More

    ಬಿಜೆಪಿ ಸೇರಿದ ಗ್ರಾಪಂ ಸದಸ್ಯರು: ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಶಾಸಕ ಎಂ.ಕೃಷ್ಣಪ್ಪಗೆ ಬೆಂಬಲ

    ಬೆಂಗಳೂರು ದಕ್ಷಿಣ: ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬನ್ನೇರುಘಟ್ಟ ಗ್ರಾಮ ಪಂಚಾಯಿತಿ ಸದಸ್ಯರಾದ ಮೋಹನ್ ಸಿಂಗ್ ಮತ್ತು ತ್ಯಾಗರಾಜ್ ನೇತೃತ್ವದಲ್ಲಿ ಅನ್ಯ ಪಕ್ಷದ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ತತ್ವ ಸಿದ್ಧಾಂತ ಒಪ್ಪಿ ಶಾಸಕ ಎಂ. ಕೃಷ್ಣಪ್ಪ ಸಮ್ಮುಖದಲ್ಲಿ ‘ಕಮಲ’ ಪಕ್ಷಕ್ಕೆ ಸೇರ್ಪಡೆಗೊಂಡರು.

    ನಂತರ ಮಾತನಾಡಿದ ಎಂ. ಕೃಷ್ಣಪ್ಪ, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಡಬಲ್ ಇಂಜಿನ್ ಸರ್ಕಾರದ ಯೋಜನೆಗಳು, ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ಮನಗಂಡು ಅನ್ಯ ಪಕ್ಷದ ಹಲವಾರು ಮುಖಂಡರು ‘ಬಿಜೆಪಿಯೇ ಭರವಸೆ’ ಎಂದು ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಆನೆಬಲ ಬಂದಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

    ಇದನ್ನೂ ಓದಿ: ಭ್ರಷ್ಟ ಸಿಎಂ ಎಂದ ಸಿದ್ದರಾಮಯ್ಯಗೆ ಟ್ವೀಟ್​ ಮೂಲಕ ಬಸವರಾಜ ಬೊಮ್ಮಾಯಿ ತಿರುಗೇಟು

    ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ನೆರೆವಿನಿಂದ ಕ್ಷೇತ್ರ ವ್ಯಾಪ್ತಿಯಲ್ಲಿ ಮತಯಾಚನೆ ವೇಳೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ಅಭಿವೃದ್ಧಿ ಕಾರ್ಯಗಳ ಮಾನದಂಡದ ಆಧಾರದಲ್ಲಿ ಮತಯಾಚನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

    ಉತ್ತರಹಳ್ಳಿ ವಾರ್ಡ್​ನ ಮಗೆ ಕೆರೆ, ಬೃಂದಾವನ ಹೋಟೆಲ್, ರಾಮಾಂಜನೇಯನಗರ ಹಾಗೂ ಗೊಟ್ಟಿಗೆರೆ ವಾರ್ಡ್​ನ ವಡ್ಡರಪಾಳ್ಯ ಸೇರಿ ಹಲವೆಡೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಾರ್ವಜನಿಕರಿಗೆ ಸಂಕ್ಷಿಪ್ತವಾಗಿ ತಿಳಿಸಿ ಮತಯಾಚನೆ ನಡೆಸಲಾಯಿತು. ಬಿಬಿಎಂಪಿ ಮಾಜಿ ಸದಸ್ಯರಾದ ಕೆ. ರಮೇಶ್​ರಾಜು, ಕೆ. ಸೋಮಶೇಖರ್, ಮುಖಂಡರಾದ ಬನ್ನೇರುಘಟ್ಟ ಜಯರಾಮ್ ಬಾಬು ಸಿಂಗ್, ವಿಜಯ್ಕುಮಾರ್, ಟಿ. ನಾರಾಯಣ್, ಜಯರಾಮ್ ಸುಬ್ರಮಣಿ, ರಾಜು ಇತರರಿದ್ದರು.

    ಭ್ರಷ್ಟ ಸಿಎಂ ಎಂದ ಸಿದ್ದರಾಮಯ್ಯಗೆ ಟ್ವೀಟ್​ ಮೂಲಕ ಬಸವರಾಜ ಬೊಮ್ಮಾಯಿ ತಿರುಗೇಟು

    ಸುಲಭವಾಗಿ ಗೆಲ್ಲುವ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಬಿಕ್ಕಟ್ಟು: ಈ ಎರಡು ಕ್ಷೇತ್ರಗಳಲ್ಲಿ ಈಗ ತ್ರಿಕೋನ ಕದನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts