More

    ಎಂಎಸ್ ಧೋನಿ ಸಿಟ್ಟಿಗೆ ಅಂಪೈರ್ ನಿರ್ಧಾರ ಬದಲಿಸಿದ್ದೇಕೆ..?

    ದುಬೈ: ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ, ಕ್ಯಾಪ್ಟನ್ ಕೂಲ್ ಎಂದೇ ಹೆಸರಾಗಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಧೋನಿ ಮೈದಾನದಲ್ಲಿ ಸಹನೆ ಕಳೆದುಕೊಳ್ಳುತ್ತಿರುವುದು ಸಾಮಾನ್ಯವಾಗುತ್ತಿದೆ. ಮಂಗಳವಾರ ನಡೆದ ಸನ್‌ರೈಸರ್ ಹೈದರಾಬಾದ್ ವಿರುದ್ಧದ ಪಂದ್ಯದ ವೇಳೆ ಧೋನಿ ಮತ್ತೊಮ್ಮೆ ಅಂಪೈರ್ ವಿರುದ್ಧ ಸಿಟ್ಟಾದ ಪ್ರಸಂಗ ಜರುಗಿತು. ಧೋನಿ ಸಿಟ್ಟಿಗೆ ಕಂಗೆಟ್ಟ ಅಂಪೈರ್ ಪೌಲ್ ರೈೆಲ್ ನೀಡಬೇಕಿದ್ದ ವೈಡ್ ಕೂಡ ನೀಡದೆ ಸುಮ್ಮನಾದರು. ಡಗೌಟ್‌ನಲ್ಲಿ ಕುಳಿತಿದ್ದ ಸನ್‌ರೈಸರ್ಸ್‌ ನಾಯಕ ಡೇವಿಡ್ ವಾರ್ನರ್ ಅಸಮಾಧಾನ ಹೊರಹಾಕಿದರು.

    ಚೆನ್ನೈ ಸೂಪರ್ ಕಿಂಗ್ಸ್ ನೀಡಿದ 168 ರನ್ ಬೆನ್ನಟ್ಟಿದ ಸನ್‌ರೈಸರ್ಸ್‌, ಜಯ ದಾಖಲಿಸಲು ಅಂತಿಮ ಎರಡು ಓವರ್‌ಗಳಲ್ಲಿ 27 ರನ್‌ಗಳ ಅವಶ್ಯಕತೆ ಇತ್ತು. ವೇಗಿ ಶಾರ್ದೂಲ್ ಠಾಕೂರ್ 19 ಓವರ್‌ನಲ್ಲಿ ಬೌಲಿಂಗ್‌ಗಿಳಿದರು. ಮೊದಲ ಎಸೆತವನ್ನು ಎದುರಿಸಿದ ರಶೀದ್ ಖಾನ್ 2 ರನ್ ಕಸಿದರೆ, ಬಳಿಕ 2ನೇ ಎಸೆತ ವೈಡ್ ಆಯಿತು. ಮತ್ತೊಮ್ಮೆ 2ನೇ ಎಸೆತವೂ ವೈಡ್ ಎಂದು ಅಂಪೈರ್ ಘೋಷಿಸುವುದರಲ್ಲಿದ್ದರು. ಈ ವೇಳೆ ಧೋನಿ ಅಂಪೈರ್ ಅವರನ್ನು ಸಿಟ್ಟಿನಿಂದಲೇ ನೋಡಿದರು. ಇದರಿಂದ ಕಂಗೆಟ್ಟ ಅಂಪೈರ್ ವೈಡ್ ನೀಡುವ ಸಾಹಸಕ್ಕೆ ಮುಂದಾಗಲಿಲ್ಲ. ಕಳೆದ ಬಾರಿಯೂ ಧೋನಿ ಜೈಪುರದಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ಎದುರು ನೋಬಾಲ್ ವಿಚಾರವಾಗಿ ಅಸಮಾಧಾನಗೊಂಡ ಮೈದಾನಕ್ಕಿಳಿದು ಅಂಪೈರ್‌ಗಳ ಜತೆ ವಾದ ಮಾಡಿದ್ದರು. ಜತೆಗೆ ಪಂದ್ಯ ಸಂಭಾವನೆಯಲ್ಲಿ 50 ರಷ್ಟು ದಂಡ ವಿಧಿಸಲಾಗಿತ್ತು.

    ಆಸ್ಟ್ರೇಲಿಯಾದ ಅಂಪೈರ್ ಆಸ್ಟ್ರೇಲಿಯಾ ಪರ 35 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಅಂಪೈರ್ ವಿರುದ್ಧ ಸಿಟ್ಟಾದ ಧೋನಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts