More

    ಸದನದ ಬಾವಿಗೆ ನುಗ್ಗಿ ಗದ್ದಲ; ಸಚಿವರ ಕೈಯಿಂದ ಹೇಳಿಕೆ ಪತ್ರ ಕಸಿದ ಟಿಎಂಸಿ ಸಂಸದ!

    ನವದೆಹಲಿ : ಸತತವಾಗಿ ಮೂರನೇ ದಿನವೂ ಲೋಕಸಭೆ ಮತ್ತು ರಾಜ್ಯಸಭಾ ಸದನಗಳಲ್ಲಿ ವಿರೋಧ ಪಕ್ಷದ ಸಂಸದರು ವಿವಿಧ ವಿಚಾರಗಳ ಕುರಿತಾಗಿ ಪ್ರತಿಭಟನೆ ವ್ಯಕ್ತಪಡಿಸಿದರು. ಹಲವು ಸಂಸದರು ಸದನದ ಬಾವಿಗೆ ನುಗ್ಗಿ, ಘೋಷಣೆ ಮತ್ತು ಫಲಕಗಳೊಂದಿಗೆ ಗದ್ದಲ ಮಾಡಿದ್ದರಿಂದ ಕಲಾಪಗಳು ಮತ್ತೆ ಮತ್ತೆ ಮುಂದೂಡಲ್ಪಟ್ಟವು.

    ರಾಜ್ಯಸಭೆಯ ಬೆಳಗಿನ ಕಲಾಪವನ್ನು 12 ಗಂಟೆವರೆಗೆ, ಮತ್ತೆ 2 ಗಂಟೆವರೆಗೆ ಸ್ಥಗಿತಗೊಳಿಸಲಾಗಿತ್ತು. ವಿಪಕ್ಷ ಸಂಸದರ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ರಾಜ್ಯಸಭಾ ಚೇರ್​ಮನ್​ ಎಂ.ವೆಂಕಯ್ಯ ನಾಯ್ಡು ಅವರು, “ಸದಸ್ಯರು ಜನರ ವಿಚಾರಗಳನ್ನು ಚರ್ಚಿಸಲು ಆಸಕ್ತಿ ಹೊಂದಿಲ್ಲದ ಹಾಗೆ ಕಾಣುತ್ತದೆ” ಎಂದರು.

    ಇದನ್ನೂ ಓದಿ: ಮುಂಗಾರು ಅಧಿವೇಶನ: ಸದನದ ಆರಂಭದಲ್ಲೇ ವಿಪಕ್ಷಗಳ ಗದ್ದಲ! ಮುಂದೂಡಲ್ಪಟ್ಟಿತು ಕಲಾಪ

    ಪೆಗಾಸಸ್ ವಿವಾದದ ಬಗ್ಗೆ ರಾಜ್ಯಸಭೆಯಲ್ಲಿ ಐಟಿ ಸಚಿವ ಅಶ್ವಿನಿ ವೈಷ್ಣವ್ ಹೇಳಿಕೆ ನೀಡಲು ಹೊರಟಾಗ, ಟಿಎಂಸಿ ಸಂಸದ ಶಂತನು ಸೇನ್, ಸಚಿವರ ಕೈಯಿಂದ ಹೇಳಿಕೆ ಪತ್ರವನ್ನು ಕಿತ್ತುಕೊಂಡು ಡೆಪ್ಯುಟಿ ಚೇರ್​ಮನ್​ರ ಕಡೆಗೆ ಎಸೆದರು. ವೈಷ್ಣವ್ ಪಟ್ಟು ಬಿಡದೆ ತಮ್ಮ ಹೇಳಿಕೆ ಮುಂದುವರಿಸಲು ಪ್ರಯತ್ನಿಸುತ್ತಿರುವಂತೆ ಗದ್ದಲ ತಾರಕಕ್ಕೇರಿತು. ತದನಂತರ ರಾಜ್ಯಸಭೆಯನ್ನು ನಾಳೆ ಬೆಳಿಗ್ಗೆಗೆ ಮುಂದೂಡಲಾಯಿತು ಎಂದು ಎನ್​ಡಿಟಿವಿ ವರದಿ ಮಾಡಿದೆ.

    ಲೋಕಸಭೆಯಲ್ಲೂ ಅಡಚಣೆಗಳು ನಿರಂತರವಾಗಿ ಸಾಗಿದ್ದು, ಮೂರನೇ ಬಾರಿಗೆ ಕಲಾಪವನ್ನು ಸಂಜೆ 4 ಕ್ಕೆ ಮುಂದೂಡಲಾಗಿದೆ. ಇದಕ್ಕೂ ಮುನ್ನ, ಪ್ರಶ್ನೋತ್ತರ ಅವಧಿಯು 12 ನಿಮಿಷಗಳ ಕಾಲ ಮಾತ್ರ ನಡೆಯಲು ಸಾಧ್ಯವಾಯಿತು. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು, “ಸರ್ಕಾರ ನಿಮ್ಮ ಎಲ್ಲ ವಿಚಾರಗಳ ಚರ್ಚೆಗೆ ಸಿದ್ಧವಿದೆ. ಪ್ರಶ್ನೋತ್ತರದ ಸಮಯ ಪ್ರತಿ ಸದಸ್ಯನ ಹಕ್ಕು. ಅವಕಾಶ ನೀಡಿ” ಎಂದು ಹೇಳಿದರೂ, ವಿಪಕ್ಷ ಸಂಸದರು ವಿರೋಧ ಮುಂದುವರಿಸಿದರು.

    ಇದನ್ನೂ ಓದಿ: ಜನಮತ | ಸದನ ಕಲಾಪದ ಘನತೆ ಹಾಳು…

    ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿ ದಳದವರು ವಿವಾದಿತ ಕೃಷಿ ಕಾನೂನುಗಳ ಬಗ್ಗೆ ಸರ್ಕಾರದ ಮೇಲೆ ದಾಳಿ ನಡೆಸಿದರೆ, ಟಿಎಂಸಿ ಸದಸ್ಯರು ಪೆಗಾಸಸ್​ ಬೇಹುಗಾರಿಕಾ ಸಾಫ್ಟ್​ವೇರ್​ ಕುರಿತಾಗಿ ಘೋಷಣೆಗಳನ್ನು ಮಾಡಿ, ಪ್ರಧಾನಿಯವರಿಂದ ಉತ್ತರ ಅಪೇಕ್ಷಿಸಿದರು. (ಏಜೆನ್ಸೀಸ್)

    VIDEO | ರಷ್ಯಾದ ಬೀದಿಗಳಲ್ಲಿ ‘ವಿಂಕ್​ ಗರ್ಲ್​’ ಮಸ್ತ್​ ಡ್ಯಾನ್ಸ್​!

    ಚಿನ್ನವನ್ನು ಗುದದ್ವಾರದಲ್ಲಿ ಮುಚ್ಚಿಟ್ಟುಕೊಂಡು ತಂದ ಪ್ರಯಾಣಿಕ!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts