More

    ಸುಲಭವಾಗಿ ಗೆಲ್ಲುವ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಬಿಕ್ಕಟ್ಟು: ಈ ಎರಡು ಕ್ಷೇತ್ರಗಳಲ್ಲಿ ಈಗ ತ್ರಿಕೋನ ಕದನ

    ಮಂಡ್ಯ: ಜೆಡಿಎಸ್​ ಭಧ್ರಕೋಟೆ ಎಂದೇ ಕರೆಯಲಾಗುವ ಮಂಡ್ಯದಲ್ಲಿ ದಳಪತಿಗಳಿಗೆ ಬಂಡಾಯ ಬಿಸಿ ಎದುರಾಗಿದೆ. ವರಿಷ್ಟರು ಮಾಡಿಕೊಂಡ ತಪ್ಪಿನಿಂದ ಸುಲಭವಾಗಿ ಗೆಲ್ಲುವ ಮಂಡ್ಯ ಕ್ಷೇತ್ರ ಜೆಡಿಎಸ್​ ಪಾಲಿಗೆ ಕಗ್ಗಂಟಾಗುವ ಸಾಧ್ಯತೆ ಇದೆ.

    ಪಕ್ಷದಲ್ಲಿ ಬಂಡಾಯ ಎದ್ದರು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕೈ ಕಟ್ಟಿ ಕುಳಿತಿದ್ದು, ಜೆಡಿಎಸ್‌ ಬಂಡಾಯ ನಾಯಕರು ಬಿಜೆಪಿ, ಕಾಂಗ್ರೆಸ್ ಹಾಗೂ ಪಕ್ಷೇತರದ ಕಡೆ ಮುಖ ಮಾಡುತ್ತಿದ್ದಾರೆ. ಮಂಡ್ಯ ಹಾಗೂ ಕೆ.ಆರ್.ಪೇಟೆ ಕ್ಷೇತ್ರಗಳಲ್ಲಿ ಜೆಡಿಎಸ್​ಗೆ ಬಂಡಾಯದ ಕಾವು ಜೋರಾಗಿದೆ.

    ಇದನ್ನೂ ಓದಿ: ಏರುಗತಿಯಲ್ಲಿ ಬಿಜೆಪಿ ಮತಗಳಿಕೆ: 2ರಿಂದ 110 ಶಾಸಕರ ತನಕ ಕಮಲ ಪಯಣ; ಕಾಂಗ್ರೆಸ್, ಜನತಾಪಕ್ಷದ್ದೂ ದಾಖಲೆ

    ಜೆಡಿಎಸ್‌ ಸೋಲಿಸಲು ಪ್ಲಾನ್

    ಜೆಡಿಎಸ್‌ಗೆ ಸುಲಭವಾಗಿದ್ದ ಈ ಎರಡು ಕ್ಷೇತ್ರಗಳಲ್ಲಿ ಈಗ ತ್ರಿಕೋನದ ಆಟ ಏರ್ಪಟ್ಟಿದೆ. ಹೀಗಾಗಿ ಈ ಎರಡು ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಗಳಲ್ಲಿ ಬಂಡಾಯದ ನಡುಕ ಶುರುವಾಗಿದೆ. ಮಂಡ್ಯ ಕ್ಷೇತ್ರದಲ್ಲಿ ಶಾಸಕ ಎಂ.ಶ್ರೀನಿವಾಸ್ ಹಾಗೂ ಅವರ ತಂಡ ಬಂಡಾಯ ಎದ್ದಿದೆ. ಶ್ರೀನಿವಾಸ್ ಅಳಿಯ ಯೋಗೇಶ್ ಅಥವಾ ವಿಜಯಾನಂದ ಇಬ್ಬರಲ್ಲಿ ಒಬ್ಬರನ್ನು ಮಂಡ್ಯದಿಂದ ಪಕ್ಷೇತರವಾಗಿ ಕಣಕ್ಕಿಳಿಸಿ ಜೆಡಿಎಸ್‌ ಸೋಲಿಸಲು ಪ್ಲಾನ್ ಮಾಡಲಾಗಿದೆ.

    ಬಿಜೆಪಿ ಕಡೆ ಮುಖ

    ಶ್ರೀನಿವಾಸ್ ಬಂಡಾಯದಿಂದ ಮಂಡ್ಯದಲ್ಲಿ ಜೆಡಿಎಸ್‌ ಮೂರನೇ ಸ್ಥಾನಕ್ಕೆ ಕುಸಿಯುವ ಭೀತಿ ಉಂಟಾಗಿದೆ. ಇತ್ತ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸೋಲಿಸಲು ಕಹಳೆ ಮೊಹಳಗಿದೆ. ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿ ಅಭ್ಯರ್ಥಿಯಾಗಿರುವ ದೇವರಾಜು ಜತೆ ಹಲವು ನಾಯಕರು ನಿಂತಿದ್ದಾರೆ. ಇತ್ತ ಬಿಜೆಪಿ ಅಭ್ಯರ್ಥಿ ನಾರಾಯಣಗೌಡರಿಂದ ಹಲವು ಮುಖಂಡರ ಆಪರೇಷನ್ ನಡೆದಿದೆ. ಬಸ್ ಸಂತೋಷ್ ಅಂಡ್ ಟೀಮ್ ಸೇರಿದಂತೆ ಹಲವರು ಬಿಜೆಪಿ ಕಡೆ ಮುಖ ಮಾಡಿದ್ದಾರೆ.

    ಇದನ್ನೂ ಓದಿ: ಶೀಘ್ರವೇ ಬರಲಿದೆ ನೂರು ರೂಪಾಯಿ ನಾಣ್ಯ; ಯಾವಾಗ, ಹೇಗಿರಲಿದೆ?

    ತ್ರಿಕೋನ ಕದನ

    ಈ ಬಾರಿಯೂ ಉಪಚುನಾವಣೆಯ ರೀತಿ ಕೆ.ಆರ್.ಪೇಟೆಯಲ್ಲಿ ತ್ರಿಕೋನ ಕದನ ನಡೆಯಲಿದೆ. ಮುಖಂಡರು ಪಕ್ಷ ಬಿಟ್ಟು ಹೋಗುತ್ತಿದ್ದರು ವರಿಷ್ಠರು ನಿರ್ಲಕ್ಷ್ಯ ವಹಿಸಿರುವುದನ್ನು ನೋಡಿ ಕಾರ್ಯಕರ್ತರು ಬೇಸರ ಹೊರಹಾಕಿದ್ದಾರೆ. (ದಿಗ್ವಿಜಯ ನ್ಯೂಸ್​)

    ಭ್ರಷ್ಟ ಸಿಎಂ ಎಂದ ಸಿದ್ದರಾಮಯ್ಯಗೆ ಟ್ವೀಟ್​ ಮೂಲಕ ಬಸವರಾಜ ಬೊಮ್ಮಾಯಿ ತಿರುಗೇಟು

    ಮದುವೆ ಆಗಲು ಇಷ್ಟವಿಲ್ಲ ಆದರೆ ಇದು ಓಕೆ! ಸೌಂದರ್ಯದ ಗಣಿ ಹನಿ ರೋಸ್​ ಅಚ್ಚರಿಯ ಹೇಳಿಕೆ

    ಹೋಟೆಲ್​ ರೂಮಲ್ಲಿ ಸಿಕ್ಕಿಬಿದ್ದ ನಟಿ ಆರತಿಗೆ ಬಾಲಿವುಡ್ ಲಿಂಕ್​ ಹಿಂದಿರುವ ಕರಾಳತೆ ಬಯಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts