ್ಟತೆ, ಬ್ಲರ್ ಆಗುವಿಕೆ, ಮುಂತಾದವುಗಳನ್ನು ಗಮನಿಸಿ. ವಿಡಿಯೋದಲ್ಲಿನ ವ್ಯಕ್ತಿ ಆ ಸುತ್ತಮುತ್ತಲಿನ ಪ್ರದೇಶದಲ್ಲಿ ಇರಬಹುದೇ ಅಥವಾ ಹೊಂದಬಹುದೇ ಎಂದು ಸೂಕ್ಷ್ಮವಾಗಿ ಗಮನಿಸಿ, ವಿಶ್ಲೇಷಿಸಿ.

    ವಿಷಯ ಮತ್ತು ಸಂದರ್ಭ ಅತ್ಯವಶ್ಯಕ
    ವ್ಯಕ್ತಿಯ ನಡವಳಿಕೆ ಅಥವಾ ಹೇಳಿಕೆಗಳಿಗೂ ಮತ್ತು ಆತನ ತಿಳಿದಿರುವ ಗುಣಲಕ್ಷಣಗಳಿಗೂ ಇರುವ ಹೊಂದಿಕೆಯನ್ನು ಸರಿಯಾಗಿ ಪರೀಕ್ಷಿಸಿ ಮತ್ತು ವಿಶ್ಲೇಷಿಸಿ.
    ಮೂಲವನ್ನು ತಿಳಿದುಕೊಳ್ಳಿ. ವಿಶ್ವಾಸಾರ್ಹ ಮೂಲಗಳಿಂದ ಮಾಧ್ಯಮದ ನ್ಯಾಯಸಮ್ಮತೆತೆಯನ್ನು ದೃಢೀಕರಿಸಿ. ವಿಶ್ವಾಸಾರ್ಹ ಮೂಲಗಳಿಂದ ಬಂದಿದ್ದರೆ ಮಾತ್ರ ಪರಿಗಣಿಸಿ,ಇಲ್ಲವಾದಲ್ಲಿ ನಂಬದಿರಿ.

    “ಸ್ಮಾರ್ಟ್​” ಆಗುತ್ತಿವೆ ಡೀಪ್ ಫೇಕ್ 

    ತಂತ್ರಜ್ಞಾನ ಎಷ್ಟು ಮುಂದುವರೆದಿದೆ ಎಂದರೆ, ನಕಲಿ ವಿಷಯವನ್ನು (fake content) ಪತ್ತೆ ಹಚ್ಚವುದು ಕ್ಲಿಷ್ಟಕರವಾಗಿದೆ. ಈ ಮೂಲಕ “ಫೇಕ್” ವಿಷಯವನ್ನು ಪತ್ತೆ ಹಚ್ಚಲು ಹೊಸ ಆವಿಷ್ಕಾರಗಳ, ತಂತ್ರಗಳ ಅವಶ್ಯಕತೆಯು ಹೆಚ್ಚಾಗಿದೆ. ಅಷ್ಟೇ ಅಲ್ಲದೆ, ಕೃತಕ ಬುದ್ಧಿಮತ್ತೆಯ ನೈತಿಕ ಬಳಕೆ (Artificial Intelligence) ಕುರಿತಾದ ಅರಿವು ಜನರಲ್ಲಿ ಮೂಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts