More

  ಬಂಧನದ ಬೆನ್ನಿಗೇ ಮಾಡಾಳ್​ಗೆ ಎದೆನೋವು!; ‘ನಾನು ಹಾರ್ಟ್ ಪೇಷಂಟ್, ಎದೆನೋವು ಬರ್ತಿದೆ’ ಎನ್ನುತ್ತಿರುವ ಶಾಸಕ

  ಬೆಂಗಳೂರು: ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ತುಮಕೂರಿನ ಕ್ಯಾತಸಂದ್ರ ಟೋಲ್ ಬಳಿ ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ. ಆದರೆ ಇಲ್ಲಿಗೆ ಬರುತ್ತಿದ್ದಂತೆ ಮಾಡಾಳ್ ಹೈಡ್ರಾಮಾ ಶುರುವಾಗಿದೆ ಎನ್ನಲಾಗಿದೆ.

  ಇದನ್ನೂ ಓದಿ: ಅಂದು ‘ಎಲ್ಲೂ ಹೋಗಿಲ್ಲ, ಮನೆಯಲ್ಲೇ ಇದ್ದೆ’ ಎಂದಿದ್ದ ಮಾಡಾಳ್ ಇಂದು ಮತ್ತೆ ನಾಪತ್ತೆ!

  ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿರುವ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಬೌರಿಂಗ್ ಆಸ್ಪತ್ರೆ ಬಳಿಗೆ ಕರೆತಂದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಅವರು ‘ನನಗೆ ಎದೆನೋವು’ ಎಂದು ಹೇಳಲಾರಂಭಿಸಿದ್ದಾರೆ. ‘ನಾನು ಹಾರ್ಟ್​ಪೇಷಂಟ್, ನನಗೆ ಎದೆನೋವು ಬರುತ್ತಿದೆ’ ಎಂದು ಮಾಡಾಳ್ ವರಾತ ತೆಗೆದಿದ್ದಾರೆ.

  ಇದನ್ನೂ ಓದಿ: ಮಾಡಾಳ್ ಬಂಧನದ ಹಿಂದಿತ್ತು 20ಕ್ಕೂ ಅಧಿಕ ಲೋಕಾಯುಕ್ತ ಪೊಲೀಸರ ಸತತ 3 ಗಂಟೆಗಳ ಕಸರತ್ತು: ಇಲ್ಲಿದೆ ವಿವರ..​

  ಮಾಡಾಳ್ ಅವರನ್ನು ಚಿಕಿತ್ಸೆಗಾಗಿ ಜಯದೇವ ಆಸ್ಪತ್ರೆಗೆ ದಾಖಲಿಸಬೇಕೋ ಬೇಡವೋ ಎಂದು ಲೋಕಾಯುಕ್ತ ಪೊಲೀಸರು ಇನ್ನಷ್ಟೇ ನಿರ್ಧರಿಸಬೇಕಾಗಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಂತರ ವೈದ್ಯರ ಸಲಹೆ ಮೇರೆಗೆ ಆ ಬಗ್ಗೆ ಲೋಕಾಯುಕ್ತ ಪೊಲೀಸರು ನಿರ್ಧರಿಸಲಿದ್ದಾರೆ.

  ಪ್ಯಾನ್-ಆಧಾರ್ ಲಿಂಕ್​, ಮಾ. 31 ಕಡೇ ದಿನ: ಸ್ಟೇಟಸ್​ ಚೆಕ್ ಮಾಡಿಕೊಳ್ಳುವುದು ಹೇಗೆ?

  ಬಾಯ್ಬಿಟ್ಟು ಕೆಟ್ಟಳು ಕಿಡ್ನ್ಯಾಪ್ ಮಾಡಿದ್ದ ಮಹಿಳೆ; ಸಿಕ್ಕಿ ಹಾಕಿಕೊಳ್ಳುವಂತೆ ಮಾಡಿತು ‘ಹಾಲು-ಉಪ್ಪಿಟ್ಟು’!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts