More

    ದಿನಕ್ಕೆ 5 ಕಿ.ಮೀ ಚಲಿಸುವ ಟ್ರಕ್​ ಕೇರಳ ತಲುಪಲು ತೆಗೆದುಕೊಂಡು ಸಮಯ ಕೇಳಿದ್ರೆ ಬೆರಗಾಗ್ತೀರಾ!

    ತಿರುವನಂತಪುರಂ: ದೈತ್ಯ ಯಂತ್ರೋಪಕರಣವನ್ನು ಹೊತ್ತ ಬೃಹತ್​ ಟ್ರಕ್​ ಒಂದು ಮಹಾರಾಷ್ಟ್ರದಿಂದ ಕೇರಳದ ತಿರುವನಂತಪುರಂನಲ್ಲಿರುವ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರವನ್ನು (ವಿಎಸ್​ಎಸ್​ಸಿ) ತಲುಪಲು ಒಂದು ವರ್ಷದಿಂದಲೂ ಸಾಗುತ್ತಲೇ ಇದೆ.

    ಬೃಹತ್​ ಟ್ರಕ್​ 74 ಟೈರ್​ಗಳನ್ನು ಹೊಂದಿದ್ದು, ತನ್ನ ಪ್ರಯಾಣದ ಅವಧಿಯಲ್ಲಿ ಒಟ್ಟು ನಾಲ್ಕು ರಾಜ್ಯಗಳಿಗೆ ಭೇಟಿ ನೀಡಿದೆ. ಅಚ್ಚರಿಯೆಂದರೆ ದಿನವೊಂದಕ್ಕೆ ಕೇವಲ 5 ಕಿ.ಮೀ ಮಾತ್ರ ಪ್ರಯಾಣಿಸಿದೆ. ಅಲ್ಲದೆ, ಟ್ರಕ್​ ಪ್ರಯಾಣಿಸುವಾಗ ಅದೇ ರಸ್ತೆಯಲ್ಲಿ ಬೇರೆ ವಾಹನಗಳು ಟ್ರಕ್​ ಹಿಂದಿಕ್ಕಲು ಸಾಧ್ಯವಾಗುವುದಿಲ್ಲ. ಏಕೆಂದರೆ ಇಡೀ ರಸ್ತೆಯನ್ನು ಟ್ರಕ್​ ಆವರಿಸಿರುತ್ತದೆ. ಟ್ರಕ್​ ನಿಯಂತ್ರಣ ಮಾಡಲು ಬರೋಬ್ಬರಿ 34 ಸಿಬ್ಬಂದಿ ನಿಯೋಜಿಸಲಾಗಿದೆ.

    ಇದನ್ನೂ ಓದಿ: ನಿಂತ್ಕೊಳ್ಳಿ ನಿಮ್ಗೆ ಕರೊನಾ ಇದೆ ಅಂದ್ರೂ ಬೈಕ್​ ಏರಿ ಪರಾರಿಯಾದ ಯುವತಿ!

    ಟ್ರಕ್​, ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರಕ್ಕೆ ಏರೋಸ್ಪೇಸ್​ ಆಟೋಕ್ಲೇವ್​ ಯಂತ್ರವನ್ನು ಸಾಗಿಸುತ್ತಿದೆ. ಯಂತ್ರ ಬರೋಬ್ಬರಿ 70 ಟನ್​ ತೂಕವಿದೆ. 7.5 ಮೀಟರ್​ ಎತ್ತರವಿದ್ದಿ, 6.65 ಮೀಟರ್​ ಅಗಲವಿದೆ. ಅದರ ಬೃಹತ್​ ಗಾತ್ರ ಹಿನ್ನೆಲೆ ಸಾಮಾನ್ಯ ರಸ್ತೆಯಲ್ಲಿ ವಾಹನ ಚಾಲನೆ ಮಾಡಿಕೊಂಡು ಸಾಗಿಸುವುದು ತುಂಬಾ ಕಷ್ಟವಾಗಿದೆ. ಹೀಗಾಗಿ ದಿನವೊಂದಕ್ಕೆ ಕೇವಲ 5 ಕಿ.ಮೀ ಮಾತ್ರ ಸಂಚಾರ ಮಾಡಲಾಗುತ್ತಿದೆ.

    ಟ್ರಕ್​ ರಸ್ತೆಯಲ್ಲಿ ಸರಾಗವಾಗಿ ಸಾಗಲು ರಸ್ತೆ ಪಕ್ಕದ ಕೊಂಬೆಗಳನ್ನು ಕತ್ತರಿಸಲಾಗುತ್ತಿದೆ. ಅಲ್ಲದೆ, ವಿದ್ಯುತ್​ ವೈರ್​ಗಳನ್ನು ಸರಿದೂಗಿಸಿ ವಾಹನ ಮುಂದೆ ಚಲಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಆಯಾ ಪ್ರದೇಶಗಳ ಪೊಲೀಸ್​ ಸಿಬ್ಬಂದಿ ಮತ್ತು ವಿದ್ಯುತ್​ ಮಂಡಳಿ ಇದರ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದೆ. ವಾಹನವು ಜುಲೈ ಮೊದಲ ವಾರದಲ್ಲಿ ಕೇರಳ ಗಡಿಯನ್ನು ದಾಟಿದ್ದು, ಇನ್ನು ಕೆಲವೇ ದಿನಗಳಲ್ಲಿ ಗುರಿಯನ್ನು ತಲುಪಲಿದೆ. ಅಂದಹಾಗೆ ಕೇರಳ ತಲುಪಲು ವಾಹನ ಬರೋಬ್ಬರಿ ಒಂದು ವರ್ಷ ತೆಗೆದುಕೊಂಡಿದೆ.

    ಇದನ್ನೂ ಓದಿ: ನದಿಯಲ್ಲಿ ಅನಾಥವಾಗಿ ತೇಲುತ್ತಿದ್ದ ಪ್ಲಾಸ್ಟಿಕ್ ಚೀಲವನ್ನು ತೆರೆದವರಿಗೆ ಕಾದಿತ್ತು ಬಿಗ್​ ಶಾಕ್​!​

    ಏರೋಸ್ಪೇಸ್​ ಆಟೋಕ್ಲೇವ್​ ಯಂತ್ರವನ್ನು ಮಹಾರಾಷ್ಟ್ರದ ನಾಸಿಕ್​ನಲ್ಲಿ ತಯಾರಿಸಲಾಗಿದೆ. ಅದನ್ನು ಕೇರಳದ ವಟ್ಟಿಯೂರ್ಕಾವುನಲ್ಲಿರುವ ವಿಎಸ್​ಎಸ್​ ಕೇಂದ್ರಕ್ಕೆ ರವಾನಿಸಲಾಗುತ್ತಿದೆ. ದೇಶದ ಬಾಹ್ಯಾಕಾಶ ಸಂಶೋಧನಾ ಯೋಜನೆಗೆ ಸಂಬಂಧಿಸಿದ ವಿವಿಧ ಉಪಕರಣಗಳನ್ನು ತಯಾರಿಸಲು ಯಂತ್ರವನ್ನು ಬಳಸಲಾಗುತ್ತದೆ. ಈ ತಿಂಗಳ ಅಂತ್ಯಕ್ಕೆ ಯಂತ್ರವು ವಿಎಸ್​ಎಸ್​ ಕೇಂದ್ರಕ್ಕೆ ಬಂದು ತಲುಪಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

    ನೋಂದಣಿಯಾಗಲಿ ನಾನು ಯಾರೆಂದು ಗೊತ್ತಾಗುತ್ತೆ: ಟೀಕಾಕಾರರಿಗೆ ಡ್ರೋನ್​ ಪ್ರತಾಪ್ ಸವಾಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts