More

    ಮನಿಮಾತು| ಉಳಿತಾಯ ಓಕೆ, ಹೂಡಿಕೆ ಇಲ್ಲ ಯಾಕೆ?

    • ನಾನು ಬಿಎಡಿಇಡಿ ಪದವೀಧರ. ಒಂದು ವರ್ಷ ಶಿಕ್ಷಕನಾಗಿ, ಎರಡು ವರ್ಷ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡಿ ಈಗ ಸ್ವಂತ ಫೋಟೋ ಸ್ಟುಡಿಯೋ ಆರಂಭಿಸಿದ್ದೇನೆ. ಇದರ ಜತೆ ಸಿವಿಲ್ ಗುತ್ತಿಗೆದಾರನಾಗಿ ಕೆಲಸ ಮಾಡುವ ಇಚ್ಛೆ ಇದೆ. ಕಂಟ್ರಾಕ್ಟರ್ ಕೆಲಸ ಮಾಡಿದ ಅನುಭವವೂ ಇದೆ. ಸ್ವಲ್ಪ ಹಣ ಉಳಿತಾಯ ಮಾಡಿದ್ದೇನೆ. ಆದರೆ ಹೂಡಿಕೆ ಮಾಡಿಲ್ಲ. ದಯವಿಟ್ಟು ಮಾರ್ಗದರ್ಶನ ಮಾಡಿ.

    | ಹೊಮನ್ ಸಿಂದಗಿ ವಿಜಯಪುರ

    ಮನಿಮಾತು| ಉಳಿತಾಯ ಓಕೆ, ಹೂಡಿಕೆ ಇಲ್ಲ ಯಾಕೆ?ಉಳಿತಾಯದ ಜತೆಗೆ ಹೂಡಿಕೆ ಮಾಡಿದರಷ್ಟೇ ಹಣ ಬೆಳೆಸಲು ಸಾಧ್ಯ. ಹನಿ ಹನಿಗೂಡಿದರೆ ಹಳ್ಳ ಎನ್ನುವ ಹಾಗೆ ದೀರ್ಘಾವಧಿಯಲ್ಲಿ ಸಣ್ಣ ಪ್ರಮಾಣದ ಹೂಡಿಕೆ ಕೂಡ ದೊಡ್ಡ ಮೊತ್ತವಾಗಿ ಬೆಳೆಯುತ್ತದೆ. ತಕ್ಷಣ ಪಿಪಿಎಫ್ ಖಾತೆ ಆರಂಭಿಸಿ. ಪಿಪಿಎಫ್​ನಲ್ಲಿ ಪ್ರತಿ ವರ್ಷ ರೂ. 500ರಿಂದ ರೂ. 1.5 ಲಕ್ಷದ ವರೆಗೆ ಹೂಡಿಕೆಗೆ ಅವಕಾಶವಿದೆ. 15 ವರ್ಷಗಳ ಅವಧಿಯಲ್ಲಿ ದೊಡ್ಡ ಮೊತ್ತವನ್ನು ಪೇರಿಸಲು ಪಿಪಿಎಫ್ ಸಹಕಾರಿ. ಪ್ರತಿ ತಿಂಗಳು ನೀವು ಪಿಪಿಎಫ್ ನಲ್ಲಿ 10 ಸಾವಿರ ರೂಪಾಯಿ ಹೂಡಿಕೆ ಮಾಡಿದರೆ 15ನೇ ವರ್ಷದ ಕೊನೆಗೆ ನಿಮಗೆ ಸುಮಾರು 35 ಲಕ್ಷ ಸಿಗುತ್ತದೆ.

    ಪಿಪಿಎಫ್​ನಲ್ಲಿ ಉಳಿತಾಯದ ಹಣಕ್ಕೆ ತೆರಿಗೆ ಇರುವುದಿಲ್ಲ. ಇನ್ನು ಪಿಪಿಎಫ್ ಜತೆ ಆರ್​ಡಿ ಖಾತೆ ಆರಂಭಿಸಿ ಸಾಧ್ಯವಾದಷ್ಟು ಉಳಿತಾಯ ಮಾಡುತ್ತಾ ಹೋಗಿ. ಮದುವೆಯ ಖರ್ಚಿಗೆ ನೆರವಾಗುತ್ತದೆ. ಜೀವ ವಿಮೆ ಮತ್ತು ಆರೋಗ್ಯ ವಿಮೆ ಮಾಡಿಸಿಕೊಳ್ಳಿ. ನಿಮ್ಮ ತಂದೆ, ತಾಯಿ ಮತ್ತು ನಿಮಗೆ ಒಳಗೊಂಡಂತೆ ಒಂದು ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್ ಮಾಡಿಸುವ ಬಗ್ಗೆ ಚಿಂತಿಸಬಹುದು. ನೀವು ಹೂಡಿಕೆಯಲ್ಲಿ ಸ್ವಲ್ಪ ರಿಸ್ಕ್ ತೆಗೆದುಕೊಳ್ಳ ಬಯಸಿದಲ್ಲಿ ಮ್ಯೂಚುವಲ್ ಫಂಡ್ ಎಸ್ ಐಪಿಯಲ್ಲಿ ಹೂಡಿಕೆ ಮಾಡಬಹುದು.

    ನೆನಪಿನಲ್ಲಿಡಿ ನಾನು ಮಾಹಿತಿ ನೀಡಿರುವುದು ಸಂಭಾವ್ಯ ಸಾಧ್ಯತೆಗಳ ಬಗ್ಗೆ ಮಾತ್ರ. ಹೂಡಿಕೆ ಮಾಡುವ ಮುನ್ನ ಸಾಕಷ್ಟು ಮಾಹಿತಿ ಕಲೆಹಾಕಿ ನಿಮಗೆ ಆರ್ಥಿಕ ಪರಿಸ್ಥಿತಿಗೆ ಸರಿಹೊಂದುವ ಕಡೆ ಹಣ ತೊಡಗಿಸಿ. ಇನ್ನು ಕಂಟ್ರಾಕ್ಟರ್ ಕೆಲಸದ ವಿಚಾರಕ್ಕೆ ಬಂದರೆ ಅಗತ್ಯ ಸಂಪನ್ಮೂಲ ಮತ್ತು ಲೈಸೆನ್ಸ್ ಇದ್ದರೆ ನೀವು ಆರಂಭಿಸಬಹುದು. ಕಂಟ್ರಾಕ್ಟರ್ ಕೆಲಸಕ್ಕೆ ಕೈ ಹಾಕಿ ಫೋಟೋ ಸ್ಟುಡಿಯೋದತ್ತ ಗಮನಹರಿಸದೇ ಇರಬೇಡಿ. ಸಾಧ್ಯವಾದರೆ ಫೋಟೋ ಸ್ಡುಡಿಯೋ ನಿರ್ವಹಣೆಗೆ ಒಬ್ಬ ಒಳ್ಳೆ ಹುಡುಗನಿಗೆ ಜವಾಬ್ದಾರಿ ಕೊಡಿ. ನಿಮಗೆ ಶುಭವಾಗಲಿ.

    ಫೈನಾನ್ಶಿಯಲ್ ಫ್ರೀಡಂ ಕಾರ್ಯಾಗಾರ

    ಇಂಡಿಯನ್ ಮನಿ ಡಾಟ್ ಕಾಂ ಸಿಇಒ ಸಿ ಎಸ್ ಸುಧೀರ್ ಸಾರಥ್ಯದಲ್ಲಿ ಒಂದು ದಿನದ ಫೈನಾನ್ಶಿಯಲ್ ಫ್ರೀಡಂ ( ಹಣಕಾಸು ಸ್ವಾತಂತ್ರ್ಯ) ಕಾರ್ಯಾಗಾರ ಫೆಬ್ರವರಿ 2 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಈ ಕಾರ್ಯಾಗಾರದಲ್ಲಿ ಹಣಕಾಸು ನಿರ್ವಹಣೆ, ಉಳಿತಾಯ, ಹೂಡಿಕೆ, ತೆರಿಗೆ ನಿರ್ವಹಣೆ ಬಗ್ಗೆ ವಿಸ್ತೃತವಾಗಿ ತಿಳಿಸಿಕೊಡಲಾಗುತ್ತದೆ. ಪಾಲ್ಗೊಳ್ಳಲು ಇಚ್ಛಿಸುವವರು 8655097256 ಸಂಖ್ಯೆಗೆ ಮಿಸ್ಡ್ ಕಾಲ್ ಕೊಡಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts