More

    ಯೋಗಕ್ಷೇಮ: ಕಫನಾಶಕ ಯೋಗಮುದ್ರೆಗಳಿಂದಾಗುವ ಉಪಯೋಗಗಳಿವು…

    # ಕಫ ನಾಶಕ ಮುದ್ರೆ ಮಾಡುವ ವಿಧಾನ ಮತ್ತು ಉಪಯೋಗಗಳನ್ನು ತಿಳಿಸಿ.

    | ವರುಣ ಮೈಸೂರು

    ಯೋಗಕ್ಷೇಮ: ಕಫನಾಶಕ ಯೋಗಮುದ್ರೆಗಳಿಂದಾಗುವ ಉಪಯೋಗಗಳಿವು...ಕಿರುಬೆರಳು ಮತ್ತು ಉಂಗುರ ಬೆರಳನ್ನು ಹೆಬ್ಬೆರಳಿನ ಬುಡಕ್ಕೆ ತಾಗಿಸಿ. ಹೆಬ್ಬೆರಳನ್ನು ಮಡಚಿದ ಬೆರಳ ಮೇಲೆ ಇಡಿ. ಸುಮಾರು 15 ನಿಮಿಷಗಳಿಂದ 45 ನಿಮಿಷಗಳವರೆಗೆ ಅಭ್ಯಾಸ ಮಾಡಬಹುದು ಅಥವಾ ದಿನಕ್ಕೆ 15 ನಿಮಿಷದಂತೆ ಮೂರು ಬಾರಿ ಅಭ್ಯಾಸ ಮಾಡಿ.

    ಪ್ರಯೋಜನ: ಕಫ ತೊಂದರೆಯ ನಿಯಂತ್ರಣವಾಗುತ್ತದೆ ಹಾಗೂ ಪಿತ್ತ ಅಧಿಕವಾಗುವುದು. ಚರ್ಮ, ಮಲ, ಮೂತ್ರಗಳು ಅತಿಯಾಗಿ ವಿಸರ್ಜನೆಯಾಗುತ್ತಿದ್ದರೆ ಈ ಮುದ್ರೆಯನ್ನು ಹಾಕಿದಾಗ ನಿಯಂತ್ರಣ ಸಾಧಿಸಬಹುದು. ಮೂತ್ರಪಿಂಡಗಳ ಆರೋಗ್ಯಕ್ಕೆ ಸಹಕಾರಿ. ಬಾಯಾರಿಕೆಯನ್ನು ನಿವಾರಿಸುತ್ತದೆ. ಹುಳಿರಸ ಇರುವ ಹಣ್ಣುಗಳನ್ನು ತಿಂದಾಗ ಕೆಲವೊಮ್ಮೆ ಬರುವ ಗಂಟಲು ಕೆರೆತ, ಗಂಟಲುನೋವು ಇವುಗಳ ನಿಯಂತ್ರಣಕ್ಕೆ ಈ ಮುದ್ರೆ ಸಹಕಾರಿ. ಕೆಲವೊಮ್ಮೆ ಕಣ್ಣಿನಲ್ಲಿ ಅನಗತ್ಯವಾಗಿ ಬರುವ ನೀರಿನ ತೊಂದರೆಯನ್ನು ನಿವಾರಿಸುತ್ತದೆ. ಸ್ತ್ರೀಯರ ಮಾಸಿಕ ಅತಿಸ್ರಾವದ ಸಮಸ್ಯೆಯನ್ನು ಈ ಮುದ್ರೆಯಿಂದ ಸರಿಪಡಿಸಬಹುದು.

    # ಯೋಗವು ದೈಹಿಕ, ಮಾನಸಿಕ ಸ್ಥಿತಿಯ ಅಭಿವೃದ್ಧಿಗೆ ಹೇಗೆ ಸಹಕಾರಿ ಎಂಬುದನ್ನು ತಿಳಿಸಿ.

    | ರವಿರಾಜ್ ಹುಬ್ಬಳ್ಳಿ

    ಯೋಗವು ಮೂಲತಃ ಅಧ್ಯಾತ್ಮದ ಆಧಾರದಿಂದಿರುವ /ತಳಹದಿ ಹೊಂದಿರುವ ಒಂದು ಸೂಕ್ಷ್ಮವಾದ ವಿಜ್ಞಾನದ ಶಾಖೆ. ದೇಹ ಮತ್ತು ಮನಸ್ಸುಗಳ ಜೊತೆ ಹೊಂದಾಣಿಕೆಯನ್ನು ತರಲು ಬೆಳಕು ಹರಡುವಂಥದ್ದು. ಆರೋಗ್ಯವಾಗಿ ಬಾಳಲು ಒಂದು ವಿಜ್ಞಾನ ಮತ್ತು ಕಲೆ. ಯೋಗ ಎನ್ನುವ ಪದ ಸಂಸ್ಕೃತ ಮೂಲದ ಯುಜ್ ಎನ್ನುವುದರಿಂದ ಬಂದಿದ್ದು, ಒಂದುಗೂಡಿಸುವುದು ಯಾ ಸಂಯೋಜಿಸುವುದು, ಐಕ್ಯಗೊಳಿಸುವುದು ಎಂದಿದೆ. ಇದರ ಒಂದು ಭಾಗವೆಂದರೆ ಉಸಿರಾಟದ ನಿಯಂತ್ರಣ, ಸರಳ ಧ್ಯಾನ ಮತ್ತು ನಿರ್ದಿಷ್ಟ ದೈಹಿಕ ಭಂಗಿಗಳನ್ನು ಅಳವಡಿಸಿಕೊಳ್ಳುವುದು ಸೇರಿದಂತೆ ಆರೋಗ್ಯ ಮತ್ತು ವಿಶ್ರಾಂತಿಗಾಗಿ ಪ್ರಪಂಚದಾದ್ಯಂತ ವ್ಯಾಪಕವಾಗಿ ಅಭ್ಯಾಸ ಮಾಡಲಾಗುತ್ತದೆ. ಪತಂಜಲಿ ಯೋಗವನ್ನು ಯೋಗಃ ಚಿತ್ತ ವೃತ್ತಿ ನಿರೋಧಃ. ಎಂದು ವ್ಯಾಖ್ಯಾನಿಸಿದ್ದಾರೆ. ಇದರರ್ಥ ಯೋಗವು ಮನಸ್ಸಿನ ಏರಿಳಿತಗಳನ್ನು ತೆಗೆದುಹಾಕುತ್ತದೆ.

    ಯೋಗವು ಜೀವನದ ವಿಧಾನವಾಗಿದೆ. ಪತಂಜಲಿಯ ಯೋಗಸೂತ್ರಗಳಲ್ಲಿ ಯಮ, ನಿಯಮ, ಆಸನ, ಪ್ರಾಣಾಯಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ ಎಂದು ಅಷ್ಟಾಂಗಯೋಗವನ್ನು ವಿವರಿಸಲಾಗಿದೆ. ಇದು ದೈಹಿಕ ಮಟ್ಟದಲ್ಲಿ ವಿವಿಧ ಯೋಗ ಭಂಗಿಗಳು ಯಾ ಆಸನಗಳನ್ನು ಒಳಗೊಂಡಿದೆ. ಅದು ಸಾಮಾನ್ಯವಾಗಿ ದೇಹವನ್ನು ಆರೋಗ್ಯವಾಗಿಡಲು ಉದ್ದೇಶಿಸುತ್ತದೆ. ಮಾನಸಿಕ ತಂತ್ರಗಳಲ್ಲಿ ಉಸಿರಾಟದ ವ್ಯಾಯಾಮ ಯಾ ಪ್ರಾಣಾಯಾಮ ಮತ್ತು ಮನಸ್ಸನ್ನು ಶಿಸ್ತು ಮಾಡಲು ಧ್ಯಾನ ಇದೆ. ಯೋಗದಿಂದ ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕವಾಗಿ ವಿಕಸನಗೊಳ್ಳಲು ಸಹಕಾರಿಯಾಗುತ್ತದೆ. ಯೋಗವು ಜ್ಞಾನೋದಯದ ಸ್ಥಿತಿಯನ್ನು ಸಾಧಿಸಲು ಮನಸ್ಸು ದೇಹ ಮತ್ತು ಚೈತನ್ಯವನ್ನು ಸಂಯೋಜಿಸುವ ಗುರಿಯನ್ನು ಹೊಂದಿದೆ. ಯೋಗವೆಂದರೆ ಶಿಸ್ತು (ಸಾಧನೆ) ಯಾ ನಿರಂತರ ಸಾಕ್ಷಾತ್ಕಾರದ ಆ ಸವೋಚ್ಚ ಸ್ಥಿತಿಯನ್ನು ಸಾಧಿಸುವ ಪ್ರಯತ್ನ. ಯೋಗವನ್ನು ಗುರುಮುಖೇನವೇ ಕಲಿಯಬೇಕು.

    ಬೆಳಗ್ಗೆ ಹಾಸಿಗೆ ಬಿಟ್ಟು ಏಳೋದಕ್ಕಾಗಲ್ಲ ಏಕೆ ಗೊತ್ತಾ? ನಿದ್ರೆಯ ಬಗ್ಗೆ ನಿಮಗೆ ಗೊತ್ತೇ ಇರದ ವಿಷಯಗಳಿವು!

    ಇಂದು ವಿಶ್ವ ಕಿಡ್ನಿ ದಿನ: ಮಿತ ಉಪ್ಪು, ಸಕ್ಕರೆ ಸೇವನೆ ಮೂತ್ರಪಿಂಡಕ್ಕೆ ಹಿತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts