More

    ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ: ಚಿತ್ರಮಂದಿರಕ್ಕೆ ಹೋಗುವ ಮುನ್ನ ಇದನ್ನು ನೋಡಿ…

    ಬೆಂಗಳೂರು: ತನ್ನ ವಿರುದ್ಧ ಚಂದನವನ ಸಿಡಿದೇಳುತ್ತಿದ್ದಂತೆ ಎಚ್ಚೆತ್ತ ರಾಜ್ಯ ಸರ್ಕಾರ, ಕೊನೆಗೂ ಚಿತ್ರಮಂದಿರಗಳಲ್ಲಿ ಶೇ.100 ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ ನೀಡಿದ್ದು, ಹೌಸ್​ಫುಲ್ ಪ್ರದರ್ಶನಕ್ಕೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇದು ಥಿಯೇಟರ್​ ಮತ್ತು ಮಲ್ಟಿಪ್ಲೆಕ್ಸ್ ಗೂ ಅನ್ವಯ.

    ಗ್ರಾಹಕರು ಟಿಕೆಟ್ ಪಡೆಯುವಾಗ ಹಾಗೂ ಸಿನಿಮಾ ನೋಡುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಟಿಕೆಟ್ ಬುಕಿಂಗ್ ಸಮಯದಲ್ಲಿ ಹೆಸರು ಮತ್ತು ಮೊಬೈಲ್ ನಂಬರ್ ನೀಡುವುದು ಕಡ್ಡಾಯ. ಏರ್ ಕೂಲರ್ ವ್ಯವಸ್ಥೆಯಲ್ಲಿ ಸಿನಿಮಾ ಪ್ರದರ್ಶನ ಮಾಡುವಾಗ CPWD ಮಾರ್ಗಸೂಚಿ ಪಾಲಿಸಬೇಕು. ವೆಂಟಿಲೇಷನ್ ವ್ಯವಸ್ಥೆ ಉತ್ತಮಗೊಳಿಸಲು ಪ್ರತಿ ಶೋನಲ್ಲೂ ಎರಡು ಇಂಟರ್​ವಲ್ ಕಡ್ಡಾಯ. ಪ್ರಮುಖ ಸ್ಥಳದಲ್ಲಿ ಕೋವಿಡ್ ನಿಯಂತ್ರಣ ಕುರಿತ ಜಾಗೃತಿ ಪ್ರದರ್ಶನ ಕಡ್ಡಾಯ. ಪ್ರೇಕ್ಷಕರು ಕೋವಿಡ್ ನಿಯಮ ಪಾಲಿಸಿಯೇ ಸಿನಿಮಾ ನೋಡಬೇಕು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಇದನ್ನೂ ಓದಿರಿ ಮಕ್ಕಳಿಬ್ಬರು ನೀರುಪಾಲು! ಅಯ್ಯೋ ಮಕ್ಕಳೇ… ಎಂದು ಚೀರಾಡುತ್ತಾ ಬಂದ ಅಮ್ಮ-ಚಿಕ್ಕಮ್ಮನೂ ಬದುಕಲಿಲ್ಲ

    ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ: ಚಿತ್ರಮಂದಿರಕ್ಕೆ ಹೋಗುವ ಮುನ್ನ ಇದನ್ನು ನೋಡಿ...ಚಿತ್ರಮಂದಿರಗಳಲ್ಲಿ ಶೇ.100 ಪ್ರೇಕ್ಷಕರ ಪ್ರವೇಶಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದರೂ ರಾಜ್ಯ ಸರ್ಕಾರ ಮಾತ್ರ ಇದಕ್ಕೆ ನಿರ್ಬಂಧ ವಿಧಿಸಿತ್ತು. ಕರೊನಾ 2ನೇ ಅಲೆ ಸಾಧ್ಯತೆ ಹಿನ್ನೆಲೆಯಲ್ಲಿ ಚಿತ್ರ ಮಂದಿರಗಳಲ್ಲಿ ಶೇ.50 ಪ್ರೇಕ್ಷಕರಿಗಷ್ಟೇ ಅವಕಾಶ ನೀಡಬೇಕು ಎಂದು ಆದೇಶಿಸಿತ್ತು. ಸರ್ಕಾರದ ಈ ನಡೆಗೆ ಆಕ್ರೋಶಗೊಂಡ ಸ್ಯಾಂಡಲ್​ವುಡ್​ನ ದಿಗ್ಗಜ್ಜರು, ಎಲ್ಲರಿಗೂ ಶೇ.100 ಅಕ್ಯುಪೆನ್ಸಿ ಕೊಟ್ಟಿರುವಾಗ, ನಮಗೆ ಮಾತ್ರ ಶೇ.50 ಏಕೆ? ಎಲ್ಲರಿಗೂ ನಾರ್ಮಲ್, ನಮಗ್ಯಾಕೆ ಅಬ್ ನಾರ್ಮಲ್? ‘ಬಸ್​ನಲ್ಲಿ ಫುಲ್ ರಶ್, ಮಾರ್ಕೆಟ್​ನಲ್ಲಿ ಗಿಜಿ ಗಿಜಿ, ಚಿತ್ರಮಂದಿರಕ್ಕೆ ಮಾತ್ರ ಏಕೆ ಶೇ.50 ನಿರ್ಬಂಧ?’ ಎಂದು ಕಟುವಾಗಿಯೇ ಪ್ರಶ್ನಿಸಿದ್ದರು.

    ಸ್ಯಾಂಡಲ್​ವುಡ್​ ಸಿಡಿದೇಳುತ್ತಿದ್ದಂತೆ ಎಚ್ಚೆತ್ತ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ನಿನ್ನೆ(ಬುಧವಾರ) ಸಂಜೆ ಚಿತ್ರೋದ್ಯಮದ ಎಲ್ಲ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದರು. ಇದೀಗ ಚಿತ್ರಮಂದಿರ ಹೌಸ್​ಫುಲ್​ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ.

    ಟಾಯ್ಲೆಟ್​ನಲ್ಲಿ ಚಿರತೆ-ನಾಯಿ ಲಾಕ್: ನಾಯಿ ಎದುರಿಗಿದ್ರೂ ಚಿರತೆ ಫುಲ್ ಸೈಲೆಂಟ್‌! ಮುಂದೇನಾಯ್ತು?

    ಮಕ್ಕಳಿಬ್ಬರು ನೀರುಪಾಲು! ಅಯ್ಯೋ ಮಕ್ಕಳೇ… ಎಂದು ಚೀರಾಡುತ್ತಾ ಬಂದ ಅಮ್ಮ-ಚಿಕ್ಕಮ್ಮನೂ ಬದುಕಲಿಲ್ಲ

    ವಿದ್ಯಾರ್ಥಿನಿ ಜತೆ ಲೆಕ್ಚರರ್​ ಮಗನ ಕಾಮಪುರಾಣ! 3 ವರ್ಷದಿಂದ ಲವ್​-ಸೆಕ್ಸ್​-ಅಬಾರ್ಷನ್​​: ಮುಂದೇನಾಯ್ತು?

    ಸೇನೆಯಿಂದ ಸ್ವಗ್ರಾಮಕ್ಕೆ ಬಂದ ಕೋಲಾರದ ಯೋಧ ಪತ್ನಿಯ ಮಡಿಲಲ್ಲೇ ಪ್ರಾಣಬಿಟ್ಟರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts