More

    ಸುಳ್ಳು ಸುದ್ದಿ ಬಗ್ಗೆ ಜಾಗೃತಿ ಅಗತ್ಯ, ಫ್ಯಾಕ್ಟ್​ ಚೆಕ್​ ಮಾಡದೆ ಸುದ್ದಿಗಳನ್ನು ಹಂಚಬೇಡಿ: ಪ್ರಧಾನಿ ಮೋದಿ

    ನವದೆಹಲಿ: ಸಾಮಾಜಿಕ ಜಾಲತಾಣವನ್ನು ನಾವು ಕಡೆಗಣಿಸುವಂತಿಲ್ಲ. ಹಾಗಾಗಿ ಫ್ಯಾಕ್ಟ್​ ಚೆಕ್ ಮಾಡದೆ ಸುದ್ದಿಗಳನ್ನು ಹಂಚಬೇಡಿ ಎಂದು ಸಾರ್ವಜನಿಕರಿಗೆ ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ.

    ಎಲ್ಲ ರಾಜ್ಯಗಳ ಗೃಹಮಂತ್ರಿಗಳ ಜತೆ ಶುಕ್ರವಾರ ಆನ್​ಲೈನ್​ ಮೂಲಕ ನಡೆಸಿದ ‘ಚಿಂತನ ಶಿಬಿರ’ದಲ್ಲಿ ಮಾತನಾಡಿದ ಪ್ರಧಾನಿ, ಭಾರತೀಯ ನಾಗರಿಕರ ಸುರಕ್ಷತೆಗಾಗಿ ಸುಳ್ಳು ಸುದ್ದಿ ಹರಡುವ ಋಣಾತ್ಮಕ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ನಮ್ಮ ಜವಾಬ್ದಾರಿ. ದೇಶಾದ್ಯಂತ ಸಾಕಷ್ಟು ಹಾನಿ ಮಾಡುವ ಸಾಮರ್ಥ್ಯ ಒಂದು ಸುಳ್ಳು ಸುದ್ದಿಗೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು. ಇಂತಹ ಸುದ್ದಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.

    ಸಾಮಾಜಿಕ ಜಾಲತಾಣದಲ್ಲಿ ಇರುವ ಫ್ಯಾಕ್ಟ್ ಚೆಕಿಂಗ್ ವ್ಯವಸ್ಥೆಯ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಸೋಷಿಯಲ್​ ಮೀಡಿಯಾವನ್ನು ಮಾತ್ರ ಸುದ್ದಿಯ ಮೂಲ ಎಂದು ಜನರು ಭಾವಿಸಬಾರದು ಎಂದು ಪ್ರಧಾನಿ ಹೇಳಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts