More

    ‘ಸೆಕ್ಸ್​ಪರ್ಟ್’​ ಇನ್ನಿಲ್ಲ: ಇವರಿದ್ದಾಗ ಸಿಕ್ಕಿತ್ತು ಅದೆಷ್ಟೋ ಮಂದಿಗೆ ಸಾಂತ್ವನ-ಸಮಾಧಾನ…

    ಮುಂಬೈ: ಯಾರಿಂದಲೂ ಸಿಗದ ಸಮಾಧಾನ-ಸಾಂತ್ವನ ಇವರಿದ್ದಾಗ ಅದೆಷ್ಟೋ ಮಂದಿಗೆ ಸಿಕ್ಕಿತ್ತು. ಯಾರಲ್ಲೂ ಹೇಳಲಾಗದ, ಕೇಳಲಾಗದ ಪ್ರಶ್ನೆಗಳಿಗೆ ಇವರಿಂದ ಸಮರ್ಪಕ-ಸಮಂಜಸ ಉತ್ತರ ಸಿಗುತ್ತಿತ್ತು. ಅದೆಷ್ಟೋ ಮಂದಿಯ ವಿಶ್ವಾಸ ಗಳಿಸಿದ್ದ, ಅದೆಷ್ಟೋ ಜನರಲ್ಲಿ ವಿಶ್ವಾಸ ಮೂಡಿಸಿದ್ದ ಇವರು ಖ್ಯಾತ ಸೆಕ್ಸ್​ಪರ್ಟ್. ‘ಆಸ್ಕ್​ ದಿ ಸೆಕ್ಸ್​ಪರ್ಟ್​’ ಎನ್ನುತ್ತಿದ್ದ ಇವರಲ್ಲಿ ಏನನ್ನೂ ಕೇಳಿದರೂ ಅದಕ್ಕೊಂದು ಪರಿಹಾರ ಸಿಗುತ್ತಿತ್ತು. ಆದರೆ ಇನ್ನಿವರಲ್ಲಿ ಯಾರೂ ಏನನ್ನೂ ಕೇಳುವಂತಿಲ್ಲ. ಏಕೆಂದರೆ ಸೆಕ್ಸ್​ಪರ್ಟ್​ ಇನ್ನಿಲ್ಲ.

    ಹೌದು.. ‘ಸೆಕ್ಸ್​ಪರ್ಟ್​’ ಎಂದೇ ಖ್ಯಾತರಾಗಿದ್ದ ಡಾ. ಮಹಿಂದರ್ ವತ್ಸ (96) ಸೋಮವಾರ ನಿಧನರಾದರು. ಸ್ತ್ರೀ-ಪುರುಷರೆನ್ನದೆ ಎಲ್ಲರಿಗೂ ಮುಕ್ತವಾಗಿ ಲೈಂಗಿಕ ಸಮಸ್ಯೆಗಳಿಗೆ, ಗೊಂದಲಗಳಿಗೆ ಉತ್ತರ ನೀಡುತ್ತಿದ್ದ ಇವರು ಇಂದು ಮುಂಬೈನಲ್ಲಿ ಕೊನೆಯುಸಿರೆಳೆದರು. ಇವರು ಆಂಗ್ಲ ಪತ್ರಿಕೆಯೊಂದರಲ್ಲಿ ‘ಆಸ್ಕ್​ ದಿ ಸೆಕ್ಸ್​ಪರ್ಟ್​’ ಎಂಬ ಅಂಕಣದ ಮೂಲಕ ಹೀಗೆ 15 ವರ್ಷಗಳ ಕಾಲ ಜನರಿಗೆ ಉತ್ತರ-ಉಪಾಯ ಹೇಳಿದ್ದರು. ಸೆಕ್ಸ್​ ಬಗ್ಗೆ ಮಾತನಾಡುವುದೇ ಮುಜುಗರ ಅಥವಾ ಅಪರಾಧ ಎಂಬಂತಿದ್ದ ಸಮಯದಲ್ಲೇ ಇವರು ಅದರ ಬಗ್ಗೆ ಮುಕ್ತವಾಗಿ ಮಾತನಾಡುವಂಥ ವಾತಾವರಣ ಕಲ್ಪಿಸಿದ್ದಲ್ಲದೆ, ಲೈಂಗಿಕ ವಿಷಯಗಳ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿದ್ದರು.

    'ಸೆಕ್ಸ್​ಪರ್ಟ್'​ ಇನ್ನಿಲ್ಲ: ಇವರಿದ್ದಾಗ ಸಿಕ್ಕಿತ್ತು ಅದೆಷ್ಟೋ ಮಂದಿಗೆ ಸಾಂತ್ವನ-ಸಮಾಧಾನ...
    ಡಾ.ಮಹಿಂದರ್ ಅವರ ಅಗಲಿಕೆ ಕುರಿತು ಅವರ ಪುತ್ರನ ಪತ್ರ.

    ಮಿಲಿಟರಿ ವೈದ್ಯರೊಬ್ಬರ ಪುತ್ರರಾಗಿದ್ದ ಇವರು ಸುಮಾರು ನಾಲ್ಕು ದಶಕಗಳ ಕಾಲ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞರಾಗಿ ಕಾರ್ಯನಿರ್ವಹಿಸಿದ್ದರು. ಭಾರತದ ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಷನ್​ನ ಸಲಹಾಗಾರರಾಗಿಯೂ ಕೆಲಸ ಮಾಡಿದ್ದ ಇವರು, ಲೈಂಗಿಕ ಆಪ್ತಸಮಾಲೋಚನೆ ಹಾಗೂ ಶಿಕ್ಷಣ ಕಾರ್ಯಕ್ರಮಕ್ಕೆ ಒತ್ತು ನೀಡಿದ್ದರು. ಇವರಿಂದಾಗಿಯೇ ಈ ಸಂಸ್ಥೆ 1974ರಲ್ಲಿ ದೇಶದಲ್ಲೇ ಮೊದಲ ಬಾರಿಗೆ ಲೈಂಗಿಕ ಶಿಕ್ಷಣ ಹಾಗೂ ಸಮಾಲೋಚನಾ ಕೇಂದ್ರವನ್ನು ಸ್ಥಾಪಿಸಿತು. ಲೈಂಗಿಕ ಸಮಾಲೋಚನೆ ಹಾಗೂ ಶಿಕ್ಷಣಕ್ಕೆ ಆದ್ಯತೆ ನೀಡಲೆಂದೇ ಇವರು 1980ರಲ್ಲಿ ತಮ್ಮ ಪ್ರ್ಯಾಕ್ಟಿಸ್​ ತೊರೆದಿದ್ದರು. (ಏಜೆನ್ಸೀಸ್​)

    ಮಗ ಹುಟ್ಟುತ್ತಲೇ ವಿಚಿತ್ರ ಅನುಭವ: ಮಂತ್ರವಾದಿ ನೀಡಿದ ಚಿಕಿತ್ಸೆ- ಮುಂದೆ ಆದದ್ದು ಭಯಾನಕ!

    ಈ ಪತ್ರವನ್ನು ಗುಟ್ಟಾಗಿ ಬರೆಯುತ್ತಿದ್ದೇನೆ. ಈ ನತದೃಷ್ಟೆಗೆ ದಯವಿಟ್ಟು ನೆರವಾಗಿ ಮೇಡಂ…

    ರಾತ್ರೋರಾತ್ರಿ ಮಹಿಳೆ ಸೇರಿ ಮತ್ತಿಬ್ಬರು ಕಂಡವರ ಮನೆಯಲ್ಲಿ ಮಾಡಬಾರದ್ದನ್ನು ಮಾಡಲು ಹೋಗಿ ಸಿಕ್ಕಿಬಿದ್ರು!

    ನೈಟ್​ ಕರ್ಫ್ಯೂ ರದ್ದಾದರೇನಂತೆ, ಇವರಿಗಿನ್ನೂ ಅದೇ ಚಿಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts