ನವದೆಹಲಿ: ಎರಡು ವಿಶ್ವಕಪ್ ಪ್ರಶಸ್ತಿಗಳನ್ನು ಗೆದ್ದುಕೊಟ್ಟ ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಶನಿವಾರ ನಿವೃತ್ತಿ ಪ್ರಕಟಿಸಿದ ಬಳಿಕ ಅವರಿಗೆ ಕ್ರಿಕೆಟ್ ವಲಯ ಮತ್ತು ಕ್ರಿಕೆಟೇತರ ಕ್ಷೇತ್ರದಿಂದ ಅಪಾರ ಗೌರವ ಸಲ್ಲಿಕೆಯಾಗುತ್ತಿದೆ. ಎಲ್ಲರೂ ಈಗ ಧೋನಿ ಗುಣಗಾನ ಮಾಡುತ್ತಿದ್ದಾರೆ. ಈ ನಡುವೆ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರೊಬ್ಬರು ಒಂದು ಹೆಜ್ಜೆ ಮುಂದೆ ಹೋಗಿ, ಧೋನಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಧ್ಯಪ್ರದೇಶದ ಭೋಪಾಲ್ ಶಾಸಕ ಪಿಸಿ ಶರ್ಮ ಎಂಬವರು, ಧೋನಿ ದೇಶದ ರತ್ನ ಎಂದು ಟ್ವೀಟ್ ಮಾಡಿದ್ದಾರೆ. ಜತೆಗೆ ಧೋನಿ ಭಾರತೀಯ ಕ್ರಿಕೆಟ್ ಅನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಹೀಗಾಗಿ ಅವರಿಗೆ ಭಾರತರತ್ನ ನೀಡಿ ಗೌರವಿಸಬೇಕೆಂದು ಹೇಳಿದ್ದಾರೆ.
ಇದನ್ನೂ ಓದಿ: ಧೋನಿ ವಿದಾಯದ ಬೆನ್ನಲ್ಲೇ ಯುವರಾಜ್ ನಿವೃತ್ತಿಯಿಂದ ವಾಪಸ್ ಆಗ್ತಾರಾ?
ಭಾರತ ಪರ 90 ಟೆಸ್ಟ್, 350 ಏಕದಿನ ಮತ್ತು 98 ಟಿ20 ಪಂದ್ಯಗಳನ್ನು ಆಡಿರುವ 39 ವರ್ಷದ ಧೋನಿ, 2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಕೊನೆಯದಾಗಿ ಆಡಿದ್ದರು. ಐಸಿಸಿಯ ಎಲ್ಲ ಪ್ರಶಸ್ತಿಗಳನ್ನು ಗೆದ್ದುಕೊಂಡ ಏಕೈಕ ನಾಯಕ ಎಂಬ ಹೆಗ್ಗಳಿಕೆ ಅವರದಾಗಿದೆ.
भारतीय क्रिकेट को पूरी दुनिया में विजेता के रूप में स्थापित करने वाले "देश के रत्न" महान कप्तान महेंद्र सिंह धोनी को भारत-रत्न से सम्मानित किया जाना चाहिये। @msdhoni @PMOIndia #pcsharmainc #MSDhoni
— P. C. Sharma (@pcsharmainc) August 16, 2020
ಚೀನಾ ಲಿಂಕ್ ಇದ್ದರೂ, ಡ್ರೀಮ್11 ಜತೆ ಪ್ರಾಯೋಜಕತ್ವ ಒಪ್ಪಂದ ಸಮರ್ಥಿಸಿಕೊಂಡ ಬಿಸಿಸಿಐ