More

    ಲೋಕಲ್ ಎಲೆಕ್ಷನ್ ಅಖಾಡದಲ್ಲಿ ಬ್ಯೂಟಿ ಕ್ವೀನ್: ಚುನಾವಣಾ ಕಣಕ್ಕಿಳಿಯಲು ಕಾರಣವಾಯ್ತು ಈ ನಿಯಮ!

    ಲಖನೌ: ಉತ್ತರ ಪ್ರದೇಶದ ಸ್ಥಳೀಯ ಸಂಸ್ಥೆ ಚುನಾವಣೆ ಅಖಾಡಕ್ಕೆ ಬ್ಯೂಟಿ ಕ್ವೀನ್​ ಒಬ್ಬರು ಎಂಟ್ರಿ ನೀಡಿದ್ದಾರೆ. 2015ರ ಸೌಂದರ್ಯ ಸ್ಪರ್ಧೆಯ ರನ್ನರ್​ ಅಪ್​ ಮಾಡೆಲ್​ ದೀಕ್ಷಾ ಸಿಂಗ್​ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧಾರ ಮಾಡಿದ್ದಾರೆ.

    ದೀಕ್ಷಾ ಅವರು ಉತ್ತರ ಪ್ರದೇಶದ ಜೌನ್​ಪುರ್​ ಜಿಲ್ಲೆಯ ಬಕ್ಷಾ ಡೆವಲಪ್​ಮೆಂಟ್​ ಬ್ಲಾಕ್​ 26 ವಾರ್ಡ್​ನಿಂದ ಸ್ಪರ್ಧಿಸಲಿದ್ದಾರೆ. ಚುನಾವಣಾ ಅಖಾಡಕ್ಕೆ ದೀಕ್ಷಾ ಎಂಟ್ರಿಗ ಕೊಡಲು ಅವರ ಅವರ ತಂದೆಯೇ ಕಾರಣ. ತಾವು ಸ್ಪರ್ಧಿಸಬೇಕಿದ್ದ ಕ್ಷೇತ್ರ ಮಹಿಳಾ ಮೀಸಲು ಆಗಿದ್ದರಿಂದ ದೀಕ್ಷಾ ತಂದೆ ತಮ್ಮ ಮಗಳನ್ನೇ ಕಣಕ್ಕೆ ಇಳಿಸಿದ್ದಾರೆ.

    ಇದನ್ನೂ ಓದಿರಿ: ಜಾರಕಿಹೊಳಿ ಇಂದೂ ಗೈರು- ಸಿಡಿ ಯುವತಿಯನ್ನು ಎದುರಿಸಲಾಗದೇ ಸಾಹುಕಾರ್​ಗೆ ಹುಷಾರ್​ ತಪ್ಪಿತಾ?

    ದೀಕ್ಷಾ ತಂದೆ ಜಿಲ್ಲಾ ಪಂಚಾಯಿತಿಗೆ ಸ್ಪರ್ಧಿಸಬೇಕೆಂದು ಬಹಳ ದಿನಗಳಿಂದ ತಯಾರಿ ಮಾಡಿಕೊಂಡಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಅವರ ಕ್ಷೇತ್ರ ಮಹಿಳಾ ಮೀಸಲು ಆದ್ದರಿಂದ ದೀಕ್ಷಾರನ್ನು ಮನವೊಲಿಸಿ ಚುನಾವಣೆಗೆ ನಿಲ್ಲಿಸಿದ್ದಾರೆ.

    ದೀಕ್ಷಾ ಅವರು ಬಿಜೆಪಿ ನಾಯಕ ದಿವಂಗತ ರಾಮ್​ ಚಂದ್ರ ಸಿಂಗ್​ ಅವರ ಸೊಸೆ ಶಾಲಿನಿ ಸಿಂಗ್​ ವಿರುದ್ಧ ಕಣಕ್ಕಿಳಿದಿದ್ದಾರೆ. ಜೌನ್​​ಪುರದ ಮೊದಲ ಹಂತದ ಪಂಚಾಯಿತಿ ಚುನಾವಣೆ ಏಪ್ರಿಲ್​ 15ರಂದು ನಡೆಯಲಿದೆ.

    ಅಂದಹಾಗೆ ದೀಕ್ಷಾ ಅವರ ತಂದೆ ಜೀತೆಂದ್ರ ಸಿಂಗ್​ ಗೋವಾ ಮತ್ತು ರಾಜಸ್ಥಾನದಲ್ಲಿ ಸಾರಿಗೆ ಉದ್ಯಮ ನಡೆಸುತ್ತಿದ್ದಾರೆ. ತಾಯಿ ಗೃಹಿಣಿಯಾಗಿದ್ದಾರೆ. ಇನ್ನು ದೀಕ್ಷಾ “ರಬ್ಬಾ ಮೆಹನ್​ ಕರಿ” ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಅನೇಕ ಕಂಪನಿಗಳಲ್ಲೂ ಸಹ ದೀಕ್ಷಾ ಕೆಲಸ ಮಾಡಿದ್ದಾರೆ. ಇದೀಗ ಚುನಾವಣೆ ಅಖಾಡಕ್ಕೆ ಧುಮುಕಿದ್ದು, ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. (ಏಜೆನ್ಸೀಸ್​)

    ಮೊದ್ಲು ನಿನ್ನ ಅಕ್ಕ-ತಂಗಿಯರನ್ನು ಕೇಳು ಅವ್ರು ಮಾಡಿದ್ರೆ ನಾನು ಮಾಡ್ತೀನಿ: ನೆಟ್ಟಿಗನಿಗೆ ಶಾಕ್​ ಕೊಟ್ಟ ಪ್ರಿಯಾಮಣಿ!

    ಟ್ಯೂಷನ್​ ಮುಗಿಸಿ ಬರುತ್ತಿದ್ದ ವಿದ್ಯಾರ್ಥಿನಿ ಮೇಲೆ ಗ್ಯಾಂಗ್​ರೇಪ್​- ವಿಷ ಕುಡಿಸಿ ಕೊಲೆ ಮಾಡಿದ ಪಾಪಿಗಳು!

    ಕಾಜಲ್ ಈಗ ಬರ್ಕ್ಲಿ; ನೋ ಸ್ಮೋಕಿಂಗ್ ಹುಡುಗಿಯ ಮೊದಲ ಚಿತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts