More

    ವಿದ್ಯುತ್​ ಪಾಳಿಗಾಗಿ ಬೆಳೆ ಒಣಗದೇ ಕಾಯಬೇಕಾ?

    ಕಲಬುರಗಿ: ರಾಜ್ಯ ಸರ್ಕಾರ ವಿದ್ಯುತ್​ ನ್ನು ಪಾಳಿ ಪ್ರಕಾರ ನೀಡುತ್ತೇವೆ ಎಂದು ಹೇಳುತ್ತಿರುವುದು ದುರದೃಷ್ಟಕರ. ಪಾಳಿ ಪ್ರಕಾರ ನೀಡುವುದಾದರೆ ಬೆಳೆ ಪಾಳಿ ಬರುವವರೆಗೆ ಹಾಗೆಯೇ ಕಾಯುತ್ತಾ ಇರುತ್ತದೆಯೇ ಎಂದು ಸಂಸದ ಡಾ.ಉಮೇಶ ಜಾಧವ್​ ರಾಜ್ಯ ಸರ್ಕಾರದ ಪಾಳಿ ಪ್ರಕಾರ ವಿದ್ಯುತ್​ ನೀಡುವ ನಿರ್ಧಾರ ಬಗ್ಗೆ ವ್ಯಂಗ್ಯವಾಡಿದರು.

    ನಗರದ ಮನೆಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ರೈತರಿಗೆ ಸಮರ್ಪಕ ವಿದ್ಯುತ್​ ಒದಗಿಸುವಲ್ಲಿ ವಿಫಲವಾಗಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

    ಕಲಬುರಗಿ ಜಿಲ್ಲೆಯಲ್ಲಿ ಸರ್ಕಾರದ ಪ್ರತಿನಿಧಿಗಳಿಂದ ದ್ವೇಷದ ರಾಜಕಾರಣ ಮಾಡುತ್ತಿದ್ದು, ನಗರದ ೭ನೇ ವಾರ್ಡ್ನ ಆಶ್ರಯ ಕಾಲನಿಯ ೪೦ಕ್ಕಿಂತ ಹೆಚ್ಚು ಮನೆಗಳನ್ನು ಉದ್ದೇಶಪೂರ್ವಕವಾಗಿ ದುರುದ್ದೇದಿಂದ ಯಾವುದೇ ನೋಟಿಸ್ ನೀಡದೆ, ಪರ್ಯಾಯ ವ್ಯವಸ್ಥೆ ಕಲ್ಪಿಸದೆ ತೆರವು ಮಾಡಲಾಗಿದೆ. ಇದರಿಂದ ಜನರು ಬೀದಿಯಲ್ಲಿ ವಾಸಿಸುವಂತಾಗಿದೆ ಎಂದು ಡಾ.ಉಮೇಶ ಜಾಧವ್ ಆರೋಪಿಸಿದರು.

    ನಗರದ ಹಲವು ಕಡೆ ಅನಧಿಕೃತ ಸ್ಥಳಗಳಲ್ಲಿ ದಶಕಗಳಿಂದ ವಾಸಿಸುತ್ತಿದ್ದಾರೆ. ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ, ಸೂಕ್ತ ಮೂಲಸೌಲಭ್ಯ ಒದಗಿಸಬೇಕು. ಅಕ್ರಮ, ಸಕ್ರಮ ಯೋಜನೆ ಅಡಿ ಪರ್ಯಾಯ ವ್ಯವಸ್ಥೆಗೆ ಅವಕಾಶವಿದ್ದು, ಅದನ್ನು ಮಾಡದೆ ಆಶ್ರಯ ಕಾಲನಿಯಲ್ಲಿ ತರಾತುರಿಯಲ್ಲಿ ಉದ್ದೇಶಪೂರ್ವಕವಾಗಿ ಮನೆಗಳನ್ನು ಡೆಮಾಲಿಷನ್ ಮಾಡಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

    ಬಿಜೆಪಿ ಸರ್ಕಾರದ ಅವಧಿಯಲ್ಲಿ ನಮ್ಮ ಜನಪ್ರತಿನಿಧಿಗಳು ಫಾಲೋಅಪ್ ಮಾಡಿ ಈ ನಿವಾಸಿಗಳಿಗೆ ಅಕ್ರಮ ಸಕ್ರಮ ಅಡಿ ವ್ಯವಸ್ಥೆ ಮಾಡಲು ಪ್ರಕ್ರಿಯೆ ಆರಂಭಿಸಲಾಗಿತ್ತು. ಆ ಪ್ರಕ್ರಿಯೆ ಮುಂದುವರಿಸದೆ ದಿಢೀರ್ ಎಂದು ತೆರವು ಮಾಡಲಾಗಿದೆ. ಚುನಾವಣೆ ನಂತರವೇ ಹೀಗೆ ಮಾಡಿದ್ದು, ದಸರಾ ಹಬ್ಬದ ಸಂಭ್ರಮದಲ್ಲಿ ಸೂತಕದ ಛಾಯೇ ಆವರಿಸಿದೆ. ಬೀದಿಯಲ್ಲಿ ಬೀಳುವಂತಾಗಿದೆ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
    ಆಶ್ರಯ ಕಾಲನಿಯಲ್ಲಿ ಮುಗ್ದರು, ಕಾಯ್ದೆ, ಕಾನೂನು ಅರಿವು ಇಲ್ಲ. ವಕೀಲರ ಬಳಿ ಹೋಗಲು ಆಗುತ್ತಿಲ್ಲ. ಈ ಕುರಿತು ರಾಜ್ಯ ಸರ್ಕಾರದ ಸಚಿವರನ್ನು, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಯವರೊಂದಿಗೆ ಮಾತನಾಡಿದ್ದು, ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮನವಿ ಮಾಡಲಾಗಿದೆ ಎಂದರು.

    ವಿಧಾನ ಪರಿಷತ್ ಸದಸ್ಯ ಡಾ.ಬಿ.ಜಿ.ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಸೇವಂತಾಬಾಯಿ ಚವ್ಹಾಣ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts