More

    VIDEO | ಟಿಕೆಟ್ ಇಲ್ಲದೆ ಮೆಟ್ರೋ ನಿಲ್ದಾಣ ಪ್ರವೇಶಿಸಿದ ಮಗ, ಪಾಠ ಕಲಿಸಿದ ತಾಯಿ…

    ನವದೆಹಲಿ: ಮಕ್ಕಳಿಗೆ ಬಾಲ್ಯದಿಂದಲೇ ಮೌಲ್ಯಗಳು, ಸಾಮಾಜಿಕ ನಿಯಮಗಳನ್ನು ಕಲಿಸಿದರೆ, ಅವರು ತಮ್ಮ ಜೀವನದುದ್ದಕ್ಕೂ ಅವುಗಳನ್ನು ಪಾಲಿಸುತ್ತಾರೆ. ಇಂದಿನ ದಿನಮಾನಗಳಲ್ಲಿ ಜನ ಬಿಡುವಿಲ್ಲದ ಸಮಯದಿಂದ ಮಕ್ಕಳಿಗೆ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ, ಸಾಧ್ಯವಿರುವವರು ಇಂತಹ ವಿಷಯಗಳಿಗೆಲ್ಲಾ ತಲೆಕೆಡಿಸಿಕೊಳ್ಳುವುದಿಲ್ಲ. ಅಂದಹಾಗೆ ತಾಯಿ ಮತ್ತು ಮಗನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತಾಯಿ ತನ್ನ ಮಗನಿಗೆ ಮೆಟ್ರೊ ನಿಲ್ದಾಣದಲ್ಲಿಯೇ ಪಾಠ ಹೇಳಿಕೊಟ್ಟಿರುವುದನ್ನು ನಾವಿಲ್ಲಿ ನೋಡಬಹುದು.

    ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಮೊದಲಿಗೆ ತಾಯಿ ಮತ್ತು ಮಗ ಸ್ಟೇಷನ್​​​ನಲ್ಲಿ ಹೋಗುತ್ತಿರುವುದನ್ನು ಕಾಣಬಹುದು. ನಂತರ ತಾಯಿ ಮಷಿನ್​​​ ಮೇಲೆ ಟೊಕನ್​​​​​​​​​ನಿಟ್ಟು ಪಾಸ್​​​ ಆಗುತ್ತಿದ್ದಂತೆ ಮಗ ಕೂಡ ಟೊಕನ್ ಇಲ್ಲದೆ ಆಕೆಯನ್ನು ಹಿಂಬಾಲಿಸಿದ್ದಾನೆ. ಈ ವಿಷಯ ತಿಳಿದ ತಾಯಿ ಕೂಡಲೇ ಅಲ್ಲಿಯೇ ಮಗನಿಗೆ ಕಾನೂನು ಪಾಠ ಕಲಿಸಲು ಆರಂಭಿಸಿದ್ದಾರೆ.

    ನಂತರ ತಾಯಿ ಮಗನಿಗೆ ವಿವರವಾಗಿ ವಿವರಿಸಿ ಆಚೆ ಕಳುಹಿಸಿ, ಕೂಪನ್ ಅನ್ನು ಸ್ಕ್ಯಾನ್ ಮಾಡಿ ನಂತರ ಬರಲು ತಿಳಿಹೇಳಿದಳು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನೈತಿಕತೆ ಮತ್ತು ಶಿಕ್ಷಣ ಮೊದಲು ಕುಟುಂಬದಿಂದಿದಲೇ ಆರಂಭವಾಗಲಿದೆ ಎಂದು ವಿಡಿಯೋ ಜೊತೆ ಬರೆದು ಹಂಚಿಕೊಳ್ಳಲಾಗಿದೆ.

    “ಪೂರ್ವ ಏಷ್ಯಾದ ದೇಶಗಳ ಜನರು ಸಮಾಜದ ಬಗ್ಗೆ ಜವಾಬ್ದಾರಿಯನ್ನು ಹೊಂದಿದ್ದಾರೆ. ಅಲ್ಲಿ ಯಾರಾದರೂ ಅಪರಾಧ ಎಸಗಿದರೆ ಆ ಕುಟುಂಬಕ್ಕೆ ಅವಮಾನವಾಗುತ್ತದೆ. ಶಿಕ್ಷಣ ಮತ್ತು ಶಿಸ್ತು ಎರಡು ಮಗುವಿಗೆ ಮುಖ್ಯ. ಅದು ಕುಟುಂಬದಿಂದ ಪ್ರಾರಂಭವಾಗುತ್ತದೆ” ಎಂದು ಓರ್ವ ವ್ಯಕ್ತಿ ಕಾಮೆಂಟ್ ಮಾಡಿದರೆ, ಮತೋರ್ವ ವ್ಯಕ್ತಿ, ಇದನ್ನೇ ನಾವು ಪ್ರಾಮಾಣಿಕತೆ ಎಂದು ಕರೆಯುತ್ತೇವೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    “ಯಾರೇ ನೋಡಿದರೂ ನೋಡದಿದ್ದರೂ ನಾವು ಸದಾ ಸರಿಯಾದ ದಾರಿಯಲ್ಲಿ ನಡೆಯಬೇಕು. ವಿಡಿಯೋದಲ್ಲಿ ಕಂಡದ್ದನ್ನು ನಮ್ಮ ಮಕ್ಕಳಿಗೂ ಕಲಿಸಬೇಕು. ತನ್ನ ಮಗುವಿನ ಭವಿಷ್ಯವನ್ನು ರೂಪಿಸುತ್ತಿರುವ ಈ ತಾಯಿಗೆ ನಾನು ಧನ್ಯವಾದ ಹೇಳುತ್ತೇನೆ. ಅವರು ತಿಳಿಯದೆ ಸಮಾಜಕ್ಕೆ ದೊಡ್ಡ ಸಂದೇಶವನ್ನು ನೀಡಿದ್ದಾರೆ”ಎಂದೆಲ್ಲಾ ನೆಟ್ಟಿಗರು ಕಾಮೆಂಟ್ ಬಾಕ್ಸ್​​ನಲ್ಲಿ ತಮ್ಮ ಅನಿಸಿಕೆಗಳನ್ನು ಹೊರಹಾಕಿದ್ದಾರೆ.

    @TheFigen_ ಹೆಸರಿನ X ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, 9 ದಶಲಕ್ಷಕ್ಕೂ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದಾರೆ.  

    Oscars 2024: 87 ವರ್ಷಗಳ ದಾಖಲೆ ಮುರಿದು ಹೊಸ ಇತಿಹಾಸ ಸೃಷ್ಟಿಸಿದ 22 ವರ್ಷದ ಗಾಯಕಿ ಬಿಲ್ಲಿ ಎಲಿಶ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts