More

    ದೇಶದಲ್ಲಿ ಅತಿ ಹೆಚ್ಚು ಸಕ್ರಿಯ ಕರೊನಾ ಪ್ರಕರಣಗಳಿರುವುದು ಬೆಂಗಳೂರಿನಲ್ಲೇ! ನರಕವಾಗುತ್ತಿರುವ ಸಿಲಿಕಾನ್​ ಸಿಟಿ

    ಬೆಂಗಳೂರು: ದೇಶದಾದ್ಯಂತ ಕರೊನಾ ಸೋಂಕು ಅತಿ ವೇಗದಲ್ಲಿ ಹಬ್ಬಲಾರಂಭಿಸಿದೆ. ಕರ್ನಾಟಕದ ಬೆಂಗಳೂರಿನಲ್ಲಿ ಸೋಂಕಿನ ತೀವ್ರತೆ ಹೆಚ್ಚಾಗಿದ್ದು, ದೇಶದಲ್ಲಿ ಅತಿ ಹೆಚ್ಚು ಕರೊನಾ ಸಕ್ರಿಯ ಪ್ರಕರಣಗಳನ್ನು ಹೊಂದಿರುವ ಜಿಲ್ಲೆಯಾಗಿ ಬೆಂಗಳೂರು ಹೊರಹೊಮ್ಮಿದೆ.

    ಬೆಂಗಳೂರಿನಲ್ಲಿ ಶುಕ್ರವಾರ 16,622 ಪ್ರಕರಣಗಳು ಪತ್ತೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1.496 ಲಕ್ಷಕ್ಕೆ ಏರಿಕೆಯಾಗಿದೆ. ಪೂರ್ತಿ ದೇಶದಲ್ಲಿ ಯಾವ ಜಿಲ್ಲೆಯಲ್ಲೂ ಈ ಪ್ರಮಾಣದ ಸಕ್ರಿಯ ಪ್ರಕರಣಗಳಿಲ್ಲ. ಸಕ್ರಿಯ ಪ್ರಕರಣಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಪುಣೆಯಲ್ಲಿ 1.1 ಲಕ್ಷ ಸಕ್ರಿಯ ಪ್ರಕರಣಗಳಿವೆ. ಉಳಿದ ಎಲ್ಲ ಜಿಲ್ಲೆಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1 ಲಕ್ಷಕ್ಕೂ ಕಡಿಮೆಯಿದೆ. ದೆಹಲಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಲಕ್ಷಕ್ಕೆ ಸನಿಹವಿದ್ದರೆ ಮುಂಬೈನಲ್ಲಿ 81 ಸಾವಿರಷ್ಟಿದೆ.

    ಇನ್ನೂ ಆಘಾತಕಾರಿ ಸಂಗತಿಯೆಂದರೆ ಕರ್ನಾಟಕದಲ್ಲಿ ಪ್ರತಿನಿತ್ಯ ಪತ್ತೆಯಾಗುತ್ತಿರುವ ಸೋಂಕಿತರಲ್ಲಿ ಶೇ. 70 ಸೋಂಕಿತರು ಬೆಂಗಳೂರಿನವರೇ ಆಗಿದ್ದಾರೆ. ಈಗಾಗಲೇ ಪ್ರತಿ ದಿನ 16 ಸಾವಿರಕ್ಕೂ ಅಧಿಕ ಪ್ರಕರಣ ಪತ್ತೆಯಾಗುತ್ತಿದೆ. ಮೇ 1ರ ವೇಳೆಗೆ ಈ ಸಂಖ್ಯೆ 25 ಸಾವಿರ ತಲುಪುವ ಸಾಧ್ಯತೆಯಿದೆ. (ಏಜೆನ್ಸೀಸ್​)

    ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ! ರಾಜ್​ಕುಮಾರ್​ ಬರ್ತ್​ಡೇ ವಿಷ್​ ಮಾಡಿದ ಆರ್​ಸಿಬಿ

    ಸರ್ಕಾರದಿಂದ ಆಕ್ಸಿಜನ್​ ಪೂರೈಕೆಯಲ್ಲಿ ವಿಳಂಬ; ಒಂದೇ ಆಸ್ಪತ್ರೆಯಲ್ಲಿ 25 ರೋಗಿಗಳ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts