More

    ಸಿದ್ದರಾಮಯ್ಯ ಹೊತ್ತಿಸಿದ ಲಿಂಗಾಯತ ಕಿಡಿ: ಕೈ ನಾಯಕನ ವಿರುದ್ಧ ಕಮಲ ಪಡೆ ವಾಗ್ದಾಳಿ

    ಬೆಂಗಳೂರು: ‘ಈಗಾಗಲೆ ಲಿಂಗಾಯತರೇ ಇಲ್ಲಿ ಚೀಫ್​ ಮಿನಿಸ್ಟರ್​ ಇದ್ದಾರಲ್ಲ, ಅವರೇ ಎಲ್ಲ ಭ್ರಷ್ಟಾಚಾರ ಮಾಡಿ ರಾಜ್ಯವನ್ನು ಹಾಳು ಮಾಡಿರುವುದು’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವರುಣದಲ್ಲಿ ಶನಿವಾರ ಪ್ರಚಾರದ ಸಂದರ್ಭದಲ್ಲಿ ಹೇಳಿಕೆ ನೀಡುವ ಮೂಲಕ “ಲಿಂಗಾಯತ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ’ ಎಂದು ಬಿಜೆಪಿ ಆರೋಪಿಸಿದೆ. ಆದರೆ, ತಾವು ಬಸವರಾಜ ಬೊಮ್ಮಾಯಿ ಕುರಿತು ಹೇಳಿದ್ದೇ ಹೊರತು ಬೇರೆಯವರ ಬಗ್ಗೆ ಅಲ್ಲ ಎಂದು ಸಿದ್ದರಾಮಯ್ಯ ಸಮಜಾಯಿಷಿ ನೀಡಿದ್ದಾರೆ.

    ವರುಣ ಕ್ಷೇತ್ರದ ಪ್ರಚಾರದಲ್ಲಿದ್ದ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡುವಾಗ ಸಿದ್ದರಾಮಯ್ಯ ಈ ರೀತಿ ಹೇಳಿದ ಮಾತುಗಳಿರುವ ವಿಡಿಯೋ ತುಣುಕು ವ್ಯಾಪಕವಾಗಿ ವೈರಲ್​ ಆಗಿದ್ದು, ಈ ಮಾತಿನ ನಿರೂಪಣೆ ಬೇರೆ ಅರ್ಥದಲ್ಲಿ ಹೊರಹೊಮ್ಮಲು ಆರಂಭವಾಗಿ ಬಿಸಿ ತಟ್ಟಲು ಆರಂಭವಾಗುತ್ತಿದ್ದಂತೆ ಸಿದ್ದರಾಮಯ್ಯ ಸ್ಪಷ್ಟನೆಯನ್ನೂ ನೀಡಿ, ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಸ್ಪಷ್ಟಪಡಿಸಿದರು.

    ಇದನ್ನೂ ಓದಿ: ತಾನೂ ಕೋಟ್ಯಧಿಪತಿ, ಮಕ್ಕಳಿಬ್ಬರೂ ಕೋಟ್ಯಧಿಪತಿ, ಹೆಂಡತಿಯೂ ಕೋಟಿ ರೂ. ಮೌಲ್ಯದ ಚಿನ್ನಾಭರಣದ ಒಡತಿ, ಆದ್ರೆ ಸ್ವಂತ ಕಾರಿಲ್ಲ!

    ಇನ್ನೊಂದೆಡೆ ಬಿಜೆಪಿಯು ಸಿದ್ದರಾಮಯ್ಯ ಮೇಲೆ ಮುಗಿಬಿದ್ದಿದೆ. ಈ ಹಿಂದೆ ವೀರಶೈವ ಲಿಂಗಾಯತ ಸಮಾಜವನ್ನು ಒಡೆಯಲು ಯತ್ನಿಸಿದ ಸಿದ್ದರಾಮಯ್ಯ, ಈಗ ಆ ಸಮುದಾಯದವರೆಲ್ಲ ಭ್ರಷ್ಟರು, ರಾಜ್ಯವನ್ನು ಹಾಳುಗೆಡವುವವರು ಎಂಬ ಸಂವೇದನಾರಹಿತ ದ್ವೇಷಪೂರಿತ ಹೇಳಿಕೆ ನೀಡಿರುವುದು ಅಕ್ಷಮ್ಯ. ಜಗದ್ಗುರು ಬಸವಣ್ಣನ ಆದರ್ಶ ಪಾಲಿಸುವ 7 ಕೋಟಿ ಕನ್ನಡಿಗರು, ಸಿದ್ದರಾಮಯ್ಯ ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಬಿಜೆಪಿ ಚಾಟಿ ಬೀಸಿತು.

    ಶಿಕಾರಿಪುರ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯಿಸಿ, ಲಿಂಗಾಯಿತರೆಲ್ಲಾ ಭ್ರಷ್ಟರು ಎಂದಿರುವ ಸಿದ್ದರಾಮಯ್ಯನವರೇ, ನಿಮ್ಮ ವಿವೇಕ ಸುಟ್ಟುಕೊಂಡ ಮನಸ್ಸು ಸಮುದಾಯ ನಿಂದನೆಯ ಮಾತನ್ನಾಡಿಸಿದೆ. 2018ರ ಚುನಾವಣೆಯಲ್ಲಿ ನಮ್ಮ ಸಮಾಜವನ್ನು ಇಬ್ಭಾಗ ಮಾಡಲು ಹೋಗಿ ಅನುಭವಿಸಿದ ನೋವು ಮರೆತು ಹೋಗಿ ಮತ್ತೆ ನೆನಪಿಸಿಕೊಂಡು ಆಡಿದ ಮಾತೇನೋ ಇದು ಎಂದು ಕುಟುಕಿದ್ದಾರೆ. ನಿಮ್ಮ ಹೇಳಿಕೆಯ ಫಲವನ್ನು ನೀವು ಮಾತ್ರವಲ್ಲ ನಿಮ್ಮ ಪಕ್ಷವೂ ಪಡೆಯಲಿದೆ. ಯಾಕೆಂದರೆ ತಾವು ತಾನೆ ಕಾಂಗ್ರೆಸ್​ನ ಭ್ರಮಿತ ಮುಖ್ಯಮಂತ್ರಿಯ ಅಭ್ಯರ್ಥಿ ಎಂದು ಮಾತಲ್ಲೇ ಚಿವುಟಿದ್ದಾರೆ.

    ಇದನ್ನೂ ಓದಿ: ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    ಸಿದ್ದು ಸ್ಪಷ್ಟನೆ: ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸುವಾಗ ಬಿಜೆಪಿಯವರು ಲಿಂಗಾಯತ ಅಸ್ತ್ರವನ್ನು ಪ್ರಯೋಗ ಮಾಡುತ್ತಿದ್ದಾರೆ ಎಂದು ಹೇಳಿದ್ದೆ, ಲಿಂಗಾಯತರು ಭ್ರಷ್ಟರು ಎಂದು ಎಲ್ಲಿಯೂ ಹೇಳಿಲ್ಲ. ಇದನ್ನು ವರದಿ ಮಾಡಿರುವುದು ಸರಿಯಾಗಿಲ್ಲ, ನನ್ನ ಮಾತನ್ನು ತಿರುಚಿ ಪ್ರಸಾರ ಮಾಡಲಾಗುತ್ತಿದೆ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

    ಲಿಂಗಾಯತರಲ್ಲಿ ಬಹಳಷ್ಟು ಮಂದಿ ಮುಖ್ಯಮಂತ್ರಿಗಳು ಅತ್ಯಂತ ಪ್ರಾಮಾಣಿಕರಿದ್ದರು. ವೀರೇಂದ್ರ ಪಾಟೀಲರು, ನಿಜಲಿಂಗಪ್ಪನವರು, ಜೆ.ಎಚ್​.ಪಟೇಲರು ಇವರೆಲ್ಲ ಪ್ರಾಮಾಣಿಕರಾಗಿದ್ದರು. ಆದರೆ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭ್ರಷ್ಟರಿದ್ದಾರೆ ಎಂದು ಹೇಳಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಲಿಂಗಾಯತರೆಲ್ಲಾ ಭ್ರಷ್ಟರು ಎಂದಿರುವ ಸಿದ್ದರಾಮಯ್ಯನವರೇ, ನಿಮ್ಮ ವಿವೇಕ ಸುಟ್ಟುಕೊಂಡ ಮನಸ್ಸು ಸಮುದಾಯದ ನಿಂದನೆಯ ಮಾತನಾಡಿಸಿದೆ.
    | ಬಿ.ವೈ.ವಿಜಯೇಂದ್ರ, ಬಿಜೆಪಿ ಅಭ್ಯರ್ಥಿ

    ಬಸವರಾಜ ಬೊಮ್ಮಾಯಿ ಅವರಿಗೆ ಸೀಮಿತವಾಗಿ ಭ್ರಷ್ಟ ಎಂದು ಹೇಳಿದ್ದೆ, ಲಿಂಗಾಯತರು ಭ್ರಷ್ಟರು ಎಂದು ಎಲ್ಲಿಯೂ ಹೇಳಿಲ್ಲ.
    | ಸಿದ್ದರಾಮಯ್ಯ, ಮಾಜಿ ಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts