More

    ರಾಜಧಾನಿ ಸ್ಪೆಶಲ್​ ರೈಲುಗಳಿಂದ 5 ದಿನದಲ್ಲಿ ಬಂದ ಆದಾಯದ ವಿವರ ಇಲ್ಲಿದೆ ನೋಡಿ

    ನವದೆಹಲಿ: ಭಾರತೀಯ ರೈಲ್ವೆ ಜನರ ಅನುಕೂಲಕ್ಕಾಗಿ ನವದೆಹಲಿಯಿಂದ 15 ಸ್ಥಳಗಳಿಗೆ ರಾಜಧಾನಿ ಸ್ಪೆಶಲ್​ ರೈಲುಗಳ ಸಂಚಾರ ಆರಂಭಿಸಿದೆ. ಐದು ದಿನಗಳಲ್ಲಿ ಅಂದಾಜು 3.5 ಲಕ್ಷ ಪ್ರಯಾಣಿಕರು ಈ ರೈಲಿನಲ್ಲಿ ಪ್ರಯಾಣಿಸಿದ್ದು, ಭಾರತೀಯ ರೈಲ್ವೆಗೆ 69 ಕೋಟಿ ರೂ. ಆದಾಯ ಬಂದಿದೆ.

    ವಿವಿಧ ರಾಜ್ಯಗಳಲ್ಲಿರುವ ತಮ್ಮವರ ಭೇಟಿಗೆ ಅಥವಾ ಅನ್ಯ ಊರುಗಳಲ್ಲಿರುವ ತಮ್ಮ ಮಕ್ಕಳ ಬಳಿಗೆ ತೆರಳಲು ಜನರು ಈ ಸೌಲಭ್ಯವನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೇ 12ರಿಂದ ಸಂಚಾರ ಆರಂಭಿಸಿರುವ ಈ ರೈಲುಗಳು ಸಂಪೂರ್ಣ ಭರ್ತಿಯಾಗಿ ಚಲಿಸುತ್ತಿವೆ ಎಂದು ಭಾರತೀಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಶ್ರಮಿಕ ವಿಶೇಷ ರೈಲಿನಲ್ಲಿ ಬಳ್ಳಾರಿಯಿಂದ ಉತ್ತರ ಪ್ರದೇಶಕ್ಕೆ ವಲಸಿಗರ ಪ್ರಯಾಣ, ಜಿಲ್ಲಾಮಟ್ಟದ ಅಧಿಕಾರಿಗಳಿಂದ ಬೀಳ್ಕೊಡುಗೆ

    ಮೇ 16ರಂದು ಗರಿಷ್ಠ 27,788 ಜನರು ರೈಲಿನಲ್ಲಿ ಪ್ರಯಾಣಿಸಿದ್ದಾರೆ. ಭಾನುವಾರಕ್ಕೆ ಈ ಸಂಖ್ಯೆ 30,127ಕ್ಕೆ ಹೆಚ್ಚಳವಾಗಿರುವುದಾಗಿ ಹೇಳಲಾಗುತ್ತಿದೆ.
    ಭಾನುವಾರದವರೆಗೆ 1,87,827 ಜನರು ಟಿಕೆಟ್​ಗಳನ್ನು ಮುಂಗಡವಾಗಿ ಕಾಯ್ದಿರಿಸಿದ್ದಾರೆ. ಒಟ್ಟು 3,48,634 ಪ್ರಯಾಣಿಕರು ಈ ಸೌಲಭ್ಯವನ್ನು ಬಳಸಿಕೊಂಡಿದ್ದಾರೆ. ಈ ರೈಲುಗಳಿಂದ ಇದುವರೆಗೆ ಒಟ್ಟು 69,33,67,735 ರೂ. ಆದಾಯ ಬಂದಿದೆ. ಮೇ 27ರ ವೇಳೆಗೆ ಒಟ್ಟು 21 ರೈಲುಗಳು ಕಾರ್ಯಾಚರಣೆ ನಡೆಸಲಿವೆ ಎಂದು ಭಾರತೀಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಬಸ್​ ನಿಲ್ದಾಣದಲ್ಲಿ ಕರೊನಾ ಸೋಂಕಿತನ ಮೃತದೇಹ ಕಂಡು ಕಂಗಾಲಾದ ಜನ: ತನಿಖೆಗೆ ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts