More

    ಕರ್ನಾಟಕ ಆರೋಗ್ಯ ಸಂಜೀವಿನಿ ಜಾರಿಗೊಳಿಸಿ

    ನವಲಗುಂದ: ಪಟ್ಟಣದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದಿಂದ 7ನೇ ವೇತನ ಆಯೋಗ ಜಾರಿ, ಹಾಗೂ ಹೊಸ ಪಿಂಚಣಿ ರದ್ದು ಮಾಡಿ ಕರ್ನಾಟಕ ಆರೋಗ್ಯ ಸಂಜೀವಿನಿ ಜಾರಿ ಮಾಡಬೇಕು ಎಂದು ಶಾಸಕ ಎನ್.ಎಚ್. ಕೋನರಡ್ಡಿ ಅವರಿಗೆ ಮನವಿ ಸಲ್ಲಿಸಿದರು.

    ನೌಕರರ ಸಂಘದ ಅಧ್ಯಕ್ಷ ಎ.ಬಿ. ಕೊಪ್ಪದ ಮಾತನಾಡಿ, ಆಡಲೇ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲದಿದ್ದರೆ ಸರ್ಕಾರ ನೌಕರರ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಕೋನರಡ್ಡಿ, ನಿಮ್ಮ ಬೇಡಿಕೆ ಈಡೇರಿಕೆ ಕುರಿತು ಈಗಾಗಲೇ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿದ್ದು, ಸಕಾರಾತ್ಮಕ ಸ್ಪಂದನೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಿದ್ಧರಿದ್ದಾರೆ. ಕಾನೂನಾತ್ಮಕ ತೊಡಕುಗಳನ್ನು ಬಗೆಹರಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಭರವಸೆ ನೀಡಿದರು.

    ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಜಿ. ಹುಲ್ಲೂರ, ಸಹದೇವ ಪೂಜಾರ, ಬಿ.ಎಂ. ಪಾಟೀಲ, ಬಸವರಾಜ ಜಾಧವ, ಬಿ.ಎಂ. ಹುಡೇದ, ಚನ್ನಪ್ಪಗೌಡ್ರ ಎಸ್.ಎಫ್. ನೀರಲಗಿ ಎಸ್.ಕೆ. ಕುರಹಟ್ಟಿ ಲಿಂಗರಾಜ ಕಾಮತ, ಪಿ.ಕೆ. ಹಿರೇಗೌಡ್ರ, ಬಿ.ವಿ. ಪೂಜಾರ, ವಿ.ಎಂ. ಹಿರೇಮಠ, ಎನ್.ವೈ. ಕಳಸಾಪೂರ, ಎಸ್.ಎಚ್. ಹರಕುಣಿ, ಗಣೇಶ ಹೊಳೆಯಣ್ಣವರ, ವಸಂತರಡ್ಡಿ ಚಾಕಲಬ್ಬಿ, ಶಂಭುಲಿಂಗ ಹೊಳೆಯಣ್ಣವರ, ಮಲ್ಲಿಕಾರ್ಜುನ ವಗ್ಗರ, ಡಾ, ಪ್ರಭಾಕರ ಲಗಮಣ್ಣವರ, ಸುಜಾತಾ ದೊಡಮನಿ, ಕಲ್ಲಯ್ಯ ಹೊಸಮನಿ, ತೊಗ್ಗಿ ವೀರೇಶ ಗುಡೂರಮಠ, ಯಶವಂತಿ ನರಸಪ್ಪನವರ, ಎಂ.ಎಂ. ಮುಲ್ಲಾ, ಗೀತಾ ತ್ಯಾಗಿಹಾಳ, ಸುಜಾತಾ ದೊಡಮನಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts