More

    ಏರುಗತಿಯಲ್ಲಿ ಬಿಜೆಪಿ ಮತಗಳಿಕೆ: 2ರಿಂದ 110 ಶಾಸಕರ ತನಕ ಕಮಲ ಪಯಣ; ಕಾಂಗ್ರೆಸ್, ಜನತಾಪಕ್ಷದ್ದೂ ದಾಖಲೆ

    | ಶಿವಾನಂದ ತಗಡೂರು, ಬೆಂಗಳೂರು

    ರಾಜ್ಯದಲ್ಲಿ ಜನಸಂಘದ ಮೂಲಕ ಪ್ರಾರಂಭವಾದ ಬಿಜೆಪಿ ಪಯಣ, ನಿಧಾನವಾಗಿ ಪಕ್ಷವನ್ನು ಬಲಗೊಳಿಸುತ್ತಾ ಬಂದಿದ್ದು, 18 ಶಾಸಕರಿಂದ ಆರಂಭವಾದ ಜರ್ನಿ ಅಧಿಕಾರದ ಗದ್ದುಗೆ ಏರುವ ಹಂತದವರೆಗೆ ಬಂದಿದ್ದು ರೋಚಕ.

    1983ರಲ್ಲಿ 18 ಸ್ಥಾನಗಳನ್ನು ಪಡೆದಿದ್ದು, 1985ರಲ್ಲಿ ಪಕ್ಷದ ಮತಗಳಿಕೆ ಪ್ರಮಾಣ ಶೇ.3.88ಕ್ಕೆ ತಗ್ಗಿತು. ಆಗ ಕೇವಲ ಇಬ್ಬರು ಶಾಸಕರನ್ನು ಮಾತ್ರ ಗೆಲ್ಲಲು ಸಾಧ್ಯವಾಗಿತ್ತು. 1989ರಲ್ಲಿ ಶೇ.4.14 ಮತ ಪಡೆಯುವ ಮೂಲಕ ಶಾಸಕರ ಸಂಖ್ಯೆಯನ್ನು 4ಕ್ಕೆ ಹೆಚ್ಚಿಸಿಕೊಂಡಿತ್ತು. ಅಲ್ಲಿಂದ ಮುಂದಕ್ಕೆ 1994ರಲ್ಲಿ ಬಿಜೆಪಿ ಮತಗಳಿಕೆ ಪ್ರಮಾಣ ಶೇ.20.69ಕ್ಕೆ ಜಿಗಿದು 44 ಶಾಸಕರು ಗೆಲ್ಲಲು ಸಾಧ್ಯವಾಯಿತು. ಮುಂದೆ ಮತಗಳಿಕೆ ಪ್ರಮಾಣ ಹೆಚ್ಚುತ್ತಲೇ ಹೋಗಿದೆ.

    ಅನುಕಂಪ ತಂದ ಮತದ ಬೆಳೆ: 2004 ವಿಧಾನಸಭೆ ಚುನಾವಣೆ ಸಮ್ಮಿಶ್ರ ಸರ್ಕಾರಕ್ಕೆ ನಾಂದಿಯಾಡಿತು. ಯಾವ ಪಕ್ಷಕ್ಕೂ ನಿಚ್ಚಳ ಬಹುಮತ ಬಾರದ ಕಾರಣ, ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಿತ್ತು. 2006ರಲ್ಲಿ ಕ್ಷಿಪ್ರ ರಾಜಕೀಯ ಕ್ರಾಂತಿ ನಡೆದು ಎಚ್.ಡಿ.ಕುಮಾರಸ್ವಾಮಿ ನೇತೃತ್ವದ 20:20 ತಿಂಗಳ ಅಧಿಕಾರ ಹಂಚಿಕೆ ಸೂತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಸರ್ಕಾರ ರಚನೆಯಾಯಿತು. ಒಪ್ಪಂದದಂತೆ

    2008ರಲ್ಲಿ ಜೆಡಿಎಸ್ ಬಿಜೆಪಿಗೆ ಅಧಿಕಾರ ಬಿಟ್ಟುಕೊಡದ ಪರಿಣಾಮ ಯಡಿಯೂರಪ್ಪ ಪರ ಅನುಕಂಪ ಸೃಷ್ಟಿಯಾಯಿತು. ಅದರ ಪರಿಣಾಮವಾಗಿ ಮೊಟ್ಟಮೊದಲ ಬಾರಿಗೆ ಶೇ.33.86 ಮತ ಪಡೆದು ಬಿಜೆಪಿ 110 ಸ್ಥಾನಗಳಲ್ಲಿ ಗೆದ್ದು ಹೊಸ ದಾಖಲೆ ಸೃಷ್ಟಿಸಿರು. ಅಷ್ಟೆ ಅಲ್ಲ, ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಸಾಧ್ಯವಾಯಿತು.

    ಕೆಜೆಪಿ, ಬಿಎಸ್​ಆರ್ ಎಫೆಕ್ಟ್!: ಆದರೆ 2013ರಲ್ಲಿ ಬಿಜೆಪಿಯಿಂದ ಯಡಿಯೂರಪ್ಪ ಆಚೆ ಹೋಗಿ ಕೆಜೆಪಿ ಹಾಗೂ ಬಿ. ಶ್ರೀರಾಮುಲು ಬಿಎಸ್​ಆರ್ ಪಕ್ಷ ಕಟ್ಟಿದ್ದರಿಂದ ಬಿಜೆಪಿ ಮತಗಳಿಕೆ 19.09ಕ್ಕೆ ಕುಸಿಯಿತು. ಆಗ ಕೆಜೆಪಿ ಶೇ.10 ಮತ ಗಳಿಕೆ ಮಾಡಿ 6 ಶಾಸಕರನ್ನು ಗೆಲ್ಲಿಸಿಕೊಂಡಿತ್ತು. ಕೆಜೆಪಿ ಮತ ಮತ್ತು ಬಿಜೆಪಿ ಮತ ಗಳಿಕೆಯನ್ನು ಒಟ್ಟು ಸೇರಿಸಿದರೆ ಶೇ.30 ಮತಗಳು ಬಿಜೆಪಿ ಪರಿವಾರಕ್ಕೆ ಬಂದಂತಾಗಿತ್ತು. ಈ ಬಾರಿ ಬಿಜೆಪಿಯಿಂದ ಆಚೆ ಹೋಗಿರುವ ಜನಾರ್ಧನರೆಡ್ಡಿ ಮಾತ್ರ ಹೊಸ ಪಕ್ಷ ಕಟ್ಟಿ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಅವರು ಎಷ್ಟು ಮತಗಳಿಕೆ ಮಾಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕು.

    ಏರುಗತಿಯಲ್ಲಿ ಬಿಜೆಪಿ ಮತಗಳಿಕೆ: 2ರಿಂದ 110 ಶಾಸಕರ ತನಕ ಕಮಲ ಪಯಣ; ಕಾಂಗ್ರೆಸ್, ಜನತಾಪಕ್ಷದ್ದೂ ದಾಖಲೆಮರಳಿದ ಬಿಎಸ್​ವೈ ವೃದ್ಧಿಸಿದ ಮತಗಳಿಕೆ: 2018ರ ಚುನಾವಣೆ ವೇಳೆಗೆ ಯಡಿಯೂರಪ್ಪ ವೈಮನಸ್ಸು ಬಿಟ್ಟು ಬಿಜೆಪಿಗೆ ಮರಳಿದ್ದರಿಂದ ಮತಗಳಿಕೆ ಪ್ರಮಾಣ ಮತ್ತೆ ಶೇ.36.35ಕ್ಕೆ ಏರಿಕೆಯಾಯಿತು. ಆ ಮೂಲಕ ಮತ್ತೊಮ್ಮೆ ಬಿಜೆಪಿ ಅಧಿಕಾರದ ಹೊಸ್ತಿಲಿಗೆ ಬಂದು ನಿಂತಿತ್ತು. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆಗೊಂಡಿತು. ಬಳಿಕ ಶಾಸಕರ ಆಪರೇಷನ್ ಮೂಲಕ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯಿತು.

    ಬಿಜೆಪಿ ಮತಗಳಿಕೆ ಹೆಚ್ಚಿಸುವುದೆ?: ಮೂರೂವರೆ ವರ್ಷದ ಆಡಳಿತದಲ್ಲಿ ಬಿಜೆಪಿ ಸಾಕಷ್ಟು ಶಕ್ತಿ ವೃದ್ಧಿಸಿಕೊಂಡಿದೆ. ಜನಪರವಾದ ಯೋಜನೆಗಳನ್ನು ಜಾರಿಗೊಳಿಸಿದೆ. ಚುನಾವಣಾ ರಾಜಕಾರಣವನ್ನು ಮಾಡಿದೆ. ಮೀಸಲಾತಿಯಲ್ಲಿಯೂ ಮತ ಬೆಳೆ ಬೆಳೆಯಲು ಯೋಜಿಸಿದೆ. ಅತಿ ಹೆಚ್ಚು ಬಾರಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ಸೇರಿ ಕೇಂದ್ರ ನಾಯಕರು ನಾನಾ ಕಾರ್ಯಕ್ರಮದ ನೆಪದಲ್ಲಿ ರಾಜ್ಯಕ್ಕೆ ಬಂದು ಹೋಗಿದ್ದಾರೆ. ಆದರೆ, ಮತದಾರ ಚುನಾವಣೆಯಲ್ಲಿ ಯಾವ ರೀತಿಯಲ್ಲಿ ಮಣೆ ಹಾಕುತ್ತಾನೆ ಎನ್ನುವುದು ಜನರಿಗೆ ಅಷ್ಟೆ ಅಲ್ಲ, ಪಕ್ಷದ ನಾಯಕರಿಗೂ ಕುತೂಹಲದ ಸಂಗತಿಯಾಗಿದೆ.

    ದಾಖಲೆಗಿಲ್ಲ ಸಾಟಿ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜನತಾ ಪಕ್ಷಗಳು ತಲಾ ಒಂದೊಂದು ಬಾರಿ ಶೇ.43 ಮತ ಪಡೆದಿರುವುದು ಈವರೆಗಿನ ದಾಖಲೆಯಾಗಿದೆ. ರಾಜ್ಯದಲ್ಲಿ ಕಳೆದ ಮೂರು ದಶಕಗಳಲ್ಲಿ ನಡೆದಿರುವ ಚುನಾವಣೆಯಲ್ಲಿ ಈ ದಾಖಲೆ ಸರಿಗಟ್ಟುವಷ್ಟು ಮತಗಳು ಯಾವ ಪಕ್ಷಕ್ಕೂ ಬಂದಿಲ್ಲ ಎನ್ನುವುದು ವಿಶೇಷ.

    1989ರಲ್ಲಿ 178 ಸ್ಥಾನಗಳನ್ನು ಪಡೆದಿದ್ದ ಕಾಂಗ್ರೆಸ್ ಶೇ.43.76 ಮತಗಳನ್ನು ಪಡೆದುಕೊಂಡಿತ್ತು. ನಂತರ 1985ರಲ್ಲಿ ನಡೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ 139 ಸ್ಥಾನಗಳನ್ನು ಗೆದ್ದಿದ್ದ ಜನತಾ ಪಕ್ಷ ಶೇ.43.60 ಮತಗಳನ್ನು ಪಡೆದುಕೊಂಡಿತ್ತು. ಇವೆರಡೂ ಚುನಾವಣೆಗಳೂ ಕಾಂಗ್ರೆಸ್ ಮತ್ತು ಜನತಾ ಪಕ್ಷದ ಪಾಲಿಗೆ ಮಹತ್ವದ ಚುನಾವಣೆಯಾಗಿಯೇ ಉಳಿದಿವೆ.

    ಸಿದ್ದರಾಮಯ್ಯ ಹೊತ್ತಿಸಿದ ಲಿಂಗಾಯತ ಕಿಡಿ: ಕೈ ನಾಯಕನ ವಿರುದ್ಧ ಕಮಲ ಪಡೆ ವಾಗ್ದಾಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts