More

    ‘ಸರ್ಕಾರದ ದುಷ್ಕರ್ಮಗಳಿಗೆ ಪಶ್ಚಾತ್ತಾಪ’ ಎಂದು ತಲೆಬೋಳಿಸಿಕೊಂಡ ಶಾಸಕ

    ಅಗರ್ತಲ: ಬಹುಕಾಲದಿಂದ ಬಿಜೆಪಿ ನಾಯಕರಾಗಿದ್ದ ತ್ರಿಪುರಾದ ಶಾಸಕ ಆಶಿಶ್​ ದಾಸ್​, ಪಕ್ಷವನ್ನು ತ್ಯಜಿಸುವುದಾಗಿ ಹೇಳಿದ್ದಾರೆ. ರಾಜ್ಯದ ಬಿಜೆಪಿ ಸರ್ಕಾರದ ‘ದುಷ್ಕರ್ಮಗಳಿಗೆ ಪಶ್ಚಾತ್ತಾಪವಾಗಿ’ ತಲೆ ಬೋಳಿಸಿಕೊಂಡು ಸುದ್ದಿ ಮಾಡಿದ್ದಾರೆ. ಜೊತೆಗೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು “ಬಹುತೇಕ ಸರ್ಕಾರಿ ಆಸ್ತಿಗಳನ್ನು ಖಾಸಗಿ ಸಂಸ್ಥೆಗಳಿಗೆ ಮಾರುತ್ತಿದ್ದಾರೆ” ಎಂದು ಟೀಕಿಸಿದ್ದಾರೆ.

    ಉತ್ತರ ತ್ರಿಪುರಾದ ಸುರ್ಮಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಆಶಿಶ್​ ದಾಸ್​, ಕಳೆದ ಎರಡು ವರ್ಷಗಳಿಂದ ರಾಜ್ಯದ ಸಿಎಂ ಬಿಪ್ಲಬ್​ ದೇಬ್​ ಅವರ ಬಗ್ಗೆ ತೀವ್ರ ಅಸಮಾಧಾನ ಹೊರಹಾಕುತ್ತಾ ಬಂದಿದ್ದರು. ಇತ್ತೀಚೆಗೆ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಅತಿಶಯವಾಗಿ ಪ್ರಶಂಸಿಸಿ, ಅವರು ಮುಂದಿನ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಲು ಯೋಗ್ಯರು ಎಂದು ಹೇಳಿದ್ದರು.

    ಇದನ್ನೂ ಓದಿ: ಹಬ್ಬದ ಹೊಸ್ತಿಲಲ್ಲೇ ಜನಸಾಮಾನ್ಯರಿಗೆ ದರ ಏರಿಕೆ ಬಿಸಿ: ಗೃಹಬಳಕೆ LPG ಸಿಲಿಂಡರ್​ ಬೆಲೆಯಲ್ಲಿ ಮತ್ತೆ 15 ರೂ. ಏರಿಕೆ

    ಮಂಗಳವಾರ, ಸಾರ್ವಜನಿಕವಾಗಿ ತಲೆ ಬೋಳಿಸಿಕೊಂಡ ದಾಸ್​, ಕೊಲ್ಕತಾದ ಕಾಲಿಘಾಟ್​ ದೇವಸ್ಥಾನದಲ್ಲಿ ಯಜ್ಞವನ್ನೂ ಕೈಗೊಂಡರು. ತಾವು ತ್ರಿಪುರ ಸರ್ಕಾರದ ‘ಕೆಟ್ಟ ಕೆಲಸಗಳಿಗೆ ಪಶ್ಚಾತ್ತಾಪವಾಗಿ’ ಈ ರೀತಿಯಾಗಿ ಮಾಡುತ್ತಿರುವುದಾಗಿ ಹೇಳಿದ ಅವರು, “ರಾಜ್ಯದಲ್ಲಿ ಬಿಜೆಪಿ ಸರ್ಕಾರದ ದುರಾಡಳಿತದಿಂದ ನನಗೆ ತುಂಬಾ ದುಃಖವಾಗಿದೆ. ನಾನು ಅದರ ವಿರೋಧ ಮಾಡುತ್ತಾ ಬಂದಿದ್ದು, ಪಕ್ಷಾತೀತವಾಗಿ ಮತ್ತು ರಾಜಕೀಯ ಬಿಟ್ಟು ಜನರಿಗಾಗಿ ಕೆಲಸ ಮಾಡುತ್ತಿದ್ದೇನೆ” ಎಂದರು.

    ತ್ರಿಪುರಾದಲ್ಲಿ ಬಿಜೆಪಿ, ‘ರಾಜಕೀಯ ಅರಾಜಕತೆ ಮತ್ತು ಅವ್ಯವಸ್ಥೆ’ಯನ್ನು ಬೆಳೆಸುತ್ತಿದೆ ಎಂದು ಆರೋಪಿಸಿರುವ ದಾಸ್​, ರಾಜ್ಯ ಸರ್ಕಾರದ ಕಾರ್ಯವೈಖರಿಯಿಂದ ಜನರು ಅತೃಪ್ತರಾಗಿದ್ದಾರೆ. ಆದ್ದರಿಂದ ತಾವು ಪಕ್ಷವನ್ನು ತೊರೆಯಲು ನಿರ್ಧರಿಸಿರುವಾಗಿ ಹೇಳಿದ್ದಾರೆ. ದಾಸ್​ ಶೀಘ್ರದಲ್ಲಿಯೇ, ತ್ರಿಪುರಾದಲ್ಲಿ ಅಧಿಕಾರ ಗಳಿಸುವ ಯೋಜನೆ ಹೊಂದಿದ ತೃಣಮೂಲ ಕಾಂಗ್ರೆಸ್​ ಸೇರಬಹುದು ಎನ್ನಲಾಗಿದೆ. ಮತ್ತೊಂದೆಡೆ, ರಾಜ್ಯ ಬಿಜೆಪಿ, ದಾಸ್​ ವಿರುದ್ಧ ಶಿಸ್ತಿನ ಕ್ರಮ ತೆಗೆದುಕೊಳ್ಳಲಿದೆ ಎಂದು ಪಕ್ಷದ ಮೂಲಗಳು ಹೇಳಿವೆ. (ಏಜೆನ್ಸೀಸ್)

    ಯುಪಿ ಘರ್ಷಣೆ: ‘ನಾನು ಅಲ್ಲಿರಲೇ ಇಲ್ಲ’ ಎಂದ ಕೇಂದ್ರ ಸಚಿವರ ಮಗ! ಘಟನೆ ಬಗ್ಗೆ ಹೇಳಿದ್ದೇನು?

    ತಾಯಿಯ ಕೊಲೆ ಪ್ರಕರಣ: ನೆಟ್​ಫ್ಲಿಕ್ಸ್​​​ನಲ್ಲಿ ಪ್ರಸಾರಕ್ಕೆ ಹೈಕೋರ್ಟ್​ ತಡೆಯಾಜ್ಞೆ

    ವಿವಾದಿತ ಕೃಷಿ ಕಾನೂನುಗಳ ಬಗ್ಗೆ ಮನಬಿಚ್ಚಿ ಮಾತಾಡಿದ ಪ್ರಧಾನಿ ಮೋದಿ… ಏನೆಂದರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts