More

    ಗುಟುಕು ನೀರಿಗೆ ಅಂಗಲಾಚುವ ಮಂಗಗಳು: ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಮನಕರಗಿಸುವ ದೃಶ್ಯ

    ಬೆಂಗಳೂರು: ಬೇಸಿಗೆ ಬಂತೆಂದರೆ ಎಲ್ಲೆಡೆ ನೀರಿನ ಅಭಾವ ಸಹಜ. ಮನುಷ್ಯ ಸಂಭಾವ್ಯ ನೀರಿನ ಅಭಾವ ಮುಂದಾಲೋಚಿಸಿ ಕೆರೆ, ಬಾವಿ, ಬೋರ್​ವೆಲ್ ಇತ್ಯಾದಿ ತೋಡಿಕೊಂಡು, ಅಣೆಕಟ್ಟೆಗಳನ್ನು ಕಟ್ಟಿಕೊಂಡು ನೀರಿನ ವ್ಯವಸ್ಥೆ ಮಾಡಿಕೊಂಡಿದ್ದಾನೆ. ಆದರೆ, ಕುಡಿಯುವ ಹನಿ ನೀರಿಗಾಗಿ ಪರದಾಡುತ್ತಿರುವ ವರ್ಗವೆಂದರೆ ಅದು ಕಾಡುಗಳಲ್ಲಿ ವಾಸವಾಗಿರುವ ಪ್ರಾಣಿ-ಪಕ್ಷಿಗಳ ಸಂಕುಲ.

    monkies 2ಮಂಗಗಳ ಬದುಕು ಹೇಳತೀರದಾಗಿದೆ
    ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಹಂಚಿಕೆಯಲ್ಲಿ ಕಂಡು ಬರುವ ಚಾರ್ಮಾಡಿ ಘಾಟ್ ಹಚ್ಚ ಹಸುರಾದ ಬೆಟ್ಟ ಗುಡ್ಡಗಳ ನಡುವೆ ವಿಶಾಲವಾದ ರಸ್ತೆಯನ್ನು ಹೊಂದಿರುವ ಅರಣ್ಯ ಪ್ರದೇಶ. ಮಳೆಗಾಲ ಮತ್ತು ಚಳಿಗಾಲದಲ್ಲಿ ಈ ರಸ್ತೆ, ಪ್ರವಾಸಿಗರ ಕಣ್ಣಿಗೆ ಪ್ರಕೃತಿಯ ಸೊಬಗನ್ನು ಉಣ ಬಡಿಸುವಂತೆ ಶೋಭಿಸುತ್ತಿರುತ್ತದೆ. ಆದರೆ ಈಗ ಸುಡುಬಿಸಿಲಿಗೆ ಸುಟ್ಟ ಕೆಂಪು ಹಿಟ್ಟಂತಾಗಿರುವ ಬೆಟ್ಟದ ತಪ್ಪಲು ನೀರಿಲ್ಲದೆ ನೋಡತೀರದಂತಾಗಿದೆ. ಈ ನಡುವೆ ಅಲ್ಲೇ ವಾಸಿಸುತ್ತಿರುವ ಮಂಗಗಳ ಬದುಕು ಹೇಳತೀರದಾಗಿದೆ.

    ಇದನ್ನೂ ಓದಿ: ರೇಪ್​ ಕೇಸ್​ನಲ್ಲಿ ಜಾಮೀನು: ಜೈಲಿಂದ ಹೊರಬಂದ ರೀಲ್ಸ್​ ಸ್ಟಾರ್​ನಿಂದ ಹಾಡಹಗಲೇ ನಡೆಯಿತು ಘೋರ ಕೃತ್ಯ

    Monkies 1

    ಗಂಟಲೊಣಗಿ ಸಾಯುತ್ತಿವೆ
    ಅಣ್ಣಪ್ಪ ಸ್ವಾಮಿಯ ದೇವಸ್ಥಾನದ ಬಳಿ ಹೆಚ್ಚಾಗಿ ಕಾಣಸಿಗುವ ಮಂಗದ ಗುಂಪುಗಳು ಪ್ರತಿನಿತ್ಯ ನೀರಿನ ಸಲುವಾಗಿ ರಸ್ತೆಯ ಕಟ್ಟೆಗಳ ಮೇಲೆ ಕುಳಿತು ಪ್ರಯಾಣಿಕರನ್ನೇ ಬೇಡುತ್ತಾ ನೋಡುತ್ತಿರುತ್ತವೆ. ಹಗಲಿಡಿ ಮರಿಗಳನ್ನು ಬೆನ್ನ ಮೇಲೆ ಹೊತ್ತುಕೊಂಡು ಚಡಪಡಿಸುತ್ತಿವೆ. ಎಷ್ಟೋ ಮಂಗಗಳು ನೀರಿಲ್ಲದೆ ಗಂಟಲೊಣಗಿ ಸಾಯುತ್ತಿವೆ.

    ಪ್ರಯಾಣಿಕರತ್ತ ಅಂಗೈ ಚಾಚುತ್ತಿವೆ
    ನಿತ್ಯ ಕೊಟ್ಟಿಗೆಹಾರ ಮತ್ತು ಉಜಿರೆ ಮಾರ್ಗವಾಗಿ ಸಾಗುವ ಸಾವಿರಾರು ಪ್ರಯಾಣಿಕರಲ್ಲಿ ಬಹುತೇಕರು ಹಣ್ಣು ಮತ್ತು ತಿಂಡಿಗಳನ್ನೇ ಮಂಗಗಳಿಗೆ ಚೆಲ್ಲಿ ಹೋಗುತ್ತಾರೆ. ಆದರೆ ಬಾಯಾರಿಕೆಯಿಂದ ಅಂಗಲಾಚುವ ವಾನರಗಳಿಗೆ ನೀರನ್ನು ನೀಡುವವರು ಯಾರೂ ಇಲ್ಲ. ಇಲ್ಲಿನ ಮಂಗಗಳು ನದಿ ನೀರನ್ನೇ ಅವಲಂಬಿಸಿವೆ. ಈಗ ನದಿಗಳಲ್ಲಿ ನೀರು ಇಂಗಿರುವುದರಿಂದ ಪ್ರಯಾಣಿಕರತ್ತ ಅಂಗೈ ಚಾಚುತ್ತಿವೆ. ಮಂಗಗಳನ್ನು ನೋಡದೆ ಚಂದವೆಂದು ಫೋಟೋ ತೆಗೆಯಲು ನಿಲ್ಲುವ ಪ್ರಯಾಣಿಕರ ವಾಹನಗಳ ಮೇಲೆ ಹತ್ತಿ ಮಂಗಗಳು ನೀರಿಗಾಗಿ ತಡಕಾಡುತ್ತಿವೆ. ಜನರು ನೀರು, ಜ್ಯೂಸ್ ಇತ್ಯಾದಿ ಕುಡಿದು ಕಸವೆಂದು ರಸ್ತೆಯ ಬದಿಗೆ ಎಸೆವ ಬಾಟಲಿಗಳಲ್ಲಿ ನಾಲಿಗೆಗೆ ಹನಿ ನೀರಾದರೂ ಸಿಗಬಹುದಾ ಎಂದು ತಡಕಾಡುತ್ತಿವೆ.

    ಇದನ್ನೂ ಓದಿ: ಏಕಾಂಗಿಯಾಗಿ ಬಾವಿ ತೋಡಿದ ಬಾಲಕ! ಜೀವಜಲ ಪಡೆದ ಆಧುನಿಕ ಭಗೀರಥ | ಸೃಜನ್ ಪ್ರಯತ್ನಕ್ಕೆ ವ್ಯಾಪಕ ಪ್ರಶಂಸೆ

    ಕ್ರಮಕ್ಕೆ ಒತ್ತಾಯ
    ಸರ್ಕಾರ ಮತ್ತು ಸ್ಥಳೀಯ ಆಡಳಿತಗಳು ಕೂಡ ಅಲ್ಲಲ್ಲಿ ನೀರಿನ ಹೊಂಡ, ಕಟ್ಟೆ ನಿರ್ವಿುಸಿ ನೀರು ತುಂಬಿಸುವ ಮೂಲಕ ಪ್ರಾಣಿಗಳ ಬಾಯಾರಿಕೆ ನೀಗಿಸಲು ಕ್ರಮ ತೆಗೆದುಕೊಳ್ಳಬೇಕಿದೆ ಎಂಬುದು ಸ್ಥಳೀಯರ ಒತ್ತಾಯವಾಗಿದೆ.

    ಗೋಮೂತ್ರ ಮಾನವ ಬಳಕೆಗೆ ಅನರ್ಹ; ಹಾನಿಕಾರಕ ಬ್ಯಾಕ್ಟೀರಿಯಾ ಎಂದ ತಜ್ಞರು

    ಸಂಪಾದಕೀಯ | ಕೌಟುಂಬಿಕ ಬಂಧ ಮುಖ್ಯ; ಕ್ಷುಲ್ಲಕ ಕಾರಣಕ್ಕೂ ಹೆಚ್ಚುತ್ತಿರುವ ವಿಚ್ಛೇದನ

    ಕಿಸ್​ ಮಾಡಿದ ಬಳಿಕ ಕ್ಷಮೆ ಕೋರಿದರು! ನಾಗಚೈತನ್ಯ ಬಗ್ಗೆ ಯುವ ನಟಿ ನೀಡಿದ ಹೇಳಿಕೆ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts