More

    IRCTC ಮೂಲಕ ನೀವು ರೈಲು ಮಾತ್ರವಲ್ಲದೆ ಹೋಟೆಲ್ ಸಹ ಬುಕ್ ಮಾಡಬಹುದು!

    ಬೆಂಗಳೂರು: ಭಾರತೀಯ ರೈಲ್ವೆ ಮೂಲಕ ಪ್ರತಿದಿನ ಲಕ್ಷಾಂತರ ಜನರು ಪ್ರಯಾಣಿಸುತ್ತಾರೆ. ಕೆಲವರು ತಮ್ಮ ಮನೆಗೆ ತೆರಳಲು ರೈಲನ್ನು ಬಳಸಿದರೆ, ಮತ್ತೆ ಕೆಲವರು ಪ್ರವಾಸಕ್ಕೆ ರೈಲನ್ನು ಬಳಸುತ್ತಾರೆ. ಅಂದಹಾಗೆ ರೈಲುಗಳಲ್ಲಿ ಲಭ್ಯವಿರುವ ಎಲ್ಲಾ ರೀತಿಯ ಸೌಲಭ್ಯಗಳ ಮಾಹಿತಿಯನ್ನು IRCTC ತನ್ನ ವೆಬ್‌ಸೈಟ್‌ನಲ್ಲಿ ನೀಡಿದೆ.

    ರೈಲು ಟಿಕೆಟ್‌ಗಳನ್ನು ಕಾಯ್ದಿರಿಸಲು ನೀವು IRCTC ವೆಬ್‌ಸೈಟ್‌ಗೆ ಹಲವು ಬಾರಿ ಭೇಟಿ ನೀಡಿರಬೇಕು. ಆದರೆ ನೀವು ಇಲ್ಲಿಂದ ಹೋಟೆಲ್‌ಗಳನ್ನು ಸಹ ಬುಕ್ ಮಾಡಬಹುದು ಎಂದು ನಿಮಗೆ ತಿಳಿದಿದೆಯೇ?. ಹೌದು, IRCTC ವೆಬ್‌ಸೈಟ್‌ನಿಂದ ಹೋಟೆಲ್ ಅನ್ನು ಬುಕ್ ಮಾಡುವವರು ಮೊದಲು ವೆಬ್‌ಸೈಟ್‌ಗೆ ಹೋಗಿ. ಆ ನಂತರ ಮುಖಪುಟದಲ್ಲಿ ‘IRCTC ಹೋಟೆಲ್‌ಗಳು’ ಕ್ಲಿಕ್ ಮಾಡಬೇಕಾಗುತ್ತದೆ.

    ನಿಮ್ಮ IRCTC ಖಾತೆಯನ್ನು ಬಳಸಿಕೊಂಡು ಬಜೆಟ್ ಹೋಟೆಲ್‌ಗಳಿಂದ ಡೀಲಕ್ಸ್ ಹೋಟೆಲ್‌ಗಳವರೆಗೆ ಎಲ್ಲವನ್ನೂ ನೀವಿಲ್ಲಿ ಸುಲಭವಾಗಿ ಬುಕ್ ಮಾಡಬಹುದು. ಅನೇಕ ಪ್ರವಾಸೋದ್ಯಮ ಪ್ಯಾಕೇಜುಗಳನ್ನು ಸಹ IRCTC ನಡೆಸುತ್ತಿದ್ದು, ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಅದರ ಮಾಹಿತಿಯನ್ನು ಪಡೆಯಬಹುದು.

    ನಿಮ್ಮ ಪ್ಯಾಕೇಜ್‌ನಲ್ಲಿ ನಿಮಗಾಗಿ ಹೋಟೆಲ್, ಮಾರ್ಗದರ್ಶಿ ಮತ್ತು ಇತರ ಸೌಲಭ್ಯಗಳನ್ನು ನೀವು ಸೇರಿಸಬಹುದು, ಇದಕ್ಕಾಗಿ ನೀವು ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ. 

    Amrit Bharat Train: ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಈ ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ..ಇಲ್ಲಿವೆ ನೋಡಿ ಫೋಟೋಗಳು

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts