More

    ದೇಶದ ಪ್ರತಿಷ್ಠಿತ ನಗರಗಳಲ್ಲಿ ಮನೆ ಖರೀದಿಸಿದ್ದಾರೆ ಎಂಎಸ್​ ಧೋನಿ..

    ಮುಂಬೈ: ಭಾರತ ತಂಡದ ಮಾಜಿ ನಾಯಕ ಎಂಎಸ್​ ಧೋನಿ, ತವರು ಜಾರ್ಖಂಡ್​ ರಾಜಧಾನಿ ರಾಂಚಿ ಹೊರವಲಯದಲ್ಲಿ ರಿಂಗ್​ ರಸ್ತೆಯಲ್ಲಿ 43 ಎಕರೆ ಪ್ರದೇಶದಲ್ಲಿ  ಫಾರ್ಮ್​ ಹೌಸ್​ ಹೊಂದಿದ್ದಾರೆ. ಜತೆಗೆ ಅದ್ಭುತವಾದ ಮನೆಯನ್ನು ನಿಮಿರ್ಸಿಕೊಂಡಿದ್ದಾರೆ. ಇದೀಗ ಧೋನಿ ಮಹಾರಾಷ್ಟ್ರದ ಪುಣೆಯಲ್ಲೂ ಮನೆ ಖರೀದಿಸಿದ್ದಾರೆ. ಪುಣೆಯ ಪಿಂಪ್ರಿ-ಚಿನ್​ಚಾವಾಡ್​ ಪ್ರದೇಶದಲ್ಲಿ ಮನೆ ಖರೀದಿಸಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಮುಂಬೈನಲ್ಲಿ ನಿಮಿರ್ಸುತ್ತಿರುವ ಮನೆಯ ಚಿತ್ರಗಳನ್ನು ಧೋನಿ ಪತ್ನಿ ಸಾಕ್ಷಿ ಸಿಂಗ್​ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

    ಇದನ್ನೂ ಓದಿ: ಡಬ್ಲ್ಯುಟಿಸಿ ಫೈನಲ್‌ನಲ್ಲಿ ಟೀಮ್ ಇಂಡಿಯಾ ಆಟಗಾರರು ತೊಡುವ ಸ್ವೆಟರ್ ಹಾಗೂ ಜೆರ್ಸಿ ಶೈಲಿ ಹೇಗಿದೆ ಗೊತ್ತೇ?,

    ಪುಣೆ ಇಸ್ಟಾಡೊ ಪ್ರೆಸಿಡೆನ್​ಷಿಯಲ್​ ಸೊಸೈಟಿಯಲ್ಲಿ ಧೋನಿ ಈ ಮನೆ ಖರೀದಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ ಬಳಿಕ ಬಹುತೇಕ ಉದ್ಯಮದಲ್ಲಿ ತೊಡಗಿಕೊಂಡಿರುವ ಧೋನಿ, ಮುಂಬೈ ನಗರವನ್ನೇ ವಾಣಿಜ್ಯ ಚಟುವಟಿಕೆಗೆ ಕೇಂದ್ರಬಿಂದುವಾಗಿಸಿಕೊಂಡಿದ್ದಾರೆ. ಹೀಗಾಗಿ ಮುಂಬೈ ಹಾಗೂ ಪುಣೆಯಲ್ಲಿ ಮನೆ ನಿರ್ಮಾಣಕ್ಕೆ ಧೋನಿ ಮುಂದಾಗಿದ್ದಾರೆ ಎನ್ನಲಾಗಿದೆ. ಮುಂಬೈನಲ್ಲಿ ಎಂಎಸ್​ಡಿ ಎಂಟರ್​ಟೈನ್​ಮೆಂಟ್​ ಸಂಸ್ಥೆ ಹೊಂದಿದ್ದು, ಕಳೆದ ವರ್ಷ ಈ ಸಂಸ್ಥೆಯೂ ಕಿರುಚಿತ್ರಗಳನ್ನು ನಿಮಿರ್ಸುತ್ತಿದೆ. ಈ ಸಂಸ್ಥೆಯನ್ನು ಸಾಕ್ಷಿ ನಿರ್ವಹಿಸುತ್ತಿದ್ದಾರೆ.

    ಇದನ್ನೂ ಓದಿ: ದ ಹಂಡ್ರೆಡ್ ಕ್ರಿಕೆಟ್ ಟೂರ್ನಿಗೆ ಭಾರತದ ಮತ್ತೋರ್ವ ಕ್ರಿಕೆಟ್ ಆಟಗಾರ್ತಿ,

    ಕೋವಿಡ್​ನಿಂದಾಗಿ 2021ರ ಐಪಿಎಲ್​ ಮುಂದೂಡಿಕೆಯಾಗಿರುವ ಹಿನ್ನೆಲೆಯಲ್ಲಿ ಧೋನಿ, ಪತ್ನಿ ಸಾಕ್ಷಿ, ಮಗಳು ಹಾಗೂ ಪಾಲಕರೊಂದಿಗೆ ರಾಂಚಿಯ ಫಾರ್ಮ್ ಹೌಸ್​ನಲ್ಲೇ ಬಹುತೇಕ ಸಮಯವನ್ನು ಕಳೆಯುತ್ತಿದ್ದಾರೆ. ಧೋನಿ ಸಾರಥ್ಯದ ಸಿಎಸ್​ಕೆ ತಂಡ ಇದುವರೆಗೂ ಆಡಿರುವ 7 ಪಂದ್ಯಗಳಲ್ಲಿ 5ರಲ್ಲಿ ಜಯ ದಾಖಲಿಸಿದೆ. ಫಾರ್ಮ್​ ಹೌಸ್​ನಲ್ಲಿ ಧೋನಿ ಸಾಕಿರುವ ಕುದುರೆಯ ಮೈಸವರುತ್ತಿರುವ ವಿಡಿಯೋವೊಂದನ್ನು ಸಾಕ್ಷಿ ಸಿಂಗ್​ ಇನ್​ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts