More

    ನಾಲ್ವರು ಆರೋಪಿಗಳ ಬಂಧನ

    ಮೂಲ್ಕಿ: ಮೂಲ್ಕಿಯಲ್ಲಿ ಮೂಡುಬಿದಿರೆ ಚಿನ್ನದ ಮಳಿಗೆ ಮಾಲೀಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
    ಕಾರ್ನಾಡು ದರ್ಗಾರೋಡ್ ನಿವಾಸಿ ಮೊಹಮ್ಮದ್ ಹಸೀಮ್(27), ನಿಸ್ಸಾರ್ ಯಾನೆ ರಿಯಾಜ್(33), ಮೊಹಮ್ಮದ್ ರಾಜಿಂ(24) ಹಾಗೂ ಉಚ್ಚಿಲ ಬಡಾ ಎರ್ಮಾಳ್‌ನ ಅಬೂಬಕ್ಕರ್ ಸಿದ್ದಿಕ್(27)ಬಂಧಿತ ಆರೋಪಿಗಳು. ತಲೆಮರೆಸಿಕೊಂಡಿರುವ ವಫಾ, ಆಸೀಂ, ಬಾವಾ, ಫರಾನ್ ಮತ್ತಿತರರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಲ್ಲೆಗೆ ಬಳಸಿದ ಮಾರಕಾ ಯುಧ ಹಾಗೂ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಮೂಲ್ಕಿ ಇನ್ಸ್‌ಪೆಕ್ಟರ್ ಜಯರಾಂ ಗೌಡ ಹಾಗೂ ಎಸಿಪಿ ರಾಜೇಂದ್ರ ನೇತೃತ್ವದಲ್ಲಿ ರೌಡಿ ನಿಗ್ರಹ ದಳದ ಎರಡು ತಂಡವನ್ನು ರಚಿಸಿ ಆರೋಪಿಗಳಿಗಾಗಿ ಶೋಧ ನಡೆಸಿತ್ತು. ಘಟನೆ ಬ್ಯಾಂಕ್ ಆವರಣದಲ್ಲಿ ನಡೆದ ಹಿನ್ನೆಲೆಯಲ್ಲಿ ಸಮೀಪದ ಎರಡೂ ಬ್ಯಾಂಕ್‌ಗಳ ಸಿಸಿ ಕ್ಯಾಮರಾ ಫೂಟೇಜ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅದರಲ್ಲಿ ಎಲ್ಲ ಕೃತ್ಯಗಳೂ ದಾಖಲಾಗಿವೆ.

    ಹಿಂದೆಯೂ ಹಲ್ಲೆ ನಡೆದಿತ್ತು
    ಮುನೀರ್ ಹಾಗೂ ದಾಳಿ ನಡೆಸಿದ್ದ ತಂಡದ ನಡುವೆ ಈ ಹಿಂದೆಯೂ ಹಲ್ಲೆ ಪ್ರಕರಣ ನಡೆದಿತ್ತು. ಈ ಪ್ರಕರಣ ಠಾಣೆಯಲ್ಲಿ ರಾಜಿ ಪಂಚಾಯಿತಿ ಮೂಲಕ ಮುಗಿದಿತ್ತು. ಇದೇ ಪ್ರಕರಣ ಶುಕ್ರವಾರ ಮತ್ತೆ ಮುನ್ನೆಲೆಗೆ ಬಂದು ಮಾತಿಗೆ ಮಾತು ಬೆಳೆದು ಮುನೀರ್ ಕಾರ್ನಾಡು, ಅವರ ಪುತ್ರ ಹಯಾಜ್ ಹಾಗೂ ಅಳಿಯ ಅಬ್ದುಲ್ ಲತೀಫ್ ಮೇಲೆ ತಂಡವೊಂದು ಮಾರಕಾಯುಧಗಳಿಂದ ಹಲ್ಲೆ ನಡೆಸಿತ್ತು. ಘಟನೆಯಲ್ಲಿ ಮೂಡುಬಿದಿರೆ ಚಿನ್ನದ ಮಳಿಗೆ ಮಾಲೀಕ ಅಬ್ದುಲ್ ಲತೀಫ್ ಸಾವನ್ನಪ್ಪಿದ್ದರೆ, ಮುನೀರ್ ಕಾರ್ನಾಡು ಹಾಗೂ ಹಯಾಜ್ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts