More

    ಸೊಗಡುಗೆ ಎಂಎಲ್ಸಿ ಸ್ಥಾನ ನೀಡಿ

    ತುಮಕೂರು: ವಿಧಾನಪರಿಷತ್ತಿಗೆ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಹೆಸರು ಶಿಫಾರಸು ಮಾಡುವುದಕ್ಕೆ ಸ್ವಪಕ್ಷಿಯರೇ ಅಪಸ್ವರ ಎತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಮತ್ತೊಬ್ಬ ಬಿಜೆಪಿ ಹಿರಿಯ ಮುಖಂಡ, ಮಾಜಿ ಸಚಿವ ಸೊಗಡು ಶಿವಣ್ಣ ಹೆಸರು ಮುನ್ನೆಲೆಗೆ ಬಂದಿದೆ. ಜಿಲ್ಲೆಗೆ ಹಾಗೂ ಪಕ್ಷಕ್ಕೆ ಸೊಗಡು ನೀಡಿರುವ ಕೊಡುಗೆ ಪರಿಗಣಿಸಿ ವಿಧಾನ ಪರಿಷತ್‌ಗೆ ಆಯ್ಕೆ ಮಾಡುವಂತೆ ಬಿಜೆಪಿ ಹಾಗೂ ವಿವಿಧ ಸಮಾಜದ ಮುಖಂಡರು ಒಕ್ಕೊರಲ ಆಗ್ರಹ ಮಾಡಿದ್ದಾರೆ.

    ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ವಿರುದ್ಧ ಜಿಲ್ಲೆಯಲ್ಲಿ ಹೋರಾಟ ರೂಪಿಸುವಲ್ಲಿ ಮಂಚೂಣಿಯಲ್ಲಿ ನಿಂತಿರುವ ಸೊಗಡುಶಿವಣ್ಣ ಪರ ಬಿಜೆಪಿ ಹಾಲಿ, ಮಾಜಿ ಪಧಾಧಿಕಾರಿಗಳಲ್ಲದೆ, ವಿವಿಧ ಸಮಾಜದ ಮುಖಂಡರು ರಾಜ್ಯದಲ್ಲಿ ಬಿಜೆಪಿ ನಗಣ್ಯ ಎನಿಸಿದ್ದ ಕಾಲದಿಂದಲೂ ತುಮಕೂರಿನಲ್ಲಿ ಪಕ್ಷ ಸಂಘಟನೆ ಜತೆಗೆ ಶಾಸಕರಾಗಿ 4 ಬಾರಿ ವಿಧಾನ ಸಭೆಯಲ್ಲಿ ಪಕ್ಷವನ್ನು ಪ್ರತಿನಿಧಿಸಿದ್ದರು. ಜನಪರ ಹೋರಾಟಗಳ ಮೂಲಕ ಜನಾನುರಾಗಿ ನಾಯಕರಾಗಿ ಎಲ್ಲಾ ವರ್ಗದ ಜನರ ವಿಶ್ವಾಸದೊಂದಿಗೆ ಇಂದಿಗೂ ಜನಪರ ಕೆಲಸ ಮಾಡುತ್ತಿದ್ದಾರೆ. ಇವರನ್ನು ವಿಧಾನ ಪರಿಷತ್ ಸ್ಥಾನಕ್ಕೆ ಬಿಜೆಪಿ ವರಿಷ್ಠರು ಪರಿಗಣಿಸುವಂತೆ ನಗರದಲ್ಲಿ ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

    ವೀರಶೈವ ಸಮಾಜ ಸೇವಾ ಸಮಿತಿ ಉಪಾಧ್ಯಕ್ಷ ಎಸ್.ಜಿ.ಚಂದ್ರಮೌಳಿ ಮಾತನಾಡಿ, ಸೊಗಡು ಶಿವಣ್ಣ ಶಾಸಕರಾಗಿದ್ದ ಅವಧಿಯಲ್ಲಿ ನಗರದಲ್ಲಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಜಾತಿಬೇಧ ಎನ್ನದೆ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಜನಸಾಮಾನ್ಯರ ನಾಯಕರೆನಿದ್ದಾರೆ. ಪಕ್ಷಕ್ಕೆ ದುಡಿದ ಸೊಗಡು ಅವರಿಗೆ ಬಿಜೆಪಿ ಸೂಕ್ತವಾದ ಸ್ಥಾನಮಾನ ನೀಡಿ ಅವರ ಕೊಡುಗೆ, ಹಿರಿತನವನ್ನು ಗೌರವಿಸುವಂತೆ ಮನವಿ ಮಾಡಿದರು.

    ಎಪಿಎಂಸಿ ಮಾಜಿ ಅಧ್ಯಕ್ಷ ಪಂಚಾಕ್ಷರಯ್ಯ ಮಾತನಾಡಿ, ಪಕ್ಷ ಹಾಗೂ ಜನ ಸಂಕಷ್ಟದಲ್ಲಿದ್ದಾಗ ಎಂದೂ ಕೈ ಬಿಡದೆ ಬೆಂಬಲವಾಗಿ ನಿಲ್ಲುವ ಸಾಮರ್ಥ್ಯವಿರುವ ಸೊಗಡು ಶಿವಣ್ಣನವರು ಈ ಜಿಲ್ಲೆಯ ಬಿಜೆಪಿಯ ಸಮರ್ಥ ನಾಯಕ. ಇವರಿಗೆ ಸರಿಯಾದ ಸ್ಥಾನಮಾನ ನೀಡಿದರೆ ಪಕ್ಷಕ್ಕೂ ದೊಡ್ಡ ಶಕ್ತಿ ಬರುತ್ತದೆ. ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ಮತ್ತೆ ಗೆಲುವಿನ ಹಳಿಗೆ ಮರಳಲು ಸಹಾಯವಾಗಲಿದೆ ಎಂದು ಹೇಳಿದರು.

    ಸ್ನೇಹಸಂಗಮ ಸಹಕಾರ ಸಂಘದ ಅಧ್ಯಕ್ಷ ಬಿ.ಎಸ್.ಮಂಜುನಾಥ್, ವೀರಶೈವ ಸಮಾಜದ ಹೆಬ್ಬಾಕ ಮಲ್ಲಿಕಾರ್ಜುನ್, ಮುಖಂಡರಾದ ಊರುಕೆರೆ ನಂಜುಂಡಪ್ಪ, ಪುರವರ ಮೂರ್ತಿ, ಡೆಲ್ಟಾ ರವಿ, ಪ್ರಭಾಕರ್, ಟಿ.ವೈ.ಯಶಸ್, ಏಕಾಂತ್, ರವಿಕುಮಾರ್, ನವೀನ್, ಮಂಜುನಾಥ್ ಮೊದಲಾದವರು ಹಾಜರಿದ್ದರು.

    ಜಿಲ್ಲೆಯ ಜನ ಹೇಮಾವತಿ ನೀರು ಕುಡಿಯುತ್ತಿದ್ದಾರೆಂದರೆ ಅದರ ಹಿಂದೆ ದಿ.ವೈ.ಕೆ.ರಾಮಯ್ಯ ಹಾಗೂ ಸೊಗಡು ಶಿವಣ್ಣನವರ ಹೋರಾಟ ಇದೆ. ಈಗ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರುದ್ಧ ಸೊಗಡು ಶಿವಣ್ಣ ತೊಡೆತಟ್ಟಿ ಹೋರಾಟಕ್ಕೆ ನಿಂತಿದ್ದಾರೆ. ಬಿಜೆಪಿಯು ಎಂಎಲ್‌ಸಿ ಸ್ಥಾನ ನೀಡಿ ಮತ್ತಷ್ಟು ಶಕ್ತಿ ತುಂಬಬೇಕು.
    ಧನಿಯಾಕುಮಾರ್
    ಜಿಲ್ಲಾಧ್ಯಕ್ಷ, ಕನ್ನಡ ಸೇನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts