More

    ಕೇರಳದ ಚಿನ್ನಕ್ಕೆ ಸಾಂಗ್ಲಿಯೊಂದಿಗೆ ನಂಟು…; 100 ಕೆಜಿಗೂ ಹೆಚ್ಚು ಬಂಗಾರ ಕಳ್ಳ ಸಾಗಣೆ

    ಕೊಚ್ಚಿ: ದೇಶಾದ್ಯಂತ ಸಂಚಲನ ಮೂಡಿಸಿದ್ದ ಕೇರಳ ಡಿಪ್ಲೊಮೆಟಿಕ್​ ಬ್ಯಾಗೇಜ್​ ಗೋಲ್ಡ್​ ಸ್ಮಗ್ಲಿಂಗ್​ ಕೇಸ್​ ಬಗೆದಷ್ಟೂ ಆಳವಾಗುತ್ತಲೇ ಹೋಗುತ್ತಿದೆ. ಇದೀಗ ಮತ್ತೊಂದು ಸತ್ಯ ಹೊರಬಿದ್ದಿದೆ.

    ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ 100 ಕೆಜಿಗೂ ಹೆಚ್ಚು ಚಿನ್ನವನ್ನು ಮಹಾರಾಷ್ಟ್ರದ ಸಾಂಗ್ಲಿಗೆ ಸಾಗಿಸಲಾಗಿದೆ ಎಂದು ಕಸ್ಟಮ್ಸ್​ ಅಧಿಕಾರಿಗಳು ಹೇಳಿದ್ದಾರೆ. ಸ್ಮಗ್ಲಿಂಗ್​ ಪ್ರಕರಣದಲ್ಲಿ ಬಂಧಿತರಾದ ರಮೀಜ್​ ಮತ್ತಿತರರು ಕಸ್ಟಮ್ಸ್​ ಅಧಿಕಾರಿಗಳ ಎದುರು ಈ ಸತ್ಯವನ್ನು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಸದ್ಯ ರಾಷ್ಟ್ರೀಯ ತನಿಖಾ ದಳ ತನಿಖೆ ನಡೆಸುತ್ತಿದೆ.

    ಪ್ರಮುಖ ಆರೋಪಿ ಸ್ವಪ್ನಾ ಸುರೇಶ್​ ಮತ್ತು ಅವಳ ಗ್ಯಾಂಗ್​​ನವರು ಡಿಪ್ಲೊಮೆಟಿಕ್​ ಚಾನೆಲ್​ ಮೂಲಕ ನಡೆಸುತ್ತಿದ್ದ ಚಿನ್ನದ ಕಳ್ಳಸಾಗಣೆ ನಂಟು ಮಹಾರಾಷ್ಟ್ರಕ್ಕೂ ಇದೆ. ಈಗಾಗಲೇ 100 ಕೆಜಿಗೂ ಹೆಚ್ಚು ಚಿನ್ನ ಸಾಂಗ್ಲಿ ಸೇರಿದೆ ಎನ್ನಲಾಗಿದೆ.
    ಕೊಲ್ಹಾಪುರ ಮತ್ತು ಪುಣೆಯ ನಡುವೆ ಇರುವ ಸಾಂಗ್ಲಿಯಲ್ಲಿ ಕಳ್ಳ ಸಾಗಣೆಯ ಚಿನ್ನದ ಗಟ್ಟಿಗಳನ್ನು ಆಭರಣವನ್ನಾಗಿ ರೂಪಿಸುವ ದೊಡ್ಡ ಜಾಲವೇ ಇದೆ. ಅಲ್ಲಿಗೇ ಚಿನ್ನ ಸಾಗಿಸಲಾಗುತ್ತಿತ್ತು. ಇದೀಗ ಸಿಕ್ಕಿಬಿದ್ದಿರುವ ರಮೀಜ್​ ಕೂಡ ಅದೆಷ್ಟೋ ಬಾರಿ ಸಾಂಗ್ಲಿಗೆ ಚಿನ್ನವನ್ನು ಸಾಗಣೆ ಮಾಡಿದ್ದಾನೆ ಎಂದು ಕಸ್ಟಮ್ಸ್​ ಅಧಿಕಾರಿಗಳು ಮಾಹಿತಿ ಹೊರಹಾಕಿದ್ದಾರೆ. ಇದನ್ನೂ ಓದಿ: ವಿಜಯಲಕ್ಷ್ಮೀ ಆತ್ಮಹತ್ಯೆಗೆ ಯತ್ನ; ವಿಡಿಯೋ ಪೋಸ್ಟ್ ಮಾಡಿ, ನನ್ನ ಸಾವಿಗೆ ಆ ಇಬ್ಬರು ವ್ಯಕ್ತಿಗಳೇ ಕಾರಣವೆಂದ ನಟಿ

    ಸಾಂಗ್ಲಿಗೆ ಚಿನ್ನ ಸಾಗಣೆಯಾಗುತ್ತಿತ್ತು ಎಂಬ ವಿಚಾರ ತಿಳಿದ ಬಳಿಕವೂ ಅಲ್ಲಿಗೆ ತೆರಳಲಾಗುತ್ತಿಲ್ಲ. ಕೊವಿಡ್​-19ನಿಂದಾಗಿ ತನಿಖೆ ಕಷ್ಟವಾಗಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಶೀಘ್ರದಲ್ಲೇ ಈ ಜಾಲವನ್ನು ಬೇಧಿಸುತ್ತೇವೆ. ಚಿನ್ನದ ಗುಟ್ಟನ್ನು ರಟ್ಟು ಮಾಡುತ್ತೇವೆ ಎಂದಿದ್ದಾರೆ.

    ನನಗೂ, ಗೋಲ್ಡ್ ಸ್ಮಗ್ಲಿಂಗ್​ಗೂ ಸಂಬಂಧವೇ ಇಲ್ಲ ಎನ್ನುತ್ತಿದ್ದ ರಮೀಜ್​​ ಈಗ ಒಂದೊಂದೇ ವಿಚಾರ ಬಾಯಿಬಿಡುತ್ತಿದ್ದಾನೆ. ಅವನಿಂದ ಚಿನ್ನ ಖರೀದಿಸಿದ್ದ ಸುಮಾರು 15 ಮಂದಿಯನ್ನು ಅಧಿಕಾರಿಗಳು ಬಂಧಿಸಿದ್ದಾರೆ. (ಏಜೆನ್ಸೀಸ್​)‘

    ಚಿನ್ನ ಕಳ್ಳಸಾಗಣೆಯಿಂದ ಗಳಿಸಿದ್ದನ್ನೆಲ್ಲ ಬಚ್ಚಿಟ್ಟಿದ್ದೆಲ್ಲಿ ಸ್ವಪ್ನಾ ಸುರೇಶ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts