More

    ವಿಧಾನಪರಿಷತ್​ನಲ್ಲಿ ಶಾಸಕರ ಮೊಬೈಲ್​ ಬ್ಯಾನ್! ಕೆಲ ನಿಯಮ ಜಾರಿಗೆ ಹೊರಟ್ಟಿ ಸಜ್ಜು

    ಬೆಂಗಳೂರು: ಇನ್ಮುಂದೆ ವಿಧಾನಪರಿಷತ್ ಕಲಾಪದ ವೇಳೆ ಪರಿಷತ್ ಸದಸ್ಯರು ಹಾಗೂ ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಯಾರೊಬ್ಬರಿಗೂ ಮೊಬೈಲ್​ ಬಳಸಲು ಅವಕಾಶ ಇರಲ್ಲ ಎಂದು ಸಂಪೂರ್ಣವಾಗಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.

    ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೊರಟ್ಟಿ, ವಿಧಾನಪರಿಷತ್ ಕಲಾಪದಲ್ಲಿ ಸಂಪೂರ್ಣವಾಗಿ ಮೊಬೈಲ್ ಬ್ಯಾನ್ ಆಗಲಿದೆ. ಕಲಾಪದ ವೇಳೆ ಮಾಧ್ಯಮಗಳನ್ನ ದೂರ ಇಡುವ ಪ್ರಶ್ನೆಯೇ ಇಲ್ಲ. ಕರೊನಾ ಕಾರಣಕ್ಕೆ ಇನ್ನೂ ಮಾಧ್ಯಮ ಗ್ಯಾಲರಿಗೆ ಅವಕಾಶ ಕೊಟ್ಟಿಲ್ಲ. ಮುಂದಿನ‌ ದಿನಗಳಲ್ಲಿ ಮಾಧ್ಯಮಗಳಿಗೆ ಅನುಕೂಲವಾಗುವಂತೆ ಮಾಡುತ್ತೇವೆ. ಬೇರೆಡೆ ಮಾಧ್ಯಮಗಳನ್ನ ನಿಷೇಧಿಸಲಾಗಿದೆ. ನಮ್ಮಲ್ಲಿ ಬ್ಯಾನ್ ಮಾಡುವ ಅವಶ್ಯಕತೆಯೇ ಇಲ್ಲ ಎಂದರು.

    ಪ್ರಕಾಶ್ ರಾಥೋಡ್ ಮೊಬೈಲ್ ವೀಕ್ಷಣೆ ವಿಚಾರವೇ ಇಡೀ ದಿನ ಸುದ್ದಿಯಾಗಿತ್ತು. ಊಟ ಮಾಡಿ ಸದನಕ್ಕೆ ಸದಸ್ಯರು ಬಂದಾಗ ಕೆಲ ನಿಮಿಷ ನಿದ್ದೆ ಮಾಡ್ತಾರೆ. ಮಾಧ್ಯಮಗಳಲ್ಲಿ ಅದೇ ಹೆಚ್ಚು ಸುದ್ದಿಯಾಗುತ್ತಿದೆ. ಇದರಿಂದ ಇಡೀ ಸದನದ ಗೌರವ ಮಣ್ಣಾಗುತ್ತೆ. ಯಾವುದೋ ಒಂದು ಸಣ್ಣ ಘಟನೆಯನ್ನೇ ದೊಡ್ಡದಾಗಿ ತೋರಿಸಲಾಗುತ್ತೆ ಎಂದು ಅಸಮಾಧಾನಿಸಿದ ಬಸವರಾಜ್ ಹೊರಟ್ಟಿ, ಕೆಲವೊಂದು ನಿಯಮ ರೂಪಿಸಲು ಮುಂದಾಗಿರುವ ಬಗ್ಗೆ ಸುಳಿವು ಕೊಟ್ಟರು.

    ಕೋಟಿ ಮೌಲ್ಯದ ಜಮೀನು ದಾನ ಕೊಡ್ತೀನಿ, ತಾಕತ್​ ಇದ್ರೆ ರಾಮಮಂದಿರ ಕಟ್ಟಿಸಿ: ಸಿದ್ದುಗೆ ರೈತನ ಸವಾಲು

    ಜೆಡಿಎಸ್​ಗೆ ವಿಧಾನಪರಿಷತ್​ ಸಭಾಪತಿ ಬಸವರಾಜ ಹೊರಟ್ಟಿ ರಾಜೀನಾಮೆ

    ಪಾಲಕರು ಬೆಂಗಳೂರಿಗೆ ಹೊರಟ ಬೆನ್ನಲ್ಲೇ ಎಂಬಿಬಿಎಸ್​ ವಿದ್ಯಾರ್ಥಿನಿ ಸಾವಿನ ಮನೆಯ ಕದ ತಟ್ಟಿದ್ದೇಕೆ?

    ವಿವಾಹಿತೆ ಜತೆ ಯುವಕನ ಸಲ್ಲಾಪ, ತಡರಾತ್ರಿ ಸಿಕ್ಕಿಬಿದ್ದ ಜೋಡಿಯನ್ನ ಟ್ರ್ಯಾಕ್ಟರ್​ಗೆ ಕಟ್ಟಿಹಾಕಿದ ಗ್ರಾಮಸ್ಥರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts