More

    ಮಕ್ಕಳಿಗೆ ಮುತ್ತು ಕೊಡುವ ಮುನ್ನ ಎಚ್ಚರವಹಿಸಿ ಎಂದು ತನ್ನ ಮಗುವಿಗಾದ ನೋವನ್ನು ವಿವರಿಸಿದ ತಾಯಿ

    ವಾಷಿಂಗ್ಟನ್​: ಮಕ್ಕಳಿಗೆ ಮುತ್ತು ಕೊಡುವ ಮುನ್ನ ಯೋಚಿಸಿ ಎಂದು ಐದು ವರ್ಷದ ಮಗುವಿನ ತಾಯಿಯೊಬ್ಬರು ಎಚ್ಚರಿಕೆ ಸಂದೇಶವನ್ನು ಜನರಿಗೆ ರವಾನಿಸಿದ್ದಾರೆ. ಚರ್ಮರೋಗದಿಂದ ತನ್ನ ಮಗುವಿನ ಜೀವಕ್ಕೆ ಕಂಟಕ ಎದುರಾದ ಹಿನ್ನೆಲೆಯಲ್ಲಿ ಮಹಿಳೆ ಜನರಿಗೆ ಈ ಸಲಹೆಯನ್ನು ನೀಡಿದ್ದಾರೆ.

    ಅಮೆರಿಕದ ಕೇಂದ್ರ ಪೆನ್ಸಿಲ್ವೇನಿಯಾ ನಿವಾಸಿ ಸ್ಟೆಫನೈ ಶ್ಯಾಡೆ(32) ಎಂಬುವರ ಐದು ವರ್ಷದ ಲಿಂಕನ್​ಗೆ ಹರ್ಪಸ್​ ಸಿಂಪ್ಲೆಕ್ಸ್​ ವೈರಸ್(ಎಚ್​ಎಸ್​ವಿ-1)​ ತಗುಲಿ, ಜೀವಕ್ಕೆ ಕಂಟಕವಾಗುವಂತಹ ಚರ್ಮ ರೋಗದ ಸಮಸ್ಯೆ ಎದುರಾಗಿತ್ತು. ಇದರಿಂದಾಗಿ ನೋವುಕಾರಕ ಹುಣ್ಣುಗಳು ಮಗುವಿನ ಮುಖದಲ್ಲಿ ಹರಡಿಕೊಂಡಿತ್ತು. ಜ್ವರದ ಗುಳ್ಳೆಗಳನ್ನು ಹೊಂದಿದ್ದ ವ್ಯಕ್ತಿಯ ಮುತ್ತಿನಿಂದ ಮಗುವಿಗೆ ಈ ರೀತಿಯಾಗಿದೆ ಎಂದು ವೈದ್ಯರ ಪರಿಶೀಲನೆಯ ಬಳಿಕ ಮಗುವಿನ ತಾಯಿ ಹೇಳಿಕೊಂಡಿದ್ದಾರೆ.

    ಮಗುವಿನ ಮುಖದಲ್ಲಿ ಹುಣ್ಣುಗಳಿರುವುದನ್ನು ಕಳೆದ ತಿಂಗಳು ತಂದೆ-ತಾಯಿ ಗಮನಿಸಿದ್ದರು. ಕೆಲವೇ ದಿನಗಳಲ್ಲಿ ಮುಖದ ಒಂದು ಭಾಗ ಹುಣ್ಣುಗಳಿಂದ ಆವರಿಸ ತೊಡಗಿತು. ಕೆಂಪು ಬಣ್ಣದ ಹುಣ್ಣುಗಳು ತುಂಬಾ ನೋವುಕರವಾಗಿದ್ದವು. ಇದರಿಂದ ಮಗು ಆಗಾಗ ಅಳುತ್ತಿತ್ತು ಎಂದು ಪಾಲಕರು ಹೇಳಿದ್ದಾರೆ.

    ಬಳಿಕ ವೈದ್ಯರ ಬಳಿ ಕರೆದೊಯ್ದದಾಗ ಎಚ್​ಎಸ್​ವಿ ಸೋಂಕು ತಗುಲಿರುವುದು ಪತ್ತೆಯಾಗಿದೆ. ಸೋಂಕು ತಗುಲಿದ ಬೇರೊಬ್ಬರು ಮುತ್ತು ನೀಡಿರುವುದರಿಂದ ಎಚ್​ಸಿವಿ ಹರಡಿದೆ ಎಂದು ಹೇಳಿ, ಅದನ್ನು ಹಾಗೇ ಬಿಟ್ಟರೆ ಮಗುವಿನ ಜೀವಕ್ಕೆ ಅಪಾಯವಾಗಬಹುದು ಎಂದು ವೈದ್ಯರು ತಿಳಿಸಿದಾಗ ಪಾಲಕರು ಚಿಕಿತ್ಸೆ ಕೊಡಿಸಿದ್ದಾರೆ.

    ವೈದ್ಯರ ಸಲಹೆ ಮೇರೆಗೆ ರೋಗನಿರೋಧಕ ಕ್ರೀಮ್​ ಅನ್ನು ಪ್ರತಿನಿತ್ಯ ಹುಣ್ಣುಗಳ ಮೇಲೆ ಹಚ್ಚುತ್ತಾ ಬಂದಿದ್ದರಿಂದ ತಿಂಗಳ ನಂತರ ಮಗುವಿಗೆ ಸೋಂಕು ನಿವಾರಣೆ ಆಯಿತು ಎಂದು ಪಾಲಕರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಆಹಾರ ಆರೋಗ್ಯ: ಅರಿಶಿಣ ಬೆರೆಸಿದ ಹಾಲಿನ ಹಲವು ಪ್ರಯೋಜನಗಳು

    ಯೋಗಕ್ಷೇಮ: ಕಫನಾಶಕ ಯೋಗಮುದ್ರೆಗಳಿಂದಾಗುವ ಉಪಯೋಗಗಳಿವು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts